Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ‘...ರೆ’ ದೇಸಾಯಿಗೆ ಬಿಡುಗಡೆ ನೀಡಬಹುದೆ?

‘...ರೆ’ ದೇಸಾಯಿಗೆ ಬಿಡುಗಡೆ ನೀಡಬಹುದೆ?

ಮುಶಾಫಿರ್ಮುಶಾಫಿರ್5 March 2016 11:38 PM IST
share
‘...ರೆ’ ದೇಸಾಯಿಗೆ ಬಿಡುಗಡೆ ನೀಡಬಹುದೆ?

ಸುನೀಲ್ ಕುಮಾರ್ ದೇಸಾಯಿಯವರ ಸಿನೇಮಾ ‘ತರ್ಕ’ಗಳು ಸದಾ ವಿಭಿನ್ನವಾಗಿರುತ್ತದೆ. ವಿಶಿಷ್ಟವಾ ಗಿರುತ್ತದೆ. ಕನ್ನಡ ಚಿತ್ರ ಏಕತಾನತೆಯಿಂದ ನರಳುತ್ತಿದ್ದಾಗ ‘ತರ್ಕ’ ಎನ್ನುವ ಸಸ್ಪೆನ್ಸ್ ಅಂದರೆ ಇಂಗ್ಲಿಷ್ ಮಾದರಿಯ ಚಿತ್ರದೊಂದಿಗೆ ಗಾಂಧಿನಗರವನ್ನು ಪ್ರವೇಶಿಸಿದರು. ಮೂಲಕವೇ ಭರವಸೆಯ ನಿದೇಶಕರಾಗಿ ಹೊರ ಬಂದರು. ಇದಾದ ಬಳಿಕ ‘ಉತ್ಕರ್ಷ’ ಎನ್ನುವ ಇನ್ನೊಂದು ಹಾಲಿವುಡ್ ಮಾದರಿಯ ಕಥಾಹಂದರವುಳ್ಳ, ಹಾಡು, ನೃತ್ಯಗಳಿಲ್ಲದ ಥ್ರಿಲ್ಲರ್ ಚಿತ್ರವನ್ನು ನಿರ್ದೇಶಿಸಿದರು. ಅತೀ ಹಿಂಸೆ ಮತ್ತು ಅಶ್ಲೀಲತೆಯ ಕಾರಣಕ್ಕಾಗಿ ಈ ಚಿತ್ರ ತೀವ್ರ ಟೀಕೆಗೆ ಗುರಿಯಾಯಿತು. ಮೂರನೆಯ ಚಿತ್ರದಲ್ಲಿ ವಿಷ್ಣುವರ್ಧನ್ ಅವರನ್ನು ನಾಯಕನನ್ನಾಗಿಸಿ ‘ಸಂಘರ್ಷ’ ಚಿತ್ರವನ್ನು ನಿರ್ದೇಶಿಸಿದರು. ಸೇಡಿನ ವಿಭಿನ್ನ ಕತೆ ಇದು. ಆದರೆ ಈ ಹಿಂದಿನ ಚಿತ್ರಗಳಂತೆ ಇದು ಸುದ್ದಿಯಾಗಲಿಲ್ಲ. ಬಾಕ್ಸ್ ಆಫೀಸ್‌ನಲ್ಲೂ ದುಡ್ಡು ಮಾಡಲಿಲ್ಲ. ಆದರೆ ಇದರ ನಂತರ ಬಂದ ನಿಷ್ಕರ್ಷ ಮಾತ್ರ ಕನ್ನಡ ಚಿತ್ರೋದ್ಯಮದಲ್ಲಿ ಸಂಚಲನವನ್ನುಂಟು ಮಾಡಿತು. ಬ್ಯಾಂಕ್ ದರೋಡೆಕೋರರ ಮಧ್ಯೆ ಬೃಹತ್ ಕಟ್ಟಡದಲ್ಲಿ ಸಿಲುಕಿಕೊಂಡ ಜನರನ್ನು ಓರ್ವ ಕೇವಲ 48 ಗಂಟೆಗಳಲ್ಲಿ ಹೇಗೆ ಪಾರು ಮಾಡುತ್ತಾನೆ ಎನ್ನುವ ಥ್ರಿಲ್ಲರ್. ಆದರೆ ಇದೇ ಸಂದರ್ಭದಲ್ಲಿ ತಾನು ಕೇವಲ ಥ್ರಿಲ್ಲರ್ ಕತೆಗಳಿಗೆ ಬ್ರಾಂಡ್ ಆಗುತ್ತಿರುವುದನ್ನು ಗಮನಿಸಿದ ಸುನೀಲ್ ಕುಮಾರ್ ಏಕಾಏಕಿ ತನ್ನ ಹಾದಿಯನ್ನು ಬದಲಿಸುತ್ತಾರೆ. ಪರಿಣಾ ಮವಾಗಿ ಕನ್ನಡಕ್ಕೆ ಒಂದು ಅಪರೂಪದ ಪ್ರೇಮ ಕಥಾನಕ ವೊಂದು ಒದಗಿ ಬರುತ್ತದೆ. ಅದರ ಹೆಸರೇ ‘ಬೆಳದಿಂಗಳ ಬಾಲೆ’. ಖ್ಯಾತ ತೆಲುಗು ಕಾದಂಬರಿಕಾರ ಯಂಡಮೂರಿ ವೀರೇಂದ್ರ ನಾಥ್ ಕಾದಂಬರಿ ಆಧಾರಿತ ಚಿತ್ರ ಇದು. ಚೆಸ್ ಚಾಂಪಿಯನ್ ಒಬ್ಬ, ತನಗೆ ಬರುವ ಅನಾಮಿಕ ಹುಡುಗಿಯ ಕರೆಯನ್ನು ಬೆನ್ನು ಹತ್ತುವ ಕತೆ ಇದು. ಅತ್ಯಂತ ಹೃದಯಸ್ಪರ್ಶಿಯಾಗಿರುವ ಕಥಾವಸ್ತುವನ್ನು ಇದು ಹೊಂದಿದೆ. ಹಾಗೆಯೇ, ಸಿನೆಮಾಕ್ಕೆ ಇಳಿಸುವುದಕ್ಕೆ ತೀರಾ ಕಷ್ಟ ಸಾಧ್ಯವಾದ ಕಥಾವಸ್ತುವೂ ಇದಾಗಿತ್ತು. ಆದರೆ ಸುನೀಲ್ ಕುಮಾರ್ ದೇಸಾಯಿ ಇದರಲ್ಲಿ ಯಶಸ್ವಿಯಾಗುತ್ತಾರೆ. ಬೆಳದಿಂಗಳ ಬಾಲೆ ಭಾರೀ ಯಶಸ್ಸನ್ನು ಕಾಣುತ್ತದೆ. ಪ್ರೇಮಕತೆಗೆ ಸಿಕ್ಕಿದ ಯಶಸ್ಸು ಸುನೀಲ್ ಕುಮಾರ್‌ದೇಸಾಯಿಯನ್ನು ಆ ದಾರಿಯಲ್ಲೇ ಮುನ್ನಡೆಸಿತು. ಅನಂತರ ಅವರು ‘ನಮ್ಮೂರ ಮಂದಾರ ಹೂವೆ’ ಚಿತ್ರವನ್ನು ತೆರೆಗಿಳಿಸಿದರು. ಶಿವರಾಜ್ ಕುಮಾರ್, ಪ್ರೇಮಾ ಮತ್ತು ರಮೇಶ್ ನಟಿಸಿರುವ ಈ ಚಿತ್ರವೂ ಗಾಂಧಿನಗರದ ಒಂದು ಹೆಗ್ಗಳಿಕೆಯಾಗಿದೆ. ಈ ಮೂರು ನಟರಿಗೆ ಚಿತ್ರ ಹೊಸ ಬದುಕನ್ನು ಗಾಂಧಿನಗರದಲ್ಲಿ ತೆರೆದುಕೊಟ್ಟಿತು. ಆದರೆ ಸುನೀಲ್ ಕುಮಾರ್ ದೇಸಾಯಿ ನಿರ್ದೇಶಿಸಿದ ಆನಂತರದ ಪ್ರೇಮಚಿತ್ರ ‘ಪ್ರೇಮ ರಾಗ ಹಾಡು ಗೆಳತಿ’ ಮುಗ್ಗರಿಸಿತು. ಪ್ರೇಮಕತೆಯ ಏಕತಾನತೆಯನ್ನು ಪ್ರೇಕ್ಷಕ ತಿರಸ್ಕರಿಸಿದ. ಇದರಿಂದಾಗಿ ದೇಸಾಯಿಯವರು ಮತ್ತೆ ತನ್ನ ಹಿಂದಿನ ದಾರಿಗೆ ಮರಳಿದರು. ಪ್ರತ್ಯರ್ಥ ಎನ್ನುವ ವಿಭಿನ್ನ ಚಿತ್ರ ಈ ಮೂಲಕ ಹೊರ ಬರುವಂತಾಯಿತು. ಇದರ ಹೆಗ್ಗಳಿಕೆಯೆಂದರೆ, ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಕ್ಕೆ ರಮೇಶ್‌ರಂತಹ ಮೃದು ವ್ಯಕ್ತಿತ್ವದ ನಾಯಕನನ್ನು ಆರಿಸಿಕೊಂಡದ್ದು. ಜೊತೆಗೆ ಸುದೀಪ್ ಮೊತ್ತ ಮೊದಲ ಬಾರಿ ಒಂದು ಸಣ್ಣ ಆದರೆ ವಿಭಿನ್ನ ಪಾತ್ರದಲ್ಲಿ ಗಾಂಧಿ ನಗರಕ್ಕೆ ಪ್ರವೇಶಪಡೆದರು. ಮುಂದೆ ಸ್ಪರ್ಶ ಎನ್ನುವ ಪ್ರೇಮಮಯ ಚಿತ್ರಕ್ಕೆ ನಾಯಕನನ್ನಾಗಿಯೂ ಆಯ್ಕೆ ಮಾಡಿದರು. ಸ್ಪರ್ಶ ಚಿತ್ರ ದುಡ್ಡು ತಂದು ಕೊಡದಿದ್ದರೂ ಅವರಿಗೆ ಹೆಸರು ತಂದು ಕೊಟ್ಟ ಚಿತ್ರ ಎನ್ನುವುದರಲ್ಲಿ ಅಡ್ಡಿಯಿಲ್ಲ. ಆದರೆ ಸ್ಪರ್ಶ ಚಿತ್ರದ ಬಳಿಕ ದೇಸಾಯಿಯ ಗಾಂಧಿನಗರದ ಬದುಕು ಒಂದು ರೀತಿಯಲ್ಲಿ ಶಾಪಗ್ರಸ್ತ ಬದುಕು. ಆ ಮೇಲೆ ಅವರಿಗೆ ಹಿಂದಿನಂತೆ ಭಿನ್ನವಾಗಿ ಚಿತ್ರವನ್ನು ಕೊಡಲು ಸಾಧ್ಯವೇ ಆಗಲಿಲ್ಲ. ವಿಷ್ಣುವರ್ಧನ್‌ನಂತಹ ನಾಯಕ, ಅದ್ದೂರಿ ಬಜೆಟ್, ಭಾರೀ ಪ್ರಚಾರ ಇವೆಲ್ಲವುಗಳಿದ್ದರೂ ಅವರ ಚಿತ್ರಗಳು ಒಂದರ ಹಿಂದೆ ಒಂದರಂತೆ ಮುಗ್ಗರಿಸತೊಡಗಿದವು. ಬಹುಶಃ ‘ಪರ್ವ’ ಚಿತ್ರದ ಬಗ್ಗೆ ಭಾರೀ ಕನಸನ್ನು ಹೊಂದಿದ್ದರು ದೇಸಾಯಿ. ಆದರೆ ಈ ಹೆಣಭಾರದ ಚಿತ್ರಕ್ಕೆ ಬೇಕಾದ ಯಾವ ಪೂರ್ವತಯಾರಿಯೂ ಅವರಲ್ಲಿಲ್ಲ. ಬಹುಶಃ ಪರ್ವ ಚಿತ್ರ, ಅವರು ಈವರೆಗೆ ಮಾಡಿದ ಎಲ್ಲ ಸಾಧನೆಯನ್ನು ಅಳಿಸಿ ಹಾಕಿತು. ಅತೀ ನಿರೀಕ್ಷೆಯೇ ಈ ಚಿತ್ರದ ಸೋಲಿಗೆ ಕಾರಣ ಎಂದು ವಿಮರ್ಶಕರು ಅಭಿಪ್ರಾಯಪಟ್ಟರು. ಪರ್ವದ ಸೋಲನ್ನು ತುಂಬಲು ಮತ್ತೆ ಥ್ರಿಲ್ಲರ್ ಚಿತ್ರದ ಕಡೆ ಹೊರಳಿದರು ‘ಮರ್ಮ’ ಈ ನಿಟ್ಟಿನಲ್ಲಿ ಕಳಪೆ ಚಿತ್ರವೇನೂ ಆಗಿರಲಿಲ್ಲ. ಮನೋವೈಜ್ಞಾನಿಕ ಆಧಾರಿತ ಥ್ರಿಲ್ಲರ್ ಚಿತ್ರ ಇದಾಗಿತ್ತು. ಆದರೆ ಕನ್ನಡ ಪ್ರೇಕ್ಷಕರು ಇದನ್ನೂ ತಿರಸ್ಕರಿಸಿದರು. ರಮ್ಯ ಚಿತ್ರ ಕಾಲ ಅವರ ಇನ್ನೊಂದು ವಿಫಲ ಚಿತ್ರ. ಅವರ ಮನದಲ್ಲಿ ಏನಿದೆಯೋ ಅದನ್ನು ತೆರೆಗಿಳಿಸುವಲ್ಲಿ ಸಂಪೂರ್ಣ ವಿಫಲರಾದರು. ಕ್ಷಣ ಕ್ಷಣ ಎನ್ನುವ ಥ್ರಿಲ್ಲರ್ ಚಿತ್ರಕ್ಕೂ ಇದೇ ಗತಿಯಾಯಿತು. ದೇಸಾಯಿಯನ್ನು ನೋಡಿ ಗಾಂಧಿನಗರ ಅನುಕಂಪ ವ್ಯಕ್ತಪಡಿಸತೊಡಗಿತು. ಕ್ಷಣ ಕ್ಷಣ ಚಿತ್ರದ ಸೋಲಿನ ಬಳಿಕ ಸುಮಾರು 9 ವರ್ಷಗಳ ಕಾಲ ಅವರು ಸಂಪೂರ್ಣ ಮರೆಗೆ ಸರಿದರು.
ಆದರೆ ಇದೀಗ ‘...ರೆ’ ಚಿತ್ರದ ಮೂಲಕ ಮತ್ತೆ ಗಾಂಧಿನಗರದಲ್ಲಿ ಪ್ರವೇಶ ಪಡೆದಿದ್ದಾರೆ ಸುನೀಲ್ ಕುಮಾರ್ ದೇಸಾಯಿ. ಆದರೆ ಈ ಬಾರಿ, ಈ ಹಿಂದಿನ ಎಲ್ಲ ಹ್ಯಾಂಗೋವರ್‌ಗಳಿಂದ ಹೊರಬಂದು, ಸಂಪೂರ್ಣ ಹೊಸದಾಗಿ ಮರು ಪ್ರವೇಶ ಪಡೆದಿದ್ದಾರೆ. ಯಾಕೆಂದರೆ ಅವರ ‘ರೆ’ ಚಿತ್ರ ಥ್ರಿಲ್ಲರ್, ಪ್ರೇಮ ಕತೆ ಎರಡನ್ನೂ ಹೊಂದಿಲ್ಲ. ಅವರು ಹೇಳುವಂತೆ ಇದೊಂದು ಹಾಸ್ಯ ಚಿತ್ರ. ವಿಶೇಷವೆಂದರೆ, ಈ ಚಿತ್ರದ ಕಥಾವಸ್ತುವಿಗೆ ಅವರ ಬದುಕಿಗೂ ಸಂಬಂಧವಿದೆ. ಹೇಗೆ ಕಳೆದ ಹತ್ತು ವರ್ಷಗಳಿಂದ ಅವರು ಗಾಂಧಿನಗರದಲ್ಲಿ ಮರು ಹುಟ್ಟಿಗಾಗಿ ಕಾಯುತ್ತಿದ್ದರೋ, ಈ ಚಿತ್ರದ ಕಥಾವಸ್ತುವಿನಲ್ಲಿ ಐವರು ಹಿರಿಯರೂ ತಮ್ಮ ಮುಕ್ತಿಗಾಗಿ, ಮೋಕ್ಷಕ್ಕಾಗಿ ಕಾಯುತ್ತಾರೆ. ಅವರಿಗೆ ಮುಕ್ತಿ ಕೊಡುವ ಕೆಲಸವನ್ನು ಅವರ ಮೊಮ್ಮಗ (ರಮೇಶ್ ಅರವಿಂದ್) ನೆರವೇರಿಸುತ್ತಾನೆ. ಈ ಚಿತ್ರ, ಸುನೀಲ್ ಕುಮಾರ್ ದೇಸಾಯಿಯ ಚಿತ್ರ ಬದುಕಿಗೆ ಕವಿದ ಕಾರ್ಮೋಡವನ್ನು ಅಳಿಸುತ್ತದೆಯೋ ನೋಡಬೇಕು.

 ಚಿತ್ರದ ನಿರೂಪಣೆಯಲ್ಲಿ ದೇಸಾಯಿ ಗೆದ್ದಿದ್ದಾರೆ. ಆದರೆ ಚಿತ್ರದ ಕಥಾವಸ್ತುವನ್ನು ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೆ ಎನ್ನುವುದು ಬಹಳ ಮುಖ್ಯವಾಗಿದೆ. ಕನ್ನಡದ ಪಾಲಿಗೆ, ಇದು ಥ್ರಿಲ್ಲರ್, ಭೂತ ಪ್ರೇತಗಳ ಕಾಲವೇನೋ ಹೌದು. ಆದರೆ ದೇಸಾಯಿ ಆರಿಸಿದ್ದು, ಪ್ರೇತಗಳ ಮೂಲಕ ನವಿರಾದ ಕಥಾವಸ್ತುವನ್ನು ಬದುಕಿನ ವೌಲ್ಯಗಳನ್ನು ಆ ಮೂಲಕ ಪ್ರತಿಪಾದಿಸಲು ಹೊರಟಿ ದ್ದಾರೆ. ಅನಂತನಾಗ್ ಅವರು ಚಿತ್ರದ ಯಶಸ್ವಿಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಹರ್ಷಿಕಾ ಪೂಣಚ ಕೂಡ ತನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಅಲ್ಲಲ್ಲಿ ಕತೆಯ ಓಘಕ್ಕೆ ತಡೆಯಾಗುತ್ತದೆ ಯಾದರೂ, ಲವಲವಿಕೆಯ ನಿರೂಪಣೆಯ ಮೂಲಕ ಚಿತ್ರ ಇಷ್ಟವಾಗುತ್ತದೆ. ಈ ಚಿತ್ರ ಸೋತರೆ, ಮತ್ತೆ ಥ್ರಿಲ್ಲರ್ ದಾರಿಗೆ ಹೊರಳುತ್ತೇನೆ ಎನ್ನುತ್ತಿದ್ದಾರೆ ಸುನೀಲ್ ಕುಮಾರ್ ದೇಸಾಯಿ.

share
ಮುಶಾಫಿರ್
ಮುಶಾಫಿರ್
Next Story
X