ಶಾಂತಿ ಮಾತುಕತೆಗೆ ಬೆನ್ನುಹಾಕಿದ ತಾಲಿಬಾನ್
ಕಾಬೂಲ್, ಮಾ. 5: ಅಫ್ಘಾನಿಸ್ತಾನ ಸರಕಾರದ ಜೊತೆಗೆ ನಿಂತು ಹೋಗಿರುವ ಶಾಂತಿ ಮಾತುಕತೆಯನ್ನು ಮುಂದುವರಿಸಲು ತಾಲಿಬಾನ್ ಶನಿವಾರ ನಿರಾಕರಿಸಿದೆ. ಮಾತುಕತೆ ಮುಂದುವರಿಯಬೇಕಾದರೆ ತನ್ನ ಪೂರ್ವ ಶರತ್ತುಗಳನ್ನು ಈಡೇರಿಸಬೇಕು ಎಂದು ಅದು ಹೇಳಿದೆ.
‘‘ವಿದೇಶಿ ಸೈನಿಕರ ಆಕ್ರಮಣ ನಿಲ್ಲುವವರೆಗೆ, ಅಂತಾರಾಷ್ಟ್ರೀಯ ಕಪ್ಪುಪಟ್ಟಿಗಳಿಂದ ತಾಲಿಬಾನ್‌ನ ಹೆಸರನ್ನು ತೆಗೆಯುವವರೆಗೆ ಹಾಗೂ ಬಂಧನದಲ್ಲಿರುವ ನಮ್ಮವರನ್ನು ಬಿಡುಗಡೆಗೊಳಿಸುವವರೆಗೆ ಮಾತುಕತೆಗಳಿಂದ ಏನೂ ಆಗುವುದಿಲ್ಲ ಎಂಬ ನಮ್ಮ ನಿಲುವನ್ನು ನಾವು ಪುನರುಚ್ಚರಿಸಲು ಬಯಸುತ್ತೇವೆ’’ ಎಂದು ತಾಲಿಬಾನ್ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.
Next Story





