ವಿದ್ವಂಸಕತೆಯ ನಿಜ ಬಣ್ಣ ಬಯಲಾಗುತ್ತಿವೆ
ಭಾರತದ ಆಡಳಿತ ಚುಕ್ಕಾಣಿಗಾಗಿ ರಾಜಕಾರಣಿಗಳು ರಾಷ್ಟ್ರವನ್ನು ಒಡೆದು ಆಳುವ ಪ್ರವೃತಿಗೆ ಇಳಿಯಲು ನಾಚದೆ, ಹಲವು ಅಮಾಯಕರ ರಕ್ತದಲ್ಲೇ ಅಧಿಕಾರದ ದಾಹ ತೀರಿಸಲು ಯಶಸ್ವಿಯಾಗಿದ್ದಾರೆ. ಆದರೆ ಕೆಲವೊಮ್ಮೆ ಸತ್ಯವು ತನಗರಿವಿಲ್ಲದೆ ಹೊರಬರುತ್ತಿರುವುದು, ಈ ಸತ್ಯಗಳು ಒಂದು ಸಮುದಾಯದ ವಿರುದ್ಧ ಸಂಘಟಿತವಾದ ಕೃತ್ಯಗಳೆಂದು ಬಯಲಾಗಿದೆ. ಹೆಚ್ಚಿನ ವಿಧ್ವಂಸಕತೆ ಕೃತ್ಯಗಳು ಸಂಘ ಪರಿವಾರದ ವಾಸನೆಯ ಸರಕಾರದ ಆಡಳಿತ ಸಮಯದಲ್ಲೇ ನಡೆದಂತಹ ಘಟನೆಗಳಾಗಿವೆ. ಸಂಸತ್ ದಾಳಿಯ ರೂವಾರಿ ಅಪ್ಝಲ್ ಗುರುವಿನ ಬಗ್ಗೆ ಮಾಜಿ ಗೃಹಸಚಿವರಾದ ಚಿದಂಬರಂ ಅವರ ಸಂಶಯ, ಹಲವು ಎನ್‌ಕೌಂಟರ್ ಮತ್ತು ನರಹತ್ಯೆ ಬಗ್ಗೆ ಮಾಜಿ ಅಧಿಕಾರಿಗಳಿಂದ ನಿಜಬಣ್ಣ ಬಯಲು ಮೊದಲಾದ ಘಟನೆಗಳ ಬಗ್ಗೆ ಆಘಾತಕಾರಿ ವಿಷಯಗಳು ಸ್ಫೋಟಗೊಂಡಿದ್ದು, ಇದರಿಂದ ದೇಶವೇ ತಲೆ ತಗ್ಗಿಸುವಂತಾಗಿದೆ.
Next Story





