ಚಿತ್ರ ನೂರು ಅರ್ಥಗಳನ್ನು ಮೂಡಿಸುವ ಕಲೆ: ಡಾ. ಎಸ್.ಎ.ಕೃಷ್ಣಯ್ಯ

ಉಡುಪಿ, ಮಾ.6: ಚಿತ್ರಗಳು ಮೂರ್ತ, ಅಮೂರ್ತ, ಚಿಕಣಿ, ಗೀರು ಚಿತ್ರ, ಕಾವಿಚಿತ್ರ ಹೀಗೆ ಯಾವುದೇ ಇರಬಹುದು, ಅದು ನೂರು ಅರ್ಥಗಳನ್ನು ಮೂಡಿಸುವ ಕಲೆ ಎಂದು ಜಾನಪದ ವಿದ್ವಾಂಸ, ಉಡುಪಿ ಪ್ರಾಚ್ಯ ಸಂಚಯ ಸಂಶೋಧನಾಲಯದ ಸ್ಥಾಪಕಾಧ್ಯಕ್ಷ ಡಾ.ಎಸ್.ಎ.ಕೃಷ್ಣಯ್ಯ ಅಭಿಪ್ರಾಯಪಟ್ಟಿದ್ದಾರೆ.
ಉಡುಪಿಯ ಚಿತ್ರಕಲಾ ಮಂದಿರ ಕಲಾ ವಿದ್ಯಾಲಯದ ವಾರ್ಷಿಕ ಚಿತ್ರಕಲಾ ಪ್ರದರ್ಶನ 'ವರ್ಣ ನಿರಂತರ-2016'ನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉಡುಪಿಯ ಹಿರಿಯ ಕಲಾವಿದ ಕೆ.ಎಲ್.ಭಟ್ ಅಧ್ಯಕ್ಷತೆ ವಹಿಸಿದ್ದರು. ಬಾರಕೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಚಿತ್ರಕಲಾ ಅಧ್ಯಾಪಕ ದಿನಮಣಿ ಶಾಸ್ತ್ರಿ ಮಾತನಾಡಿದರು. ಶಾಲೆಯ ಪ್ರಾಂಶುಪಾಲ ರಾಜೇಂದ್ರ ತ್ರಾಸಿ ಉಪಸ್ಥಿತರಿದ್ದರು. ಕಲಾ ವಿದ್ಯಾರ್ಥಿ ಸಂತೋಷ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರಮೋದನ ಉಪಾಧ್ಯ ವಂದಿಸಿದರು.
Next Story





