ಹಿ.ಪ್ರ. ರಣಜಿ ತಂಡದ ಡ್ರೆಸ್ಸಿಂಗ್ ರೂಮ್ ಗೆ ಬಂದ ಬಿಜೆಪಿ ಸಂಸದ ಅನುರಾಗ್ ಠಾಕೂರ್ ನಾನು ಈ ತಂಡದ ನಾಯಕನೆಂದರು !
ಬಿಸಿಸಿಐ ಕಪಾಟಿನಲ್ಲಿ ತೆಗೆದಷ್ಟೂ ಅಸ್ಥಿ ಪಂಜರಗಳು
ಪ್ರತೀ ಬಾರಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಸುಪ್ರೀಂ ಕೋರ್ಟ್‌ನಲ್ಲಿ ಅಫಿದಾವಿತ್ ಸಲ್ಲಿಸಿದಾಗಲೂ ಅದರ ಜೊತೆಗೆ ಒಂದು ಆಘಾತಕಾರಿ ವಿಷಯ ಹೊರಬರುತ್ತದೆ. ಗುರುವಾರವೂ ಅದೇ ನಡೆದಿದೆ.
ಬಿಸಿಸಿಐನ 60 ಪುಟಗಳ ಅಫಿದಾವತ್‌ನ್ನು ನ್ಯಾಯಮೂರ್ತಿ ಟಿಎಸ್ ಠಾಕೂರ್ ಮತ್ತು ಎಫ್‌ಎಂಐ ಖಲೀಫುಲ್ಲಾ ಅವರ ವಿಶೇಷ ಪೀಠವು ವಿಚಾರಣೆ ನಡೆಸಿತ್ತು. ಕ್ರಿಕೆಟ್ ಮಂಡಳಿ ತನ್ನ ಕಾರ್ಯದರ್ಶಿ ಅನುರಾಗ್ ಠಾಕೂರ್ ಮತ್ತು ದಿಲೀಪ್ ವೆಂಗಸರ್ಕರ್, ಬೃಜೇಶ್ ಪಟೇಲ್ ಮತ್ತು ಶಿವಲಾಲ್ ಯಾದವ್ ಮೊದಲಾದ ಈಗ ಕ್ರಿಕೆಟ್ ಆಡಳಿತದಲ್ಲಿ ತೊಡಗಿಸಿಕೊಂಡಿರುವ ಮಾಜಿ ಕ್ರಿಕೆಟ್ ಶ್ರೇಷ್ಠರನ್ನು ಜೊತೆಯಾಗಿ ಹೆಸರಿಸಿತ್ತು.
ಠಾಕೂರ್ ಯಾವುದೋ ಒಂದು ಹಂತದಲ್ಲಿ ಕ್ರಿಕೆಟ್ ಆಡಿದ್ದಾರೆಯೇ ಇಲ್ಲವೇ ಎನ್ನುವ ವಿಷಯವಾಗಿ ವ್ಯಾಜ್ಯವಿಲ್ಲ. ಆದರೆ ಅವರನ್ನು ಭಾರತೀಯ ಶ್ರೇಷ್ಠರ ಜೊತೆಗೆ ಸೇರಿಸುವುದು ಕೆಲವು ಸ್ವಾರ್ಥ ಹಿತಾಸಕ್ತಿಗಳು ತಮ್ಮ ಲೋಭಕ್ಕಾಗಿ ಕ್ರಿಕೆಟ್ ಮೇಲೆ ಹೇಗೆ ಹಿಡಿತ ಸಾಧಿಸಿದ್ದಾರೆ ಎನ್ನುವುದನ್ನು ತೋರಿಸುತ್ತದೆ.
ಠಾಕೂರ್ ಕಥೆ ಬಹಳ ಕುತೂಹಲಕರ...
ಜೂನ್ 2000 ರಲ್ಲಿ ಹಿಮಾಚಲ ಪ್ರದೇಶದ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷರಾದ ಮೇಲೆ ಅವರು ಬಿಸಿಸಿಐನಲ್ಲಿ ಒಂದು ಹೆಜ್ಜೆ ಮೇಲೇರುವ ದಾರಿ ಕಂಡುಕೊಂಡಿದ್ದರು. ಆ ಸಂದರ್ಭದಲ್ಲಿ ಅವರಿಗೆ 25ರ ವಯಸ್ಸು.
ದೇಶದ ಯಾವುದೇ ಕ್ರಿಕೆಟ್ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ಪಡೆದ ಅತೀ ಕಿರಿಯ ವಯಸ್ಸಿನ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾದರು. ಪ್ರಸಿದ್ಧ ಹುದ್ದೆಯಾದ, ಬಿಸಿಸಿಐ ಕಿರಿಯರ ಆಯ್ಕೆ ಸಮಿತಿಯಲ್ಲಿ ಹುದ್ದೆ ಪಡೆಯಲು ಅರ್ಹತೆಗಾಗಿ ಅವರು ರಣಜಿ ಟ್ರೋಫಿ ಆಟಗಾರರಾಗಿರಬೇಕು.
ಹೀಗಾಗಿ ನವೆಂಬರ್ ತಿಂಗಳಲ್ಲಿ ಠಾಕೂರ್ ಹಿಮಾಚಲ ರಣಜಿ ತಂಡದ ಡ್ರೆಸ್ಸಿಂಗ್ ರೂಂಗೆ ನಡೆದರು ಮತ್ತು ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ತಾವು ಕಪ್ತಾನರೆಂದು ಘೋಷಿಸಿದರು. ಭಾರತದ ಇನ್ಯಾವುದೇ ಆಡಳಿತದಲ್ಲಿ ಆಗುವಂತೆ ಬ್ಯಾಟ್ಸ್ ಮನ್ ಆಗಿ ಠಾಕೂರ್ ಶೂನ್ಯ ಸಂಪಾದಿಸಿದರು. ನಂತರ ಕೊನೆಯ ಎರಡು ವಿಕೆಟುಗಳನ್ನು ಕಬಳಿಸುವಲ್ಲಿ ಶಕ್ತರಾದರು.
ರಾಜ್ಯದ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಹಿಮಾಚಲದ ಕ್ರಿಕೆಟನ್ನು ಸಿಕ್ಸರ್ ಭಾರಿಸಿದ್ದರು. ಆದರೆ ಬಿಸಿಸಿಐ ಅಥವಾ ಠಾಕೂರ್‌ಗೆ ಇದರಿಂದ ಏನೂ ಅನಿಸಲಿಲ್ಲ. ಈ ಯುವ ಕ್ರಿಕೆಟ್ ಪ್ರೇಮಿಗೆ ಬಿಸಿಸಿಐ ಕಿರಿಯರ ಆಯ್ಕೆ ಸಮಿತಿಯಲ್ಲಿ ಸ್ಥಾನ ಪಡೆಯುವುದು ಮುಖ್ಯವಾಗಿತ್ತು.
ಬಿಸಿಸಿಐನ ನಿಯಮಗಳ ಪ್ರಕಾರ ಕೇವಲ ಪ್ರಥಮ ದರ್ಜೆ ಕ್ರಿಕೆಟರುಗಳನ್ನು ಮಾತ್ರ ರಾಷ್ಟ್ರೀಯ ಆಯ್ಕೆಗಾರರನ್ನಾಗಿ ಮಾಡಬಹುದು. ರಣಜಿ ಟ್ರೋಫಿ ಪ್ರಮಾಣ ಪತ್ರವನ್ನು ಪಡೆದುಕೊಂಡ ಮೇಲೆ ಠಾಕೂರ್ ಮುಂದಿನ ವರ್ಷಗಳಲ್ಲಿ ಭಾರತದ ಕಿರಿಯರ ಕ್ರಿಕೆಟಿನ ಆಯ್ಕೆಗಾರರಾದರು. ಈಗ ಬಿಸಿಸಿಐ ಅವರನ್ನು ಆಟದ ಮೇಲಿನ ಪ್ರೇಮಕ್ಕಾಗಿ ಅದರ ಸೇವೆಗೆ ಇಳಿದಿರುವ ಭಾರತದ ಶ್ರೇಷ್ಠ ಕ್ರಿಕೆಟಿಗರ ಬದಿಯಲ್ಲಿಟ್ಟಿದೆ.
ರಾಷ್ಟ್ರೀಯ ಕ್ರಿಕೆಟಿಗರಾಗಲು ಠಾಕೂರ್ ಬಳಸಿದ ಹಾದಿ ಏನೂ ಹೊಸದಲ್ಲ. ಅವರು ಎಚ್‌ಪಿಸಿಎ ಕಾರ್ಯದರ್ಶಿ ಎಸ್‌ಸಿ ನಾಯರ್ ಹೆಜ್ಜೆಯಲ್ಲಿ ನಡೆದಿದ್ದರು. ಅವರು ತಮ್ಮ 46ನೇ ವಯಸ್ಸಿನಲ್ಲಿ 1980ರಲ್ಲಿ ಹಿಮಾಚಲದ ಮೊದಲ ರಣಜಿ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದರು. ಆಡಳಿತಗಾರರು ಅಥವಾ ಅವರ ಆಪ್ತ ಸಂಬಂಧಿಕರನ್ನು ವಿವಿಧ ತಂಡಗಳಲ್ಲಿ ಆಡಲು ಸ್ಥಾನ ನೀಡಿದ ಸಾಕಷ್ಟು ಉದಾಹರಣೆಗಳಿವೆ. ಅಧಿಕಾರದಲ್ಲಿರುವವರ ಜೊತೆಗಿನ ಅವರ ಸ್ನೇಹಸಂಬಂಧವೇ ಈ ಅವಕಾಶವನ್ನು ಅವರಿಗೆ ನೀಡಿದೆ.
ತಮ್ಮ ಮಗ ಸ್ಟುವರ್ಟ್ ಬಿನ್ನಿ ಆಯ್ಕೆಯಾಗಿರುವ ಕಾರಣ ಭಾರತದ ಹಿರಿಯ ಆಯ್ಕೆಗಾರ ರೋಜರ್ ಬಿನ್ನಿ ಆಯ್ಕೆ ಸಮಿತಿಯಿಂದ ದೂರ ಹೋಗಬೇಕು ಎನ್ನುವುದು ಬಿಸಿಸಿಐ ಇತ್ತೀಚೆಗೆ ಕಂಡುಕೊಂಡ ಸತ್ಯ. ವರ್ಷಗಳಿಂದ ಆಟಗಾರರ ಆಯ್ಕೆಯಲ್ಲಿ ಪ್ರತಿಭೆಗಿಂತ ಇತರ ವಿಷಯಗಳೇ ಪ್ರಾಮುಖ್ಯತೆ ಪಡೆಯುತ್ತಿರುವುದಕ್ಕೆ ಇವುಗಳು ಕೆಲವು ಉದಾಹರಣೆಗಳಷ್ಟೇ ಆಗಿವೆ.
ಮಾಜಿ ಭಾರತ ತಂಡದ ಆಯ್ಕೆಗಾರ ಕೃಷ್ ಶ್ರೀಕಾಂತ್ ತಮ್ಮ ಮಗ ಅನಿರುಧ್ ಶ್ರೀಕಾಂತ್‌ರನ್ನು ತಾವು ಆಯ್ಕೆಗಾರರಾಗಿದ್ದ ಅವಧಿಯಲ್ಲಿ ಆರಿಸಿರುವ ಪ್ರಶ್ನೆಗಳನ್ನು ಎದುರಿಸದೆ ಪಾರಾಗಿದ್ದು ಅವರ ಅದೃಷ್ಟ. ಬಿಹಾರ್ ವಿಚಾರದಲ್ಲೂ ಬಿಸಿಸಿಐ ಸಂಪೂರ್ಣ ಉಲ್ಟಾ ಹೊಡೆದಿದೆ.
ಬಿಸಿಸಿಐನ ಅಫಿದಾವಿತ್‌ನ ಪುಟ 22 ಸ್ಪಷ್ಟವಾಗಿ ಹೇಳುವುದೆಂದರೆ, ಬಿಹಾರದಲ್ಲಿ ವಿವಿಧ ಗುಂಪುಗಳ ನಡುವೆ ಭಿನ್ನಾಭಿಪ್ರಾಯಗಳು ಇರುವ ಕಾರಣ ಮತ್ತು ಈ ವಿಷಯವು ಸುಪ್ರೀಂಕೋರ್ಟ್ ಮುಂದೆ ಬಾಕಿ ಉಳಿದಿರುವ ಕಾರಣ, ವಿಷಯದಲ್ಲಿ ನಿರ್ಧಾರವನ್ನು ಕಾದು ನೋಡಬೇಕಿದೆ.
ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ನಿಯಂತ್ರಣದಲ್ಲಿರುವ ಬಿಹಾರ್ ಕ್ರಿಕೆಟ್ ಅಸೋಸಿಯೇಶನ್‌ಗೆ ಸಹಭಾಗಿ ಸದಸ್ಯತ್ವ ಕೊಡುವ ಮೂಲಕ ಬಿಸಿಸಿಐ ನ್ಯಾಯಾಲಯದ ಸಿಟ್ಟನ್ನು ಎದುರಿಸಬೇಕಾದೀತು ಎಂದು ಮಾಧ್ಯಮವೊಂದು ವರದಿ ಮಾಡಿತ್ತು. ನಂತರ ಬಿಸಿಸಿಐ ತನ್ನ ತಪ್ಪನ್ನು ಅರಿತುಕೊಂಡು ಈಗ ಕಾರ್ಯದರ್ಶಿ ಠಾಕೂರ್ ಸುಪ್ರೀಂಕೋರ್ಟಿನಲ್ಲಿ ನಿಲುವು ಬದಲಿಸಿದ್ದಾರೆ. ಆದರೆ ಇದಕ್ಕೆ ಮೊದಲು ಫೆಬ್ರವರಿ 19ರಂದು ನಡೆದ ವಿಶೇಷ ಪ್ರಧಾನ ಸಭೆಯಲ್ಲಿ ಬಿಹಾರ ಕ್ರಿಕೆಟ್ ಮಂಡಳಿಯ ಸದಸ್ಯ ಭಾಗವಹಿಸಲು ಬಿಸಿಸಿಐ ಅವಕಾಶ ಕೊಟ್ಟಿದೆ.
ಅದಕ್ಕಿಂತ ಮುಖ್ಯವಾಗಿ ಬಿಸಿಸಿಐ ತನ್ನ ಮುಂದಿನ ಸಭೆಯಲ್ಲೂ ಬಿಸಿಎ ಸದಸ್ಯರಿಗೆ ಭಾಗವಹಿಸಲು ಅವಕಾಶ ಕೊಡುತ್ತಿದೆ. ಹೀಗಾಗಿ ಸುಪ್ರೀಂಕೋರ್ಟಿನಲ್ಲಿ ಒಪ್ಪಿಕೊಂಡಿರುವ ಬಿಹಾರದ ಯಾವುದೇ ಭಾಗವನ್ನೂ ಮಂಡಳಿ ಗುರುತಿಸಿಲ್ಲ ಎನ್ನುವ ತನ್ನದೇ ಮಾತಿಗೆ ಉಲ್ಟಾ ಹೊಡೆದಿದೆ. ಬಿಸಿಸಿಐ 2014ರಲ್ಲಿ (ಸಂಜಯ್ ಪಟೇಲ್) ಮತ್ತು 2015ರಲ್ಲಿ (ಠಾಕೂರ್) ಪ್ರತ್ಯೇಕ ಅಫಿದಾವತ್‌ಗಳನ್ನು ಅಪೆಕ್ಸ್ ನ್ಯಾಯಾಲಯದಲ್ಲಿ ಹಾಕಿ, ಅದರಲ್ಲಿ ಬಿಸಿಎಗೆ 2009ರಲ್ಲಿ ಅನುದಾನವಾಗಿ ನೀಡಿದ ರು. 50 ಲಕ್ಷವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಮತ್ತು ಕಾಗ್ನಿಜೇಬಲ್ ಅಪರಾಧ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಿದೆ.
ಕೃಪೆ: dnaindia.com