ನೂರುಲ್ ಇಸ್ಲಾಂ ಜಮಾಅತ್ ಸಮಿತಿ ಅಜ್ಜಾವರ – ಯು.ಎ.ಇ ಘಟಕದ ವಾರ್ಷಿಕ ಮಹಾ ಸಭೆ

ದುಬೈ : ನೂರುಲ್ ಇಸ್ಲಾಂ ಜಮಾಅತ್ ಸಮಿತಿ ಅಜ್ಜಾವರ, ಮೆನಾಲ, ಬಯಂಬು ಇದರ ಯು.ಎ.ಇ ಘಟಕದ 4 ನೇ ವಾರ್ಷಿಕ ಮಹಾ ಸಭೆಯು ದಿನಾಂಕ 26 / 02 / 2016 ರಂದು ಶುಕ್ರವಾರ ಜುಮಾಅ ನಮಾಜಿನ ನಂತರ ಬರ್ ದುಬೈ ನಲ್ಲಿ ನಡೆಯಿತು . ದುಅ ದೊಂದಿಂಗೆ ಕಾರ್ಯಕ್ರಮವು ಪ್ರಾರಂಭ ಗೊಂಡು , ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್ ಶೌಕಥ್ ಅಲೀ ಮೆನಾಲ ಆಗಮಿಸಿದ ಸರ್ವರನ್ನು ಸ್ವಾಗತಿಸಿದರು . ಜನಾಬ್ ನೌಫಾಲ್ ಗುರುಂಪು ವರದಿ ವಾಚಿಸಿ ಸಭೆಯ ಅಂಗಿಕಾರ ಪಡೆಯಲಾಯಿತು , ಜನಾಬ್ ಉಮ್ಮರ್ ಕೊಳಂಬೆ ಗತ ವರ್ಷದ ಲೆಕ್ಕ ಪತ್ರ ಮಂಡಿಸಿದರು ಬಳಿಕ ಸಭೆಯ ಅಧ್ಯಕ್ಷೆತೆ ವಹಿಸಿದ ಜನಾಬ್ ಕಮಾಲ್ ಅಜ್ಜಾವರ ನೇತ್ರತ್ವದಲ್ಲಿ 2016 -17 ನೇ ಸಾಲಿನ ನೂತನ ಕಾರ್ಯಕಾರಿಣಿ ಸಮಿತಿಯನ್ನು ಇ ಕೆಳಗಿನಂತೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು .
ಗೌರವ ಅದ್ಯಕ್ಷರು : ಜನಾಬ್ ಅಬ್ದುಲ್ ಲತೀಫ್ ಅರ್ಶದಿ ಅಜ್ಜಾವರ
ಅದ್ಯಕ್ಷರು : ಜನಾಬ್ ನೌಫಾಲ್ ಗುರುಂಪ್
ಉಪಾದ್ಯಕ್ಷರು : ಜನಾಬ್ ಶಂಸುದ್ದೀನ್ ಕೊಳಂಬೆ.
: ಜನಾಬ್ ಶರೀಫ್ S
ಪ್ರಧಾನ ಕಾರ್ಯದರ್ಶಿ : ಜನಾಬ್ ಶೌಕಥ್ ಅಲೀ ಮೆನಾಲ
ಜೊತೆ ಕಾರ್ಯದರ್ಶಿ : ಜನಾಬ್ ಮಜೀದ್ ಬಯಂಬು
ಜನಾಬ್ ಶಿಯಾಬ್ ಮೆನಾಲ
ಕೋಶಾಧಿಕಾರಿ : ಜನಾಬ್ ಉಮ್ಮರ್ ಕೊಳಂಬೆ.
ಸಂಘಟನ ಕಾರ್ಯದರ್ಶಿ : ಜನಾಬ್ ಕಮಾಲ್ ಅಜ್ಜಾವರ
ಸಹಾಯಕ ಕೋಶಾಧಿಕಾರಿ : ಜನಾಬ್ ಯುಸೂಫ್ GM
ಸಂಚಾಲಕರು : ಜನಾಬ್ ಮುಕ್ರಿ ಅಝೀಝ್, ಮುನೀರ್ ಬಯಂಬು , ಮಹಮೂದ್ ಜಿ. , ಜನಾಬ್ : ಶರೀಫ್ ಮೆನಾಲ.
ಹಾಗು ಇದೆ ಸಂದರ್ಭದಲ್ಲಿ ಸದಸ್ಯರನ್ನು ಆಯ್ಕೆ ಮಾಡಲಾಯಿತು . ನಂತರ ಮುಂದಿನ ದಿನಗಳಲ್ಲಿ ಸಮಿತಿಯು ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು .ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ಜನಾಬ್ ಶೌಕಥ್ ಅಲೀ ಮೆನಾಲ ದನ್ಯವಾದ ಸಲ್ಲಿಸಿ ಸ್ವಲಾತಿನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.







