ಕನ್ಹಯ್ಯಾರನ್ನು ಅಭಿನಂದಿಸಿ ಫೇಸ್‌ಬುಕ್ ಪೋಸ್ಟ್ ಹಾಕಿದ ಕ್ರಿಕೆಟಿಗ ರೈನ
.jpeg)
ಹೊಸದಿಲ್ಲಿ, ಮಾ.6: ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ರನ್ನು ಅಭಿನಂದಿಸಿ ಭಾರತೀಯ ಕ್ರಿಕೆಟ್ ತಾರೆ ಸುರೇಶ್ ರೈನ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.
ದಿಲ್ಲಿ ಹೈಕೋರ್ಟ್‌ನಲ್ಲಿ ಮಧ್ಯಂತರ ಜಾಮೀನು ಲಭಿಸಿದ ನಂತರ ಎನ್‌ಡಿಟಿವಿ ಚ್ಯಾನೆಲ್‌ಗೆ ಕನ್ಹಯ್ಯಾ ಭಾಗವಹಿಸಿದ ಚರ್ಚೆಯ ಕುರಿತು ಪರಾಮರ್ಶಿಸಿ ರೈನಾ ಪೋಸ್ಟ್ ಹಾಕಿದ್ದಾರೆ.
ಕನ್ಹಯ್ಯಾರ ಪ್ರತಿಯೊಂದು ಮಾತು ಸತ್ಯಸಂಧವಾಗಿದೆ ಎಂದು ಮನವರಿಕೆಯಾಗುತ್ತಿದೆ. ಕನ್ಹಯ್ಯಾರನ್ನು ಗೌರವಿಸುವುದಾಗಿ ಹೇಳಿರುವ ರೈನ ಪ್ರಾಮಾಣಿಕ ಹೋರಾಟಗಾರನಿಗೆ ವಂದಿಸುವೆ ಎಂದು ಬರೆದಿದ್ದಾರೆ.
ರೈನಾರ ಪೋಸ್ಟ್ ಇಷ್ಟರಲ್ಲೇ ವೈರಲ್ ಆಗಿದೆ. ಏನಿದ್ದರೂ ಅವರ ಹೇಳಿಕೆಯನ್ನು ಸ್ವಾಗತಿಸಿ ವಿರೋಧಿಸಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಸಕ್ರಿಯವಾಗಿವೆ.
Next Story





