ಕಿನ್ನಿಗೋಳಿ : ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ವಿಜೇತರಾದ ಸದಸ್ಯರ ಅಬಿನಂದನಾ ಸಮ್ಮಾರಂಭ
.jpg)
ಕಿನ್ನಿಗೋಳಿ, ಮಾ.6: ಕಳೆದ 16 ವರ್ಷಗಳಿಂದ ಕಾಂಗ್ರೆಸ್‌ನ ಭಧ್ರ ಕೋಟೆಯಾಗಿದ್ದ ಮುಲ್ಕಿ- ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರಧಾನಿಯವರ ಜನಪರ ಯೋಜನೆಗಳು ಹಾಗೂ ಕಾರ್ಯಕರ್ತರ ಕಠಿಣ ಪರಿಶ್ರಮದ ಫಲವಾಗಿ 20 ರಲ್ಲಿ 14 ತಾಲೂಕು ಪಂಚಾಯತ್‌ಗಳು ಮತ್ತು ಎಲ್ಲಾ ಐದು ಜಿಲ್ಲಾ ಪಂಚಾಯತ್‌ಗಳನ್ನು ಗೆಲ್ಲುವಂತಾಗಿದೆ ಎಂದು ದ.ಕ. ಸಂಸದ ನಳಿನ್ ಕುಮಾರ್ ಹೇಳಿದರು.ವರು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಮುಲ್ಕಿ ಮೂಡಬಿದ್ರೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ವಿಜೇತರಾದ ಸದಸ್ಯರ ಅಬಿನಂದನಾ ಸಮ್ಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಬಾಗವಹಿಸಿ ಅಭಿನಂದನಾ ನುಡಿಯನ್ನಾಡಿದರು.
ರಾಜ್ಯ ಸರಕಾರದ ದುರಾಡಳಿತ, ಗೋಂಡಾ ರಾಜಕೀಯ, ದರ್ಪದ ರಾಜಕಾರಣಕ್ಕೆ ಬೇಸತ್ತ ಜನತೆ ಈ ಭಾರಿಯ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬುದ್ದಿಕಳಿಸಿ ಬಿಜೆಪಿಯ ಕೈಹಿಡಿದಿದ್ದಾರೆ ಎಂದರು. ಕೇಂದ್ರದ ಹಾಗೂ ಹಿಂದಿನ ಯಡಿಯೂರಪ್ಪ ನೇತೃತ್ವದಲ್ಲಿದ್ದ ಬಿಜೆಪಿ ಸರಕಾರದ ಯೋಜನೆಗಳನ್ನು ಕಾಂಗ್ರೆಸ್‌ನ ಸಾಧನೆಗಳು ಎಂದು ಬಿಂಬಿಸಲಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ನಲ್ಲಿ ವಿಜೇತ ಅಭ್ಯರ್ಥಿಗಳಾದ ವಿನೋದ್ ಬೊಳ್ಳೂರು, ಕೆ. ಪಿ. ಸುಚರಿತ ಶೆಟ್ಟಿ, ಸುಜಾತ ಕೆ. ಪಿ, ಕಸ್ತೂರಿ ಪಂಜ, ವಸಂತಿ, ತಾಲೂಕು ಪಂಚಾಯತ್ ಸದಸ್ಯರಾದ ರೇಖಾ ಸಾಲ್ಯಾನ್, ನಾಗವೇಣಿ, ಸಂತೋಷ್, ವನಿತಾ ನಾಯ್ಕಾ , ದಿವಾಕರ ಕರ್ಕೆರಾ, ಶರತ್ ಕುಬೆವೂರು, ರಶ್ಮಿಆಚಾರ್ಯ, ಜೀವನ್ ಪ್ರಕಾಶ್, ವಜ್ರಾಕ್ಷಿ ಶೆಟ್ಟಿ , ಶುಭಲತಾ ಶೆಟ್ಟಿ , ಶಶಿಕಲಾ, ಉಷಾ ಸುವರ್ಣ, ಸುಪ್ರೀತ, ಕವಿತಾ ದಿನೇಶ್, ಅವರನ್ನು ಗೌರವಿಸಲಾಯಿತು. ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾದ್ಯಕ್ಷ ಪ್ರತಾಪ ಸಿಂಹ ನಾಯಕ್, ಹಿರಿಯ ನಾಯಕ ಭುವನಾಭಿರಾಮ ಉಡುಪ, ಜಿಲ್ಲಾ ಉಪಾದ್ಯಕ್ಷರಾದ ಉಮಾನಾಥ ಕೋಟ್ಯಾನ್, ಜಗದೀಶ ಅಧಿಕಾರಿ, ಜಿಲ್ಲಾ ಸಮಿತಿ ಸದಸ್ಯರಾದ ಸುರ್ದಶನ್ ಮೂಡಬಿದ್ರೆ, ಸುಲೋಚನಾ ಭಟ್, ಕೆ. ಆರ್ ಪಂಡಿತ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಈಶ್ವರ್ ಕಟೀಲ್, ಮುಲ್ಕಿ ಮೂಡಬಿದ್ರೆ ಬಿಜೆಪಿ ಕಾರ್ಯದರ್ಶಿ ದೇವಪ್ರಸಾದ್ ಪುನರೂರು, ರಾಮಚಂದ್ರ ಬೈಕಂಪಾಡಿ ಮತ್ತಿತರರು ಇದ್ದರು. ಸುನಿಲ್ ಆಳ್ವ ಕಾರ್ಯಕ್ರಮ ನಿರೂಪಿಸಿದರು.





