ಮುಲ್ಕಿ : ಕೋರ್ದಬ್ಬು ದೈವಸ್ಥಾನದ ಅಂಗಣ ಮೇಲ್ಛಾವಣಿಯ ಕಾಮಗಾರಿಯನ್ನು ಉದ್ಘಾಟನೆ

ಮುಲ್ಕಿ,ಮಾ.6:ಸಂಘಟನೆಯು ಬಲವನ್ನು ವೃದ್ದಿಸುತ್ತದೆ. ಸಮಾಜಸೇವೆಯಲ್ಲಿ ಸಂಘಟನೆಯನ್ನು ತೊಡಗಿಸಿಕೊಂಡು ಪರೋಪಕಾರಿಗಳಾಗಿ ವ್ಯಕ್ತಿತ್ವನ್ನು ರೂಪಿಸಿಕೊಳ್ಳಿ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅವರು ಮುಲ್ಕಿ ಸಮೀಪದ ಕೆ.ಎಸ್.ರಾವ್ ನಗರದಲ್ಲಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಸಂಸದರ ಅನುದಾನದಿಂದ ನಿರ್ಮಾಣಗೊಂಡ ಶ್ರೀ ಕೋರ್ದಬ್ಬು ದೈವಸ್ಥಾನದ ಅಂಗಣ ಮೇಲ್ಛಾವಣಿಯ ಕಾಮಗಾರಿಯನ್ನು ಉದ್ಘಾಟಿಸಿ ಮಾತನಾಡಿದರು.
ವೇದಿಕೆಯಲ್ಲಿ ಕಿನ್ನಿಗೋಳಿ ಜಿ.ಪಂ. ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಮಾಜೀ ಜಿ.ಪಂ. ಸದಸ್ಯ ಈಶ್ವರ ಕಟೀಲು,ತಾ.ಪಂ. ಸದಸ್ಯರಾದ ಜೀವನ್ ಪ್ರಕಾಶ್,ಶರತ್ ಕುಬೆವೂರು,ಮುಲ್ಕಿ ನ.ಪಂ. ಅಧ್ಯಕ್ಷೆ ಮೀನಾಕ್ಷಿ ಬಂಗೇರಾ,ಉಪಾದ್ಯಕ್ಷೆ ವಾಸಂತಿ ಭಂಡಾರಿ,ಸ್ಥಾಯಿ ಸಮಿತಿಯ ಸುನಿಲ್ ಆಳ್ವ,ಸದಸ್ಯ ಶೈಲೇಶ್ ಕುಮಾರ್,ವಿಜಯಾ ರೈತ ಸೊಸೈಟಿಯ ಅಧ್ಯಕ್ಷ ರಂಗನಾಥ ಶೆಟ್ಟಿ,ಸುರೇಸ್ ಕೋಟ್ಯಾನ್,ಜನಾರ್ದನ ಬಂಗೇರ,ತಿಮ್ಮಪ್ಪ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
Next Story





