ಮಡಿಕೇರಿ ನಿವಾಸಿ ಪುತ್ತೂರಿನಲ್ಲಿ ಆತ್ಮಹತ್ಯೆ
ಪುತ್ತೂರು: ಮಡಿಕೇರಿ ನಿವಾಸಿಯೊಬ್ಬರು ಪುತ್ತೂರಿನ ಲಾಡ್ಜೊಂದರಲ್ಲಿ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ. ಮಡಿಕೇರಿಯ ಕನ್ನಂಡಬಾಣೆ ನಿವಾಸಿ ಪುರುಷೋತ್ತಮ ಪಿ.ಜೆ (38) ಆತ್ಮಹತ್ಯೆ ಮಾಡಿಕೊಂಡವರು. ಮಾ.2ರಂದು ಪುತ್ತೂರಿನ ಬಸ್ಸು ನಿಲ್ದಾಣದ ಬಳಿಯಲ್ಲಿನ ಲಾಡ್ಜ್‌ನಲ್ಲಿ ಬಾಡಿಗೆಗೆ ಕೊಠಡಿ ಪಡೆದುಕೊಂಡಿದ್ದ ಪುರುಷೋತ್ತಮ ಅವರು ರಾತ್ರಿ ತನ್ನ ಕೊಠಡಿಯ ಬಾಗಿಲು ಲಾಕ್ ಹಾಕಿ ಒಳಗಡೆ ಬೆಡ್‌ಶೀಟ್‌ನಿಂದ ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪುರುಷೋತ್ತಮ ಅವರಿಗೆ 7 ವರ್ಷಗಳ ಹಿಂದೆ ವಿವಾಹವಾಗಿದ್ದು, ಐದು ವರ್ಷಗಳ ಹಿಂದೆ ಇವರ ಪತ್ನಿ ಹಾಗೂ ಮಗು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಮಾನಸಿಕ ಅಸ್ವಸ್ಥರಾಗಿದ್ದ ಮಂಗಳೂರಿನ ಹೊಟೇಲೊಂದರಲ್ಲಿ ಉದ್ಯೋಗ ಮಾಡಿಕೊಂಡಿದ್ದರು. ಇದೇ ಕೊರಗಿನಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





