ವೆಂಟಿಲೇಟರ್ ಖರೀದಿಸಲು ಹಣವಿಲ್ಲ : ಕಳೆದ ಎರಡು ವರ್ಷಗಳಿಂದ ಆಸ್ಪತ್ರೆಯೇ ಈ ಬಾಲಕನಿಗೆ ಮನೆಯಾಗಿ ಬಿಟ್ಟಿದೆ

ಹೊಸದಿಲ್ಲಿ, ಮಾ, 7 : ರಾಜಧಾನಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಾಯನ್ಸಸ್ (ಎಐಐಎಂಎಸ್) ಇಲ್ಲಿನ ನ್ಯೂರೋಸರ್ಜರಿ ವಾರ್ಡಿನ ಟ್ರಾಮಾ ಸೆಂಟರಿನ ಬೆಡ್ ನಂ.4 ಕಳೆದ ಎರಡೂವರೆ ವರ್ಷಗಳಿಂದ 15 ವರ್ಷದ ಮುಹಮ್ಮದ್ ಜಾವೇದ್‌ಗೆ ಮನೆಯಾಗಿ ಬಿಟ್ಟಿದೆ. ಜಾರ್ಖಂಡ್‌ನ ಹಜಾರಿಭಾಗ್ ಜಿಲ್ಲೆಯಲ್ಲಿರುವ ತನ್ನ ಮಗನ ಕುತ್ತಿಗೆಯ ಕೆಳ ಭಾಗದ ದೇಹದಲ್ಲಿ ಸ್ವಾಧೀನತೆ ಕಳೆದುಕೊಂಡು ಬಿಟ್ಟಿರುವ ಮುಹಮ್ಮದ್ ಹೋಗುವಂತಿಲ್ಲ. ಕಾರಣ ಆತನಿಗೆ ಉಸಿರಾಟ ನಡೆಸಲು ವೆಂಟಿಲೇಟರ್‌ನ ಸಹಾಯದ ಅಗತ್ಯವಿದೆ ಹಾಗೂ ಆತನ ಕುಟುಂಬ ಅದನ್ನು ಖರೀದಿಸುವಷ್ಟು ಆರ್ಥಿಕವಾಗಿ ಸಬಲವಾಗಿಲ್ಲ.
ಜಾವೇದ್‌ನ ಮಿದುಳು ಚೆನ್ನಾಗಿ ಕೆಲಸ ಮಾಡುತ್ತಿದೆ. ಆತ ಮಾತನಾಡುವಾಗ ತೊದಲಿದರೂ ಇತರರಿಗೆ ಅರ್ಥವಾಗುವಂತೆ ವ್ಯವಹರಿಸಬಲ್ಲ. ಆದರೆ ಕೈಕಾಲುಗಳನ್ನು ಆಡಿಸಲು ಮಾತ್ರ ಆತನಿಗೆ ಸಾಧ್ಯವಿಲ್ಲ. ತನ್ನ ತಾಯಿ ಹಾಗೂ ಹಿರಿಯ ಸಹೋದರನೊಂದಿಗೆ ಮೊಬೈಲ್ ಫೋನ್‌ನಲ್ಲಿ ಕಾರ್ಟೂನ್ ಹಾಗೂ ತನ್ನ ನೆಚ್ಚಿನ ನಟಸಲ್ಮಾನ್ ಖಾನ್ ಚಿತ್ರದ ದ ಹಾಡುಗಳನ್ನು ಕೇಳುತ್ತಾ ಸಮಯ ಕಳೆಯುತ್ತಾನೆ.
‘‘ಆತನಿಗೆ ಅದೇನು ಆಯಿತೆಂದೇ ಗೊತ್ತಿಲ್ಲ. ಹೊರಗಡೆ ಆಟವಾಡಲು ಹೋಗಿದ್ದ ಆತನನ್ನುಒಂದು ದಿನ ಆತನ ಸ್ನೇಹಿತರು ಮನೆಗೆ ಕರೆದುಕೊಂಡು ಬಂದಾಗ ಆತನಿಗೆ ಕೈಕಾಲುಗಳೇ ಬರುತ್ತಿರಲಿಲ್ಲ,’’ಎಂದು ಮುಹಮ್ಮದ್ ತಾಯಿ ಅದಾ ಖಟೂನ್ ಹೇಳುತ್ತಾರೆ. ಜಾವೇದ್ ಜತೆ ಆಸ್ಪತ್ರೆಯಲ್ಲಿರಲು ಆಕೆ 2013ರಲ್ಲಿ ತನ್ನ ಪತಿ ಹಾಗೂ ಇತರ ನಾಲ್ಕು ಮಂದಿ ಮಕ್ಕಳೊಂದಿಗೆ ದಿಲ್ಲಿಗೆ ವಾಸ ಬದಲಿಸಿದ್ದರು.
ಜಾವೇದ್‌ನ ಪ್ರತಿದಿನದ ವೆಚ್ಚವಾದ ರೂ 10,000 ಪ್ರಸಕ್ತ ಆಸ್ಪತ್ರೆ ಭರಿಸುತ್ತಿದ್ದುಆತ ಮನೆಯಲ್ಲಿ ವೆಂಟಿಲೇಟರ್ ಸಹಾಯದಿಂದಿರುವುದಾದರೆ ಖರ್ಚು ದಿನಕ್ಕೆ ಕೇವಲ ರೂ 500 ಆಗುವುದೆಂದು ವೈದ್ಯರು ಹೇಳುತ್ತಾರೆ. ಅವರ ಪ್ರಕಾರ ಆಟವಾಡುವಾಗ ಕೆಳಕ್ಕೆ ಬಿದ್ದ ಜಾವೇದ್ ತನ್ನಕುತ್ತಿಗೆಯನ್ನು ಮುರಿದುಕೊಂಡಿದ್ದಾನೆ. ಆತ ಜೀವನ ಪೂರ್ತಿ ಇದೇ ಸ್ಥಿತಿಯಲ್ಲಿರಬೇಕಾಗುತ್ತದೆಯೆಂದು ಅವರು ಮಾಹಿತಿ ನೀಡುತ್ತಾರೆ.
‘‘ವೆಂಟಿಲೇಟರ್ ಸಪೋರ್ಟ್ ನಿಲ್ಲಿಸಿದಲ್ಲಿ ಮಾತ್ರ ಜಾವೇದ್‌ನ ಪರಿಸ್ಥಿತಿ ಬಿಗಡಾಯಿಸಿ ಆತ ಸಾಯಬಹುದು,’’ ಎಂದು ಇನ್ನೊಬ್ಬ ವೈದ್ಯರು ಹೇಳುತ್ತಾರೆ. ಇಂತಹ ಪ್ರಕರಣಗಳಲ್ಲಿ ದಯಾಮರಣವನ್ನೂ ಪರಿಗಣಿಸಬಹುದು ಎಂದು ಕೆಲವು ತಜ್ಞರು ಹೇಳುತ್ತಾರೆ.
ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಎಂಬ್ರಾಯಿಡರಿ ಕೆಲಸ ನಿರ್ವಹಿಸುವ ಜಾವೇದ್ ತಂದೆ ಮುಹಮ್ಮದ್ ಅಖ್ತರ್‌ಗೆ ಮಗನನ್ನು ಮನೆಗೆ ಕರೆದುಕೊಂಡು ಹೋಗಿ ಸಲಹುವುದುಅಸಾಧ್ಯದ ಮಾತಾಗಿದೆ. ಎಐಐಎಂಎಸ್ ಪ್ರಸಕ್ತ ಜಾವೇದ್‌ನಿಗಾಗಿ ವೆಂಟಿಲೇಟರ್ ಖರೀದಿಸಲು ಹಣದ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದೆ.







