ಪಡುಬಿದ್ರೆ: ಎಸ್‌ವೈಎಸ್ ಸ್ವಚ್ಛತಾ ದಿನಾಚರಣೆ

ಪಡುಬಿದ್ರೆ, ಮಾ.5: ಎಸ್‌ವೈಎಸ್ ಪಡುಬಿದ್ರೆ ವಲಯದ ವತಿಯಿಂದ ಆಧ್ಯಾತ್ಮಿಕ ನಾಯಕ ಶೈಖ್ ರಿಫಾಯಿ ಅವರ ಜನ್ಮ ದಿನಾ
ಚರಣೆ ಪ್ರಯುಕ್ತ ಪಡುಬಿದ್ರೆಯಲ್ಲಿ ಸ್ವಚ್ಚತಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಗ್ರಾಪಂ ಅಧ್ಯಕ್ಷೆ ದಮಯಂತಿ ವಿ. ಅಮೀನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಪಡುಬಿದ್ರೆ ಮಸೀದಿ ರಸ್ತೆಯಿಂದ ಬೋರ್ಡ್ ಶಾಲಾ ಮೈದಾನದವರಗೆ ಪರಿಸರವನ್ನು ಸ್ವಚ್ಛಗೊಳಿಸಿದರು. ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರೆ, ಗ್ರಾಪಂ ಉಪಾಧ್ಯಕ್ಷ ವೈ.ಸುಕುಮಾರ್, ಎಸ್‌ವೈಎಸ್ ಅಧ್ಯಕ್ಷ ಎ.ಕೆ.ಸೈಯದ್ ಅಲಿ, ಸಂಚಾಲಕ ಅಬೂಬಕರ್ ಉಸ್ತಾದ್, ಕಾರ್ಯದರ್ಶಿ ಹನೀಫ್ ಹಾಜಿ ಕನ್ನಂಗಾರ್, ಪಡುಬಿದ್ರೆ ಜಮಾಅತ್ ಸಮಿತಿ ಅಧ್ಯಕ್ಷ ಹಾಜಿ ಪಿ.ಎ. ಅಬ್ದುರ್ರಹ್ಮಾನ್, ಹಿಮಾಯತುಲ್ ಇಸ್ಲಾಮ್ ಸಂಘದ ಸಂಚಾಲಕ ಶಬ್ಬೀರ್ ಹುಸೈನ್, ಇಆನತುಲ್ ಮಸಾಕೀನ್ ಅಧ್ಯಕ್ಷ ಹುಸೈನ್ ಕಾಡಿಪಟ್ಣ, ಕನ್ನಂಗಾರ್ ಜಮಾಅತ್ ಉಪಾಧ್ಯಕ್ಷ ಸೂಫಿ ಹಾಜಿ, ಎಸ್‌ವೈಎಸ್ ಕನ್ನಂಗಾರ್ ಶಾಖೆಯ ಬಿ.ಕೆ.ಮುಹಮ್ಮದ್, ಕಂಚಿನಡ್ಕ ಮುಸ್ಲಿಮ್ ವೆಲ್ಫೇರ್ ಅಧ್ಯಕ್ಷ ಇಸ್ಮಾಯೀಲ್ ಕಂಚಿನಡ್ಕ, ಎಸ್ಸೆಸ್ಸೆಫ್ ಪಡುಬಿದ್ರೆ ಘಟಕದ ಅಧ್ಯಕ್ಷ ಪಿ.ಎಂ.ಸಿದ್ದೀಕ್, ಹಮೀದ್ ಕಂಚಿನಡ್ಕ, ಎಸ್‌ವೈಎಸ್ ಜಿಲ್ಲಾ ಸಮಿತಿಯ ಸುಲೈಮಾನ್ ಹಾಜಿ, ಪಿ.ಎಂ.ಶರೀಫ್, ಎಸ್.ಪಿ. ಉಮರ್ ಫಾರೂಕ್, ಗಾಪಂ ಸದಸ್ಯರಾದ ಬುಡಾನ್ ಸಾಹೇಬ್, ಹಸನ್ ಕಂಚಿನಡ್ಕ, ಜಯ ಸಾಲ್ಯಾನ್, ಲಕ್ಷ್ಮಣ್ ಕೋಟ್ಯಾನ್ ಉಪಸ್ಥಿತರಿದ್ದರು.





