ಕಾಪು ಎಸ್ಸೆಸ್ಸೆಫ್‌ನಿಂದ ಬೈಕ್ ರ್ಯಾಲಿ

ಕಾಪು, ಮಾ.5: ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ರಾಜ್ಯ ವ್ಯಾಪಿ ಹಮ್ಮಿಕೊಂಡ ‘ಭಯೋತ್ಪಾದನೆ ವಿರುದ್ಧ ಜಿಹಾದ್’ ಜನಾಂ ದೋಲನದ ಅಂಗವಾಗಿ ಎಸ್ಸೆಸ್ಸೆಫ್‌ಕಾಪು ಡಿವಿಜನ್ ಅಧೀನದಲ್ಲಿ ಕನ್ನಂಗಾರ್‌ನಿಂದ ಕಾಪು ಪೇಟೆಯವರೆಗೆ ಬೈಕ್ ರ್ಯಾಲಿ ನಡೆಯಿತು.
ರಾಜ್ಯ ಎಸ್ಸೆಸ್ಸೆಫ್ ಸದಸ್ಯ ಸಿರಾಜುದ್ದೀನ್ ಸಖಾಫಿ,ಡಿವಿಜನ್ ಅಧ್ಯಕ್ಷ ಅಹ್ಮದ್ ಶಬೀರ್ ಸಖಾಫಿಗೆ ಧ್ವಜ ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ಸಮಾರೋಪ ಸಮಾರಂಭವನ್ನು ನಝೀರ್ ಅಹ್ಸನಿ ಉದ್ಘಾಟಿಸಿದರು. ಹಾಫಿಲ್ ಸುಫ್ಯಾನ್ ಸಖಾಫಿ ಸಂದೇಶ ಭಾಷಣ ನೀಡಿದರು.
Next Story





