ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಕೆಳಗೆ ಹಾರಿದ ಯುವತಿ

ಕೋಲ್ಕತ್ತಾ , ಮಾ.7: ಯುವತಿಯೊಬ್ಬಳು ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಎರಡನೇ ಮಹಡಿಯಿಂದ ಕೆಳಗೆ ಜಿಗಿದು ಗಾಯಗೊಂಡಿರುವ ಘಟನೆ ಘಟನೆ ಕೋಲ್ಕತ್ತಾ ಸಮೀಪ ರವಿವಾರ ನಡೆದಿದೆ.,
ತನ್ನ ಗೆಳೆಯನನ್ನು ಭೇಟಿಯಾಗಲು ಅಪಾರ್ಟ್‌ಮೆಂಟ್‌ಗೆ ಬಂದಿದ್ದ ಯುವತಿಯ ಮೇಲೆ ಗೆಳೆಯನ ಸ್ನೇಹಿತರು ಅತ್ಯಾಚಾರಕ್ಕೆ ವಿಫಲ ಯತ್ನ ನಡೆಸಿದರು ಎನ್ನಲಾಗಿದೆ. ಅವರಿಂದ ತಪ್ಪಿಸಿಕೊಳ್ಳಲು ಹೋದ ಯುವತಿ ಮಹಡಿಯಿಂದ ಜಿಗಿದಳು. ಪರಿಣಾಮವಾಗಿ ಆಕೆಯ ತಲೆಗೆ ಪೆಟ್ಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
20 ವರ್ಷದ ಯುವತಿ ಆಕೆಯ ಗೆಳೆಯನನ್ನು ಭೇಟಿಯಾಗಲೆಂದು ಅವನ ಅಪಾರ್ಟ್ ಮೆಂಟ್ ಗೆ ಬಂದಿದ್ದಳು. ಆಗ ಅಲ್ಲಿ ಅವನ ಮತ್ತಿಬ್ಬರು ಸ್ನೇಹಿತರು ಇದ್ದರು.ಯುವಕ ಸ್ನೇಹಿತರು ಯುವತಿಗೆ ಅಮಲು ಪದಾರ್ಥ ಕುಡಿಸಿದರು. ಅತ್ಯಚಾರಕ್ಕೆ ಯತ್ನಿಸಿದರು. ಯುವತಿ ನಿರಾಕರಿಸಿ ಅವರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಕಟ್ಟಡದ ಎರಡನೆ ಮಹಡಿಯಿಂದ ಕೆಳಗೆ ಜಿಗಿದಳು . ಯುವತಿಗೆ ಗಂಭೀರ ಗಾಯವಾಗಿದ್ದು,ಚಿಕತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಯ ಮೇಲೆ ಅತ್ಯಚಾರಕ್ಕೆ ಯತ್ನ ನಡೆಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.





