Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ರಾಜಕಾರಣಿಗಳಿಂದ ಪತ್ರಕರ್ತರ ದಮನ:...

ರಾಜಕಾರಣಿಗಳಿಂದ ಪತ್ರಕರ್ತರ ದಮನ: ರಾಜ್‌ದೀಪ್

ವಾರ್ತಾಭಾರತಿವಾರ್ತಾಭಾರತಿ6 March 2016 10:34 PM IST
share
ರಾಜಕಾರಣಿಗಳಿಂದ ಪತ್ರಕರ್ತರ ದಮನ: ರಾಜ್‌ದೀಪ್

ಬೆಂಗಳೂರು, ಮಾ. 6: ಸಮಾಜದ ಧ್ವನಿಯಾಗಿರುವ ಪತ್ರಕರ್ತರಲ್ಲಿನ ಐಕ್ಯತೆಯನ್ನು ದಮನಗೊಳಿಸಲು ರಾಜಕಾರಣಿಗಳು ಯತ್ನಿಸುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದು ವರಿದರೆ ನಮ್ಮ ದೇಶದಲ್ಲಿನ ಪತ್ರಿಕೋದ್ಯಮವು ತನ್ನ ವೌಲ್ಯವನ್ನು ಕಳೆದುಕೊಳ್ಳಬಹುದು ಎಂದು ಹಿರಿಯ ಪತ್ರಕರ್ತ ಹಾಗೂ ಇಂಡಿಯಾ ಟುಡೆ ಗ್ರೂಪ್‌ನ ಸಮಾಲೋಚನ ಸಂಪಾದಕ ರಾಜ್‌ದೀಪ್ ಸರ್ ದೇಸಾಯಿ ಆತಂಕ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿಬೆಂಗಳೂರು ಟಿವಿ ಜರ್ನಲಿಸ್ಟ್ ಅಸೋಸಿಯೇ ಶನ್ ವತಿಯಿಂದ ಏರ್ಪಡಿಸಲಾಗಿದ್ದ ‘ಮಾಧ್ಯಮಸಂವಾದ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜಕೀಯ ಪಕ್ಷಗಳು ತಮ್ಮದೇ ಆದ ಪತ್ರಿಕಾ ಬಳಗವನ್ನು ರೂಪಿಸಿಕೊಳ್ಳುತ್ತಿರುವುದರಿಂದ, ಅವರು ತಮ್ಮಲ್ಲಿನ ತಪ್ಪುಗಳನ್ನು ಗುರುತಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯ ಪಕ್ಷಗಳಿಗೆ ಪತ್ರಕರ್ತರಲ್ಲ್ಲ, ಪಿಆರ್‌ಒಗಳು ಬೇಕಾಗಿದ್ದಾರೆ. ಪ್ರತಿದಿನ ಅವರಿಗೆ ಚಪ್ಪಾಳೆ ಹೊಡೆಯುವ ಕೈಗಳ ಅಗತ್ಯವಿದೆಯೇ ಹೊರತು, ಅವರ ತಪ್ಪುಗಳನ್ನು ತಿದ್ದುವ ಕೈಗಳ ಅಗತ್ಯವಿಲ್ಲ ಎಂಬ ಸ್ಥಿತಿಯನ್ನು ನಿರ್ಮಿಸಿಕೊಂಡಿದ್ದಾರೆ ಎಂದರು.
ದಿಲ್ಲಿಯ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಪ್ರಕರಣದಲ್ಲಿ ಸುದ್ದಿವಾಹಿನಿಗಳು ರಾಜಕೀಯ ಒತ್ತಡಕ್ಕೆ ಪ್ರೇರಿತ ವಾಗಿ ಎಡ-ಬಲಪಂಥೀಯ ಸಿದ್ಧಾಂತಗಳನ್ನು ಪ್ರಸಾರ ಮಾಡಿ ತಮ್ಮನ್ನೆ ವಿಭಜಿಕೊಂಡಿದ್ದಾರೆ ಎಂದು ನಿಮಗೆ ಅನಿಸುವುದಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೇಸಾಯಿ, ಕನ್ಹಯ್ಯಿ ಭಾಷಣ ಕುರಿತು ಬಿಂಬಿಸಿದ ಸುದ್ದಿಗಳ ಬಗ್ಗೆ ಸಾರ್ವಜನಿಕ ವಲಯದಲ್ಲೂ ಸಂಶಯ ಕಂಡುಬಂದಿದೆ. ಇಂತಹ ಬೆಳವಣಿಗೆಯೂ ಒಂದು ಸುದ್ದಿವಾಹಿನಿಯ ವೌಲ್ಯವನ್ನು ಕಡಿಮೆಗೊಳಿಸುತ್ತದೆ ಎಂದು ನುಡಿದರು.
ಪತ್ರಕರ್ತ ದೇವರಲ್ಲ, ಜಿರಳೆಯಂತೆ ಇರಬೇಕು: ಕೆಲ ಪತ್ರಕರ್ತರು ತಮ್ಮನ್ನು ತಾವೇ  ದೇವರು, ಭಗವಾನ್ ಎಂದೆಲ್ಲಾ ಬಿಂಬಿಸಿಕೊಳ್ಳುತ್ತಿ ದ್ದಾರೆ. ಆದರೆ, ಮೊದಲು ನಾವು ಮನುಷ್ಯರೆಂದು ತಿಳಿದು ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಜಿರಳೆ ಗಳಂತೆ ಎಲ್ಲ ದೃಷ್ಟಿಕೋನದಿಂದ ಸಮಾಜವನ್ನು ನೋಡಬೇಕಾಗಿದೆ. ಎಲ್ಲವನ್ನೂ ನಾವೇ ನಿರ್ಧರಿ ಸುತ್ತೇವೆ ಎಂಬ ಭಾವನೆಯೂ ಕೆಲವರಿಗೆ ಇರುವುದು ಸರಿಯಲ್ಲ ಎಂದು ಸರ್‌ದೇಸಾಯಿ ಕಿವಿಮಾತು ಹೇಳಿದರು.
ಸುದ್ದಿವಾಹಿನಿಗಳು ಸಂಜೆಯ ವೇಳೆಗೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಚರ್ಚೆಗಳನ್ನು ನಡೆಸುತ್ತವೆ. ಇದರಿಂದ ಸಮಾಜಕ್ಕೆ ಎಷ್ಟರ ಮಟ್ಟಿಗೆ ಉಪಯೋಗವಾಗುತ್ತಿದೆ ಎಂದು ಯೋಚನೆ ಮಾಡಬೇಕು ಎಂದ ಅವರು, ದೇಶದ ಸೇನೆಯ ಬಗ್ಗೆ ಟೀಕೆ ಮಾಡುವ ಆ್ಯಂಕರ್‌ಗಳು 2 ವರ್ಷ ದೇಶದ ಗಡಿಭಾಗದಲ್ಲಿ ಕಾಯುವ ಕೆಲಸ ಮಾಡಲಿ ಎಂದರು.
ಪತ್ರಕರ್ತರು ನ್ಯಾಯಾಧೀಶರಾಗಬಾರದು, ನಮ್ಮದೇನಿದ್ದರೂ ವರದಿ ಮಾಡುವುದಷ್ಟೇ ಕೆಲಸ, ಪತ್ರಕರ್ತರಾದ ನಾವು ನ್ಯಾಯಾಧೀಶರಲ್ಲ ಕೇವಲ ವರದಿಗಾರರು ಮಾತ್ರ ಎಂಬ ಸತ್ಯವನ್ನು ತಮ್ಮ ವೃತ್ತಿ ಬದುಕಿನಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಪತ್ರಕರ್ತರು ಒಂದು ಸೀಮಿತ ಸಿದ್ಧಾಂತಕ್ಕೆ ಕಟ್ಟು ಬೀಳದೆ, ಸರಿ-ತಪ್ಪುಗಳನ್ನು ಗುರುತಿಸುವ ಕೆಲಸ ಮಾಡಬೇಕು. ಯಾವುದೇ ವಿಷಯವನ್ನು ರಾಜಕೀಯ ಬಣ್ಣ ನೀಡುವ ಕೆಲಸ ಪತ್ರಕರ್ತ ರದ್ದಲ್ಲ. ಪ್ರತಿಯೊಬ್ಬ ಪತ್ರಕರ್ತನೂ ಧ್ವನಿ ಇಲ್ಲ ದವರ ಹಾಗೂ ಶೋಷಿತರ ಪರವಾಗಿ ನಿಲ್ಲಬೇಕು ಎಂದು ಅವರು ಕರೆ ನೀಡಿದರು.
 ಸುದ್ದಿ ವಾಹಿನಿಗಳು ಟಿಆರ್‌ಪಿ ಹೆಚ್ಚಿಸುವ ಸುದ್ದಿಗಳ ಪ್ರಸಾರಕ್ಕಾಗಿ ತುದಿಗಾಲಲ್ಲಿ ನಿಲ್ಲುತ್ತಾರೆ ಎಂಬ ಮಾತಿದೆ. ಈ ಬಗ್ಗೆ ತಮ್ಮ ಅನಿಸಿಕೆ ಏನು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಸುದ್ದಿ ಮಾಧ್ಯಮಗಳು ಮನರಂಜಿಸುವ ಮಾಧ್ಯಮವಲ್ಲ. ಅಲ್ಲದೆ, ಮನರಂಜನೆ ಬೇಕು ಎನ್ನುವವರು ಸಿನೆಮಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ. ಟಿಆರ್‌ಪಿ ಬಗ್ಗೆ ಸುದ್ದಿಯಲ್ಲಿ ಆಯ್ಕೆ ಇದೆ ಎಂದುಕೊಂಡಿಲ್ಲ. ನೈಜ ಸುದ್ದಿ ಮತ್ತು ಶೋಷಿತ ಪರ ಧ್ವನಿ ಎತ್ತುವ ವಿಶೇಷ ವರದಿಗಳಿಲ್ಲೂ ಟಿಆರ್‌ಪಿ ಹೆಚ್ಚಾಗಿರುವ ಉದಾಹರಣೆಗಳಿವೆ ಎಂದರು.
ಕಾರ್ಪೊರೇಟ್ ಕೈಯಲ್ಲಿ ಮಾಧ್ಯಮ: ದೇಶದ ಬಹಳಷ್ಟು ಸುದ್ದಿ ವಾಹಿನಿಗಳು ಕಾರ್ಪೊರೇಟ್‌ಗಳ ಕೈಯಲ್ಲಿವೆ. ಇಂತಹ ಸುದ್ದಿವಾಹಿನಿಗಳಲ್ಲಿ ಏನೆಲ್ಲಾ ನೋಡಬಹುದೆಂದು ತಿಳಿದಿದೆ. ಸುದ್ದಿವಾಹಿನಿಯನ್ನು ಬಳಕೆ ಮಾಡಿಕೊಂಡು ಕೆಲ ಮಾಲಕರು ಮತ್ತು ಪ್ರಭಾವಿ ಸಂಪಾದಕರು ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ ಎಂದು ಸರ್‌ದೇಸಾಯಿ ದೂರಿದರು.
ಇಂದು ಸುದ್ದಿ ವಾಹಿನಿ ಒಂದು ಮನೋರಂಜನೆ ಯಾಗಿಬಿಟ್ಟಿದೆ. ಹೀಗಾಗಿ, ಮಾಧ್ಯಮದವರು ಸಾಮಾಜಿಕ ಜವಾಬ್ದಾರಿಯಿಂದ ಕಾರ್ಯನಿರ್ವಹಿ ಸುವ ಮೂಲಕ ಕಳೆದು ಹೋಗಿರುವ ಗೌರವವನ್ನು ಪುನಃ ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
1998ರಿಂದ ಸುದ್ದಿವಾಹಿನಿಗಳ ಯುಗ ಪ್ರಾರಂಭವಾಗಿದ್ದು, ಇದೀಗ ಕರ್ನಾಟಕದಲ್ಲಿ 12, ಆಂಧ್ರದಲ್ಲಿ 24 ಸುದ್ದಿವಾಹಿನಿಗಳು ಸೇರಿ ಸಾವಿರಾರು ಸುದ್ದಿವಾಹಿನಿಗಳು ದೇಶದಲ್ಲಿ ಚಾಲ್ತಿಯಲ್ಲಿವೆ ಎಂದ ಅವರು, ರಾಷ್ಟ್ರೀಯ ಸುದ್ದಿವಾಹಿನಿಗಳಿಗಿಂತ ಪ್ರಾದೇಶಿಕ ಸುದ್ದಿವಾಹಿನಿಗಳು ಹೆಚ್ಚಾಗಿದ್ದು, ಸಾಮಾಜಿಕ ಬದಲಾವಣೆಗೆ ಶ್ರಮಿಸಬಹುದಾಗಿದೆ ಎಂದು ಅವರು ಹೇಳಿದರು.
ಯುವ ಪತ್ರಕರ್ತರು ಹೊಸ ಆಲೋಚನೆಗೆ ಮುಂದಾಗಬೇಕು. ಸುದ್ದಿ ವೌಲ್ಯದಲ್ಲಿ ಸೃಜನಶೀಲತೆ ಮತ್ತು ಸಂಪೂರ್ಣ ಮಾಹಿತಿ ಸಂಗ್ರಹಿಸಲು ಮುಂದಾಗಬೇಕು. ಒಬ್ಬರನ್ನು ನಂಬಿ ಸುದ್ದಿ ಮಾಹಿತಿ ಪ್ರಸಾರ ಮಾಡುವುದು ಒಳ್ಳೆಯದಲ್ಲ ಎಂದು ಅವರು ತಿಳಿಸಿದರು.
ಸುಪಾರಿ ಪತ್ರಿಕೋದ್ಯಮ ಧಿಕ್ಕರಿಸಿ: ಕಾಸಿಗಾಗಿ ಸುದ್ದಿ ಪ್ರಸಾರ ಮಾಡುವುದನ್ನು ನಿಲ್ಲಿಸಬೇಕು. ಇಲ್ಲವೆಂದಾದರೆ ಇದು ಸುಪಾರಿ ನೀಡಿ ವರದಿ ಮಾಡಿದಂತೆ ಆಗುತ್ತದೆ. ಅದೇ ರೀತಿ, ಗುಪ್ತ ವರದಿಗಾರಿಕೆಗಳು ಮೊದಲು ಭ್ರಷ್ಟಾಚಾರ ಮಾಡಿದವರನ್ನು ಪತ್ತೆ ಹಚ್ಚಲು ಬಳಸಬೇಕು. ಆದರೆ, ಇದೀಗ ವಸೂಲಿ ವರದಿಗಾರಿಕೆ ಆಗಿದೆ. ಇದರಿಂದ ಮಾಧ್ಯಮದ ವೌಲ್ಯ ಕಳೆದು ಹೋಗುತ್ತಿದೆ ಸರ್‌ದೇಸಾಯಿ ಬೇಸರ ವ್ಯಕ್ತಪಡಿಸಿದರು.

ಕನ್ಹಯ್ಯ ಯುವ ಸಿದ್ಧಾಂತಕ್ಕೆ ಸ್ವಾಗತ
ಜೆಎನ್‌ಯು ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯಾ ಕುಮಾರ್‌ನಲ್ಲಿ ಯುವ ವಯಸ್ಸಿನ ಸಿದ್ಧಾಂತಗಳಿವೆ. ಇದನ್ನು ನಾನು ಸ್ವಾಗತಿಸಿದ್ದೇನೆ. ಕನ್ಹಯ್ಯಾ ಬಗ್ಗೆ ಕೆಲವರು ಕಿಡಿಕಾರಿದ್ದಾರೆ. ಆದರೆ, ಅವರೊಂದು ದಿನ ನಾಯಕರಾಗಲಿದ್ದಾರೆ. -ರಾಜ್‌ದೀಪ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X