ಶೂಟಿಂಗ್ ವಿಶ್ವಕಪ್: ಜಿತು ರಾಯ್‌ಗೆ 5ನೆ ಸ್ಥಾನ
ಬ್ಯಾಂಕಾಕ್, ಮಾ.5: ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಶನಿವಾರ ನಡೆದ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ಜಿತು ರಾಯ್ ಪದಕ ಗೆಲ್ಲುವುದರಿಂದ ವಂಚಿತರಾದರು.
ಶುಕ್ರವಾರ ನಡೆದಿದ್ದ 50 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಜಿತು ಚಿನ್ನದ ಪದಕವನ್ನು ಜಯಿಸಿದ್ದರು.
ಶನಿವಾರ ಅರ್ಹತಾ ಸುತ್ತಿನಲ್ಲಿ 580 ಅಂಕವನ್ನು ಗಳಿಸಿ ಫೈನಲ್‌ಗೆ ಪ್ರವೇಶಿಸಿದ್ದ ಜಿತು ಐದನೆ ಸ್ಥಾನಕ್ಕೆ ತೃಪ್ತಿಪಟ್ಟರು. ಬ್ರೆಝಿಲ್‌ನ ಫೆಲಿಪ್ ಅಲ್ಮೆಡಾ(201.9) ಚಿನ್ನದ ಪದಕವನ್ನು ಜಯಿಸಿದರು. ಅಮೆರಿಕದ ವಿಲ್ ಬ್ರೌನ್(201.4) ಹಾಗೂ ವಿಯೆಟ್ನಾಂನ ಕ್ಸಿಯಾನ್ ವಿನ್ ಹೊಯಾಂಗ್(180.1) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಜಯಿಸಿದರು.
ಕನ್ನಡಿಗ ಪ್ರಕಾಶ್ ನಂಜಪ್ಪ ಅರ್ಹತಾ ಸುತ್ತಿನಲ್ಲಿ 572 ಅಂಕ ಗಳಿಸಿದ್ದು, 21ನೆ ಸ್ಥಾನ ಪಡೆದರು. ಗುರ್‌ಪ್ರೀತ್ ಸಿಂಗ್ 569 ಅಂಕ ಗಳಿಸಿ 29ನೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
Next Story





