ವಿದ್ಯಾರ್ಥಿಗೆ ಬಲವಾದ ಹೊಡೆತ : ಪೊಲೀಸ್ ಗೂಂಡಾಗಿರಿ
ಮಂಡಿ,ಮಾರ್ಚ್.6: ಮಂಡಿಯ ಪ್ರಭಾರ ಠಾಣಾಧಿಕಾರಿಯೊಬ್ಬರ ಗೂಂಡಾಗಿರಿ ಪ್ರಕರಣ ವರದಿಯಾಗಿದೆ. ಕ್ರಿಕೆಟ್ ಆಡುತ್ತಿದ್ದ ವಿದ್ಯಾರ್ಥಿಗಳ ಕೆನ್ನೆಗೆ ಬಾರಿಸಿ ಸುದ್ದಿಯಾಗಿದ್ದಾರೆ. ಕ್ರಿಕೆಟ್ ಆಡುವ ವೇಳೆ ಚೆಂಡು ಪೊಲಿಸ್ ಠಾಣೆ ಪರಿಸರದೊಳಕ್ಕೆ ಬಿದ್ದಿತ್ತು. ಚೆಂಡನ್ನು ಹೆಕ್ಕಲು ಹೋದಾಗ ಪೊಲೀಸರು ವಿದ್ಯಾರ್ಥಿಗಳಿಗೆ ಚೆನ್ನಾಗಿ ಬಾರಿಸಿದ್ದಾರೆ.
ವಿದ್ಯಾರ್ಥಿಗಳು ಪೊಲೀಸಧಿಕಾರಿ ಹೊಡೆಯುತ್ತಿರುವುದನ್ನು ವೀಡಿಯೊ ಮಾಡಿದ್ದರು. ಅದನ್ನು ಎಸ್‌ಡಿಎಮ್‌ಗೆ ಕೊಟ್ಟು ದೂರುನೀಡಿದ್ದಾರೆ. ವಿದ್ಯಾರ್ಥಿಗಳ ದೂರನ್ನು ಸ್ವೀಕರಿಸಿದ ಎಸ್‌ಡಿಎಮ್ ತಪ್ಪಿಸ್ಠ ಎಸ್ಸೈ ರಾಘವ್ ಶರ್ಮರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದೇ ಠಾಣೆಯ ಎಸ್ಸೈ ವಿರುದ್ಧ ಈ ಹಿಂದೆಯೂ ದೂರು ಬಂದಿತ್ತು. ಹಲವರು ಅವರ ಗೂಂಡಾಗಿರಿಯ ವಿರುದ್ಧ ದೂರು ನೀಡಿದ್ದರು. ಮಂಡಿ ಎಸ್ಪಿಗೆ ಎಸ್ಸೈ ದುರ್ನತೆ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಆದರೂ ಅವರನ್ನು ಗೌಹರ್ ಠಾಣೆಯಿಂದ ಸ್ಥಳಾಂತರಿಸಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಮೊದಲೊಮ್ಮ ಅವರನ್ನು ಅಲ್ಲಿಂದ ಟ್ರಾನ್ಸ್‌ಫಾರ್‌ಗೆ ಪೊಲೀಸ್ ಅಧೀಕ್ಷಕರು ಆದೇಶಿಸಿದ್ದರು. ಆದರೆ ನಂತರ ಮನಸು ಬದಲಿಸಿ ತನ್ನ ಆದೇಶವನ್ನು ವಾಪಸು ಪಡೆದಿದ್ದರು.





