ಹೊಸನಗರ: ಮಸೀದಿ ಉದ್ಘಾಟನೆಲ್ಲಿ ಎಸ್ವೈಎಸ್ ಸೆಂಟರ್ ಕೆ.ಸಿ. ರೋಡ್ ಅಧೀನದಲ

ಮಂಗಳೂರು, ಮಾ.6: ಕೋಟೆಕಾರ್ ಗ್ರಾಮದ ಹೊಸನಗರದಲ್ಲಿ ಎಸ್‌ವೈಎಸ್ ಸೆಂಟರ್ ಕೆ.ಸಿ. ರೋಡ್ ಅಧೀನದಲ್ಲಿ ಕಾರ್ಯಾಚರಿಸುವ ತಾಜುಲ್ ಉಲಮಾ ಎಜುಕೇಶನಲ್ ಸೆಂಟರ್‌ನ ಹೆಸರಿನಲ್ಲಿ ನೂತನ ಮಸೀದಿಯು ಇತ್ತೀಚೆಗೆ ಉದ್ಘಾಟನೆಗೊಂಡಿತು.
ಅಲ್‌ಹಾಜ್ ಅಬ್ಬಾಸ್ ಉಸ್ತಾದ್ ಮಂಜನಾಡಿ ಮಸೀದಿಯ ಉದ್ಘಾಟನೆ ಮಾಡಿ ವಕ್ಫ್ ನಿರ್ವಹಣೆ ಮಾಡಿದರು. ರಾಜ್ಯ ಎಸ್‌ವೈಎಸ್ ಅಧ್ಯಕ್ಷ ಅಲ್‌ಹಾಜ್ ಕೆ.ಪಿ. ಹುಸೈನ್ ಸಅದಿ ಅಧ್ಯಕ್ಷತೆ ವಹಿಸಿದ್ದರು. ಇಬ್ರಾಹೀಂ ಸಅದಿ ಮಸೀದಿಯ ಪಾವಿತ್ರತೆಯ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಖಾದರ್ ಸಖಾಫಿ, ಪಿ.ಕೆ. ಮುಹಮ್ಮದ್ ಮದನಿ, ಯು.ಬಿ. ಮುಹಮ್ಮದ್ ಹಾಜಿ, ಅಬ್ಬಾಸ್ ಹಾಜಿ, ಅಬ್ಬಾಸ್ ಹಾಜಿ ಪೇರಿಬೈಲ್, ಮುನೀರ್ ಸಖಾಫಿ, ಇಬ್ರಾಹೀಂ ಮದನಿ ಉಪಸ್ಥಿತರಿದ್ದರು. ಎಸ್‌ವೈಎಸ್ ಸೆಂಟರ್ ಕೆ.ಸಿ.ರೋಡ್ ಅಧ್ಯಕ್ಷ ಎನ್.ಎಸ್.ಉಮರ್ ಮಾಸ್ಟರ್ ವಂದಿಸಿದರು.
Next Story





