ಟರ್ಕಿ ಅಧ್ಯಕ್ಷರ ವಿರೋಧಿ ಪತ್ರಿಕೆ ಸರಕಾರದ ವಶಕ್ಕೆ
ಇಸ್ತಾಂಬುಲ್ (ಟರ್ಕಿ), ಮಾ. 5: ಟರ್ಕಿಯ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್‌ಗೆ ವಿರುದ್ಧವಾಗಿದ್ದ ಪತ್ರಿಕೆ ‘ಝಮನ್’ನ್ನು ಅಧಿಕಾರಿಗಳು ಶುಕ್ರವಾರ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ಇಸ್ತಾಂಬುಲ್‌ನಲ್ಲಿರುವ ಪತ್ರಿಕೆಯ ಪ್ರಧಾನ ಕಚೇರಿಯ ಹೊರಗೆ ನೂರಾರು ಮಂದಿ ಜಮಾಯಿಸಿದ್ದರು. ಶುಕ್ರವಾರ ಮಧ್ಯರಾತ್ರಿಯ ಹೊತ್ತಿಗೆ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು ಹಾಗೂ ಜಲಫಿರಂಗಿ ಧಾರೆ ಹರಿಸಿ ಕಚೇರಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು.
ಅದಕ್ಕೂ ಮೊದಲು, ಇಸ್ತಾಂಬುಲ್‌ನ ಪ್ರಾಸಿಕ್ಯೂಟರ್‌ಗಳ ಮನವಿಯ ಮೇರೆಗೆ ಪತ್ರಿಕೆಯ ನಿಯಂತ್ರಣವನ್ನು ಆಡಳಿತಾಧಿಕಾರಿಯ ವಶಕ್ಕೆ ಒಪ್ಪಿಸಬೇಕು ಎಂಬುದಾಗಿ ನ್ಯಾಯಾಲಯವೊಂದು ಆದೇಶ ನೀಡಿತ್ತು.
Next Story





