ಭಾರತೀಯ ಧರ್ಮಗುರುವಿನ ಅಪಹರಣ; ಪೋಪ್ ಖಂಡನೆ
ಏಡನ್, ಮಾ. 6: ಕಳೆದ ವಾರ ಯಮನ್‌ನ ವೃದ್ಧಾಶ್ರಮ ವೊಂದರಲ್ಲಿ ಕನಿಷ್ಠ 15 ಮಂದಿಯನ್ನು ಹತ್ಯೆಗೈದಿದ್ದ ಬಂದೂಕು ಧಾರಿಗಳು, ಭಾರತೀಯ ಧರ್ಮಗುರುವೊಬ್ಬರ ಅಪಹರಣವನ್ನೂ ಮಾಡಿದ್ದಾರೆ ಎಂದು ಅಧಿಕಾರಿಗಳು ರವಿವಾರ ಹೇಳಿದ್ದಾರೆ.
ಅದೇ ವೇಳೆ, ಈ ಕೃತ್ಯವನ್ನು ಪೋಪ್ ಫ್ರಾನ್ಸಿಸ್ ಖಂಡಿಸಿದ್ದಾರೆ ಹಾಗೂ ಈ ಘಟನೆಯ ಬಗ್ಗೆ ಜಗತ್ತು ತೋರಿಸಿದ ನಿರ್ಲಕ್ಷಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ.
ಫಾದರ್ ಟಾಮ್ ಉಳುನ್ನಲಿಲ್ ಎಂಬವರನ್ನು ಬಂದೂಕುಧಾರಿಗಳು ಅಪಹರಿಸಿದ್ದಾರೆ ಎಂದು ವಿದೇಶ ಸಚಿವೆ ಸುಷ್ಮ್ಮಾ ಸ್ವರಾಜ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.
Next Story





