ಉಳ್ಳಾಲ: ಹೆಲ್ಪ್ ಇಂಡಿಯಾ ಫೌಂಡೇಶನ್ ವತಿಯಿಂದ 2.5 ಲಕ್ಷ ರೂ. ವೆಚ್ಚದಲ್ಲಿ ಬಾವಿ ನಿರ್ಮಾಣ

ಉಳ್ಳಾಲ, ಮಾ, 06: ಕಳೆದ ಹಲವಾರು ವರ್ಷಗಳಿಂದ ನೀರಿಗಾಗಿ ಪರದಾಡುತ್ತಿದ್ದ ಸಜಿಪನಡು ಗ್ರಾಮದ ಕಂಚಿನಡ್ಕ ಪದವು ಸೈಟ್ ನಿವಾಸಿಗಳಿಗೆ ಸುಮಾರು 2.5 ಲಕ್ಷ ರೂ. ವೆಚ್ಚದಲ್ಲಿ ಮಂಗಳೂರಿನ ಹೆಲ್ಪ್ ಇಂಡಿಯಾ ಫೌಂಡೇಶನ್ ವತಿಯಿಂದ ಬಾವಿ ನಿರ್ಮಿಸಿ ಕೊಟ್ಟಿದ್ದು, ರವಿವಾರ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ನೂತನ ಬಾವಿಯನ್ನು ಉದ್ಘಾಟಿಸಿದರು.
ಸಚಿವ ಯು.ಟಿ.ಖಾದರ್ ಮಾತನಾಡಿ ಮಂಗಳೂರು ವಿಧಾನಸಭಾ ಕ್ಷೇತ್ರದ ಸಜಿಪನಡು ಗ್ರಾಮದ ಅತೀ ಎತ್ತರವಾದ ಪ್ರದೇಶದಲ್ಲಿರುವ ಕಂಚಿನಡ್ಕ ಪದವು ಸೈಟ್ ನಿವಾಸಿಗಳಿಗೆ ಮೂಲಭೂತ ಸೌಕರ್ಯದ ಕೊರತೆಯನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡುತ್ತಿದ್ದು, ರಸ್ತೆ ನಿರ್ಮಾಣ ಸೇರಿದಂತೆ ಕೆಲವೊಂದು ಮೂಲಭೂತ ಸೌಕರ್ಯವನ್ನು ಈಗಾಗಲೇ ಯಶಸ್ವಿಯಾಗಿ ನಡೆಸಿದೆ. ಆದರೆ ನೀರಿನ ಸಮಸ್ಯೆ ಪರಿಹಾರವಾಗಿರಲಿಲ್ಲ. ಹೆಲ್ಪ್ ಇಂಡಿಯಾ ಸಂಸ್ಥೆಯ ರಾಝಿಕ್ ಉಳ್ಳಾಲ್ ಸಮಾಜಕ್ಕೆ ಕೊಡುಗೆಯಾಗಿ ದಾನಿಯೋರ್ವರು ನೀರಿನ ಶಾಶ್ವತ ಯೋಜನೆಯನ್ನು ಮಾಡುವ ಇರಾದೆಯನ್ನು ತಿಳಿಸಿದ್ದರು. ಈ ಹಿನ್ನಲೆಯಲ್ಲಿ ರಾಝಿಕ್ ಅವರಿಗೆ ಈ ಸ್ಥಳದಲ್ಲಿ ನೀರಿನ ಶಾಶ್ವತ ಯೋಜನೆ ನಡೆಸಲು ಕೇಳಿಕೊಂಡತೆ ಬಾವಿ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸೈಟ್ ನಿವಾಸಿಗಳ ಉಪಯೋಗಕ್ಕೆ ಬಿಟ್ಟು ಕೊಟ್ಟಿದ್ದು, ಈ ಬಾವಿಯನ್ನು ಇಲ್ಲಿನ ನಿವಾಸಿಗಳು ಸಮಾಜದ ಆಸ್ತಿ ಸಂಪತ್ತಿನಂತೆ ರಕ್ಷಿಸುವ ಕಾರ್ಯ ಮಾಡಬೇಕು ಎಂದರು.
ತಾಲೂಕು ಪಂಚಾಯತ್ ಮಾಜಿ ಸದಸ್ಯ ಎಸ್. ಆಬ್ಬಾಸ್ ಮಾತನಾಡಿ ಈ ಪ್ರದೇಶದಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಹಲವಾರು ಯೋಜನೆಯನ್ನು ನಡೆಸಿದ್ದು, ಬೋರ್‌ವೆಲ್, ನಳ್ಳಿ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಆದರೆ ಬೋರ್‌ವೆಲ್‌ನಲ್ಲಿ ನೀರು ಕಡಿಮೆಯಾಗಿದ್ದರಿಂದ ಈ ವ್ಯಾಪ್ತಿಯ ಜನರಿಗೆ ನೀರಿನ ಸಮಸ್ಯೆಯಿತ್ತು. ಆದರೆ ನೂತನ ಬಾವಿ ನಿರ್ಮಾಣದಿಂದ ಉತ್ತಮ ನೀರಿನ ವ್ಯವಸ್ಥೆ ಬಾವಿಯಲ್ಲಿದ್ದು, ಸ್ಥಳೀಯರಿಗೆ ಸಹಕಾರಿಯಾಗಲಿದೆ ಎಂದರು.
ಹೆಲ್ಪ್ ಇಂಡಿಯಾ ಫೌಂಡೇಶನ್ ಪ್ರ.ಕಾರ್ಯದರ್ಶಿ ರಾಝಿಕ್ ಉಳ್ಳಾಲ್ ಕಾರ್ಯಕ್ರಮದ ನೇತೃತ್ವ ವಹಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ ಸೊಮೇಶ್ವರ, ವಕ್ಪ್ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಎಸ್. ಅಬೂಬಕ್ಕರ್ ಸಜಿಪ, ತಾಲೂಕು ಪಂಚಾಯತ್ ಸದಸ್ಯರಾದ ಸವೀತಾ ಹೇಮಂತ್ ಕರ್ಕೇರ, ಹೈದರ್ ಕೈರಂಗಳ, ಚೇಳೂರು ಗ್ರಾಮ ಪಂಚಾಯತ್ ಅಧ್ಯಕ್ಷ ರಝಾಕ್ ಕುಕ್ಕಾಜೆ ಇರಾ, ಸಜಿಪ ನಡು ಗ್ರಾಮ ಪಂಚಾಯತ್ ಸದಸ್ಯ ಹಾಗೂ ಗೋಳಿಪಡ್ಪು ಜುಮಾ ಮಸೀದಿ ಅಧ್ಯಕ್ಷ ಮಹಮ್ಮದ್ ರಫೀಕ್, ಮುಡಿಪು ಬ್ಲಾಕ್ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜಲೀಲ್ ಮೋಟುಂಗೋಳಿ, ಸಜಿಪ ನಡು ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯ ಸತ್ತಾರ್, ಮುಡಿಪು ಬ್ಲಾಕ್ ಕಾಂಗ್ರೆಸ್‌ನ ಕಾರ್ಮಿಕ ಘಟಕದ ಅಧ್ಯಕ್ಷ ನಾಸೀರ್ ನಡುಪದವು, ಮದನಿ ನಗರ ಜುಮಾ ಮಸೀದಿಯ ಅಧ್ಯಕ್ಷ ಯು.ಕೆ. ಮಹಮ್ಮದ್, ಉದ್ಯಮಿ ಯು.ಎಚ್. ಹಸೈನಾರ್, ಸಿರಾಜ್, ಮುಸ್ತಾಫ, ಅಬ್ದುಲ್ ಕಮಾಲ್, ಕುರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಝುಬೈರ್ ಉಪಸ್ಥಿತರಿದ್ದರು.












