ಗುಜರಾತ್‌ಗೆ ನುಸುಳಿದ ಹತ್ತು ಉಗ್ರರು: ಪಾಕಿಸ್ತಾನದಿಂದ ಮಾಹಿತಿ

ಅಹ್ಮದಾಬಾದ್: ಹತ್ತು ಮಂದಿ ಉಗ್ರರು ಗುಜರಾತ್‌ಗೆ ನುಸುಳಿದ್ದಾರೆ ಎಂದು ಪಾಕಿಸ್ತಾನದ ರಾಷ್ಟ್ರೀಯ ತನಿಖಾ ದಳ ತಿಳಿಸಿದೆ.
ಈ ಬಗ್ಗೆ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ನಾಸಿರ್‌ಖಾನ್, ಭಾರತದ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರಿಗೆ ಮಾಹಿತಿ ನೀಡಿದ್ದಾರೆ.
ಲಷ್ಕರೆ ತಯ್ಬ ಅಥವಾ ಜೈಷೆ ಮುಹಮ್ಮದ್ ಸಂಘಟನೆಯ ಉಗ್ರರು ಭಾರತಕ್ಕೆ ನುಸುಳಿದ್ದಾರೆ ಎಂದು ಪಾಕಿಸ್ತಾನ ತಿಳಿಸಿದೆ. ಉಗ್ರರು ಭಾರತಕ್ಕೆ ನುಸುಳಿರುವ ಬಗ್ಗೆ ಇದೇ ಮೊದಲ ಬಾರಿಗೆ ಪಾಕಿಸ್ತಾನ ಭಾರತಕ್ಕೆ ತಿಳಿಸಿದೆ.
ಪಾಕಿಸ್ತಾನ ನೀಡಿರುವ ಮಾಹಿತಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿನ ಪ್ರಮುಖ ಸ್ಥಳಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
Next Story





