ಪಠಾಣ್‌ಕೋಟ್‌ನ ಖರ್ಚನ್ನು ನಾವು ಕೊಡುವುದಿಲ್ಲ ಎಂದ ಪಂಜಾಬ್ ಸರಕಾರ

ಪಂಜಾಬ್,ಮಾರ್ಚ್.7: ಪಂಜಾಬ್ ಸರಕಾರ ಪಠಾಣ್‌ಕೋಟ್ ಭಯೋತ್ಪಾದಕ ದಾಳಿಯ ನಂತರ ವಿನ್ಯಾಸಗೊಳಿಸಿದ ಸೈನಿಕರು ಮತ್ತು ಅರೆಸೇನಾ ಪಡೆಗಳ ವೆಚ್ಚವನ್ನು ಭರಿಸಲು ನಿರಾಕರಿಸಿದೆ. ಭಯೋತ್ಪಾದಕರನ್ನು ನಿಗ್ರಹಿಸಲು ಮತ್ತು ಸಂಭಾವ್ಯ ಅಪಾಯಗಳನ್ನು ಮನಗಂಡು ಜನವರಿಎರಡರಿಂದ ಇಪ್ಪತ್ತೇಳರವರೆಗೆ ಸೇನೆ ಮತ್ತು ಅರೆಸೇನೆ ಪಡೆಗಳನ್ನು ಅಲ್ಲಿ ವಿನ್ಯಾಸಗೊಳಿಸಲಾಗಿತ್ತು. ಇದಕ್ಕೆ 6.35ಕೋಟಿರೂ. ವೆಚ್ಚವಾಗಿದೆ.
ಗೃಹಸಚಿವಾಲಯ ರಾಜ್ಯಸರಕಾರಕ್ಕೆ ಪತ್ರ ಬರೆದು ತಗಲಿದ ವೆಚ್ಚವನ್ನು ಭರಿಸುವಂತೆ ಸೂಚಿಸಲಾಗಿತ್ತು. ಸೇನೆಯನ್ನು ರಾಷ್ಟ್ರ ಭದ್ರತೆಯ ದೃಷ್ಟಿಯಿಂದ ಅಲ್ಲಿ ಇರಿಸಲಾಗಿದೆ. ಆದ್ದರಿಂದ ಈ ಮೊತ್ತವನ್ನು ನಾವು ನೀಡಲಾರೆವೆಂದು ಸರಕಾರ ಹೇಳಿದೆ. ಪತ್ರದಲ್ಲಿ ಬರೆದಂತೆ ಅಲ್ಲಿ ನಿಲ್ಲಿಸಲಾದ ಪ್ರತಿಯೊಂದೂ ತುಕಡಿಗಳಿಗೆ ಪ್ರತಿ ದಿನವೂ 1,77,143 ರೂ. ಖರ್ಚು ಆಗಿದೆ. ಇದಲ್ಲದೆ ಸಾರಿಗೆ ಇತ್ಯಾದಿಗಳಿಗೆ ವೆಚ್ಚವಾದ ಹಣವನ್ನೂ ನೀಡಬೇಕೆಂದು ಕೇಂದ್ರ ಸರಕಾರ ಹೇಳಿತ್ತು. ಕ್ಕೆ ಅರೆಸೈನಿಕ ಪಡೆಯ ಹನ್ನೊಂದು ತುಕಡಿ ಹಾಗೂ ಸೇನೆಯ ಒಂಬತ್ತು ತುಕಡಿಗಳನ್ನು ಇರಿಸಲಾಗಿತ್ತು.





