ವಿಶಾಖಪಟ್ಟಣ :ಕರಾಟೆ ಸ್ವರ್ಧೆ - ಮಂಗಳೂರಿನ ವಿದ್ಯಾರ್ಥಿಗಳಿಗೆ ಪದಕ

ವಿಶಾಖಪಟ್ಟಣದ ಸ್ವರ್ಣ ಭಾರತಿ ಒಳ ಕ್ರೀಡಾಂಗಣದಲ್ಲಿ 14ನೇ ಆಲ್ ಇಂಡಿಯಾ ಮುಕ್ತ ಕರಾಟೆ ಸ್ವರ್ಧೆಯ ಕಟಾ ಮತ್ತು ಟೀಮ್ ಕಟಾ ವಿಭಾಗದಲ್ಲಿ ಮಂಗಳೂರಿನ ಸೈಂಟ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆ ಬೆಂದೂರ್‌ವೆಲ್ ಇದರ ವಿದ್ಯಾರ್ಥಿನಿ ವಿಭಾ ವಿ.ಬಿ. ಬಂಗೇರ ಇವರು ಬೆಳ್ಳಿ ಪದಕ ಪಡೆದಿರುತ್ತಾರೆ. ಉಳ್ಳಾಲ ಶಾರದಾನಿಕೇತನ ಕರಾಟೆ ತಂಡದ ಸದಸ್ಯರಾಗಿದ್ದು, ಅನಿಲ್ ರಾಜ್ ಶೆಟ್ಟಿಗಾರ್ ಇವರಿಂದ ತರಬೇತಿ ಪಡೆದಿರುತ್ತಾರೆ.
ವಿಶಾಖಪಟ್ಟಣದ ಸ್ವರ್ಣ ಭಾರತಿ ಒಳ ಕ್ರೀಡಾಂಗಣದಲ್ಲಿ 14ನೇ ಆಲ್ ಇಂಡಿಯಾ ಮುಕ್ತ ಕರಾಟೆ ಸ್ವರ್ಧೆಯ ಕಟಾ ಕುಮಿಟಿ ವಿಭಾಗದಲ್ಲಿ ಮಂಗಳೂರಿನ ಸೈಂಟ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆ ಬೆಂದೂರ್‌ವೆಲ್ ಇದರ ವಿದ್ಯಾರ್ಥಿ ವರ್ಷಲ್ ವಿ. ಬಂಗೇರ ಇವರು ಚಿನ್ನ ಹಾಗೂ ಕಂಚನ್ನು ಪಡೆದಿರುತ್ತಾರೆ. ಉಳ್ಳಾಲ ಶಾರದಾನಿಕೇತನ ಕರಾಟೆ ತಂಡದ ಸದಸ್ಯರಾಗಿದ್ದು, ಅನಿಲ್ ರಾಜ್ ಶೆಟ್ಟಿಗಾರ್ ಇವರಿಂದ ತರಬೇತಿ ಪಡೆದಿರುತ್ತಾರೆ
Next Story





