Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ‘ಮೊಬೈಲ್ ಮತ್ಸದರ್ಶಿನಿ’ ಉದ್ಘಾಟನೆ

‘ಮೊಬೈಲ್ ಮತ್ಸದರ್ಶಿನಿ’ ಉದ್ಘಾಟನೆ

ವಾರ್ತಾಭಾರತಿವಾರ್ತಾಭಾರತಿ6 March 2016 11:40 PM IST
share
‘ಮೊಬೈಲ್ ಮತ್ಸದರ್ಶಿನಿ’ ಉದ್ಘಾಟನೆ


 

ಮಂಗಳೂರು, ಮಾ.6: ಅಂಜಲ್ ಪೆಪ್ಪರ್ ಫ್ರೈ, ಬಂಗುಡೆ, ಮಾಂಜಿ ಫ್ರೈ ಬಾಯಲ್ಲಿ ನೀರೂರಿಸುವ ಬಿಸಿಬಿಸಿಯಾದ, ಮೀನಿನ ರುಚಿಕರ ಖಾದ್ಯಗಳು. ಈ ಖಾದ್ಯಗಳನ್ನು ಸವಿಯುವ ಅವಕಾಶ ಮಂಗಳೂರಿನ ಮಾಂಸಾಹಾರಿಗಳು ಅದರಲ್ಲೂ ಮೀನು ಖಾದ್ಯಪ್ರಿಯರಿಗೆ ನಗರದ ಆಯ್ದ ಸ್ಥಳಗಳಲ್ಲಿ ಲಭ್ಯವಾಗಲಿದೆ. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ತಾಜಾ ಮೀನುಗಳ ಬಿಸಿ ಬಿಸಿ ಖಾದ್ಯವನ್ನು ಸ್ಥಳದಲ್ಲೇ ಸವಿಯುವುದು ಹಾಗೂ ತಾಜಾ ಮೀನುಗಳನ್ನು ಖರೀದಿಗೆ ಪೂರಕವಾಗುವಂತೆ ‘ಮೊಬೈಲ್ ಮತ್ಸ ದರ್ಶಿನಿ’ ಮಂಗಳೂರಿನಲ್ಲಿ ಸುತ್ತಾಡಲಿದೆ. ಪಿಲಿಕುಳದ ಡಾ.ಶಿವರಾಮ ಕಾರಂತ ನಿಸರ್ಗಧಾಮದ ದೋಣಿ ವಿಹಾರ ಕೇಂದ್ರದಲ್ಲಿ ರವಿವಾರ ಉದ್ಘಾಟನೆಗೊಂಡ ‘ಮೊಬೈಲ್ ಮತ್ಸದರ್ಶಿನಿ’ ಮಂಗಳೂರು ನಗರದ ಜನರಿಗೆ ರುಚಿಕರ ಮೀನುಗಳ ಸವಿಯನ್ನು ಸ್ಥಳದಲ್ಲೇ ಉಣ ಬಡಿಸಲಿದೆ.

ಟಾಟಾ ಏಸ್ ಸೂಪರ್ ವಾಹನದ ಚೇಸಿಸನ್ನು ಬಳಸಿಕೊಂಡು ನಿರ್ಮಿಸಲಾದ 12 ಲಕ್ಷ ರೂ. ವೌಲ್ಯದ ‘ಮೊಬೈಲ್ ಮತ್ಸದರ್ಶಿನಿ’ ಪ್ರತೀ ರವಿವಾರ ಪಿಲಿಕುಳ ದಲ್ಲಿ ಠಿಕಾಣಿ ಹೂಡಲಿದೆ. ಉಳಿದಂತೆ ನಗರದ ಕದ್ರಿ ಪಾರ್ಕ್, ಪಣಂಬೂರು ಬೀಚ್ ಸೇರಿದಂತೆ ನಗರದ 10 ಕಡೆಗಳಲ್ಲಿ ವಾರದ ಇತರ ದಿನಗಳಲ್ಲಿ ಭೇಟಿ ನೀಡಿ ರುಚಿಕರ ಮೀನು ಖಾದ್ಯಗಳನ್ನು ಬಿಸಿ ಬಿಸಿಯಾಗಿ ನೀಡಲಿದೆ. ಮಾತ್ರವಲ್ಲದೆ, ರಾಜ್ಯದಲ್ಲಿ ನಡೆಯುವ ಮತ್ಸಮೇಳ, ಕೃಷಿ ಮೇಳಗಳಿಗೆ ಈ ‘ಮೊಬೈಲ್ ಮತ್ಸ ದರ್ಶಿನಿ’ ಭೇಟಿ ನೀಡಿ ಮತ್ಸದ ವಿವಿಧ ವ್ಯಂಜನಗಳ ಬಗ್ಗೆ ಗ್ರಾಹಕರಿಗೆ ಪರಿಚಯ ನೀಡಲಿದೆ. ‘ರಾಷ್ಟ್ರೀಯ ಕೃಷಿ ವಿಜ್ಞಾನ ಯೋಜನೆ ಯಡಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮಕ್ಕೆ ನೀಡಲಾದ ಅನು ದಾನದಲ್ಲಿ ಈ ಮೊಬೈಲ್ ಕ್ಯಾಂಟೀನನ್ನು ಆರಂಭಿಸಲಾಗಿದೆ.

ಮೀನು ಫ್ರೈ ಮಾಡಲು ಇಲೆಕ್ಟ್ರಿಕಲ್ ಗ್ರಿಲ್, ಮೀನುಗಳನ್ನು ತಾಜಾ ವಾಗಿರಿಸಲು ರೆಫ್ರಿಜರೇಟರ್, ಮೀನು ಗಳನ್ನು ತುಂಡರಿಸಲು ಉಪಕರಣಗಳು, ಗ್ರಾಹಕರಿಗೆ ಕೈ ತೊಳೆಯಲು, ಕುಡಿಯಲು ನೀರಿಗಾಗಿ ಟ್ಯಾಂಕ್‌ನ ವ್ಯವಸ್ಥೆ, ಮೀನಿನ ತ್ಯಾಜ್ಯ ಸಂಗ್ರಹಕ್ಕೆ ತೊಟ್ಟಿ ಮೊದಲಾದ ಅಗತ್ಯ ಸಲಕರಣೆಗಳನ್ನು ಈ ವಾಹನ ಹೊಂದಿದೆ’’ ಎಂದು ನಿಗಮದ ವ್ಯವ ಸ್ಥಾಪಕ ನಿರ್ದೇಶಕ ವಿ.ಕೆ. ಶೆಟ್ಟಿ ಹೇಳಿದ್ದಾರೆ. ಕೆಎಫ್‌ಡಿಸಿ ವತಿಯಿಂದ ಮಂಗಳೂರು ನಗರದಲ್ಲಿ ಇನ್ನು ಚ್ಠಿಢ್ಛಜಿ.ಜ್ಞಿ ಆನ್‌ಲೈನ್ ಮೂಲಕವೂ ಮೀನು ಗ್ರಾಹಕರ ಮನೆ ಬಾಗಿಲಿಗೆ ಪೂರೈಕೆ ಆರಂಭಗೊಂಡಿದೆ.

300 ಕೆ.ಜಿ. ಮೀನು ಇರಿಸುವ ಸಾಮರ್ಥ್ಯ!

ವಾಹನದಲ್ಲಿ ಏಕಕಾಲದಲ್ಲಿ 300 ಕೆ.ಜಿ.ಗಳಷ್ಟು ಮೀನನ್ನು ಸಂಗ್ರಹಿಸುವ ಸಾಮರ್ಥ್ಯವಿದೆ. ರವಿವಾರ ಪಿಲಿಕುಳವನ್ನು ಹೊರತುಪಡಿಸಿ ನಗರದ ಇತರ ಆಯ್ದ 10 ಜನ ಸೇರುವ ಸ್ಥಳಗಳಲ್ಲಿ ಈ ಮೊಬೈಲ್ ಕ್ಯಾಂಟೀನ್ ಸೇವೆಯನ್ನು ಒದಗಿಸಲಿದೆ. ತಾಜಾ, ಶುದ್ಧ ಹಾಗೂ ರುಚಿಕರ ಮೀನಿನ ಖಾದ್ಯಗಳನ್ನು ಗ್ರಾಹಕರಿಗೆ ಒದಗಿಸುವುದು ಈ ಮೊಬೈಲ್ ಕ್ಯಾಂಟೀನ್‌ನ ಉದ್ದೇಶ ಎಂದು ಕೆಎಫ್‌ಡಿಸಿಯ ಜನರಲ್ ಮ್ಯಾನೇಜರ್ ಮುದ್ದಣ್ಣ ‘ವಾರ್ತಾಭಾರತಿ’ಗೆ ತಿಳಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X