ಎಲ್ಲರಿಗೂ ನ್ಯಾಯ ದೊರೆಯುವುದನ್ನು ಖಚಿತ ಪಡಿಸುವ ಅಗತ್ಯವಿದೆ: ರಾಜನಾಥ್ ಸಿಂಗ್

ಹೊಸದಿಲ್ಲಿ, ಮಾ.6: ಎಲ್ಲರಿಗೂ ನ್ಯಾಯ ದೊರೆಯುವುದನ್ನು ಖಚಿತಪಡಿಸುವ ಹಾಗೂ ಎಲ್ಲ ಮಟ್ಟಗಳಲ್ಲೂ ಪರಿಣಾಮ ಕಾರಿ, ಉತ್ತರದಾಯಿ ಹಾಗೂ ಎಲ್ಲರನ್ನೊಳ ಗೊಳಿಸುವ ಸಂಸ್ಥೆಗಳನ್ನು ಕಟ್ಟುವುದು ಅಗತ್ಯವಾಗಿದೆಯೆಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇಂದಿಲ್ಲಿ ಹೇಳಿದ್ದಾರೆ.
‘‘ರಾಷ್ಟ್ರೀಯ ಹಸಿರು ಪ್ರಾಧಿಕಾರವನ್ನು ಬೆಂಬಲಿಸುವ ಕಾನೂನು ಆಡಳಿತ-2030’’ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಎಲ್ಲ ರೀತಿಯ ಹಿಂಸಾಚಾರವನ್ನು ನಿಯಂತ್ರಿಸುವ ಹಾಗೂ ಕೇವಲ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕಾನೂನು ಆಡಳಿತವನ್ನು ಉತ್ತೇಜಿಸಬೇಕಾದ ಅಗತ್ಯವನ್ನು ಜಾಗತಿಕ ಸಮುದಾಯವು ಗಮನಿಸಿ ದುದು ಬಹಳ ಪ್ರಧಾನವಾಗಿದೆ ಎಂದರು.
ಸಂಬಂಧಿಸಿದ ಎಲ್ಲರೂ, ಪರಿಸರ ನ್ಯಾಯ ಹಾಗೂ ತಾಳಿಕೆಯ ಅಭಿವೃದ್ಧಿಗೆ ಅಗತ್ಯವಿರುವ ಕಾನೂನು ಆಡಳಿತಗಳ ವಿಚಾರವಾಗಿ ದನಿಯೆತ್ತುವರೆಂಬುದು ತನ್ನ ಆಶಾವಾದವಾಗಿದೆಯೆಂದು ರಾಜನಾಥ್ ತಿಳಿಸಿದರು.
Next Story





