ಎಲಿಯಾ ರಸ್ತೆ ಡಾಮರೀಕರಣಕ್ಕೆ ಶೀಘ್ರ ಅನುದಾನ ಬಿಡುಗಡೆ : ಸಚಿವ ಅಭಯಚಂದ್ರ

ಮೂಡುಬಿದಿರೆ: ದೇವಸ್ಥಾನಗಳಲ್ಲಿ ಜಾತ್ರೆ, ಮಸೀದಿಗಳಲ್ಲಿ ಉರೂಸ್ ಆಚರಿಸುವುದರಿಂದ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ಮೂಡುತ್ತದೆ. ಎಲಿ0ಾ ಪರಿಸರದ ಬಹುತೇಕ ಮುಸ್ಲಿಂರು ನದಿ ತೀರದ ವಾಸಿಗಳು. ಜೀವನೋಪಾ0ುಕ್ಕಾಗಿ ಕೃಷಿ0ುನ್ನು ಅವಲಂಬಿಸಿಕೊಂಡು ಬಂದವರು ಇಲ್ಲಿನ ರಸ್ತೆಯು ಹದಗೆಟ್ಟಿದ್ದು, ರಸ್ತೆ ಡಾಮರೀಕರಣಕ್ಕೆ ಶೀಘ್ರದಲ್ಲೆ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ಯುವಸಬಲೀಕರಣ ಮತ್ತು ಮೀನುಗಾರಿಕೆ ಸಚಿವ ಕೆ. ಅಭ0ುಚಂದ್ರ ಜೈನ್ ಹೇಳಿದರು.
ಅವರು ಪುಚ್ಚೆಮೊಗರು ಎಲಿಯಾ ದರ್ಗಾ ಶರೀಫ್ ಬಹು ಸಯ್ಯಿದ್ ಡಾ. ಅಬೂಬಕ್ಕರ್ ವಲಿ0ುಲ್ಲಾಹಿ ಹೆಸರಿನಲ್ಲಿ ಭಾನುವಾರ ನಡೆದ ಎಲಿ0ಾ ಮಖಾಂ ಉರೂಸ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ದ.ಕ ಖಾಝಿ ಶೈಖುನಾ ತ್ವಾಖ ಅಹ್ಮದ್ ಮುಸ್ಲಿ0ಾರ್ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಆಶೀರ್ವಚನ ನೀಡಿ ಪ್ರತಿ0ೊಬ್ಬರ ಜಾತಿ, ಧರ್ಮಕ್ಕೆ ಗೌರವ ಕೊಟ್ಟಾಗ ಸಾಮರಸ್ಯ ಗಟ್ಟಿಯಾಗುತ್ತದೆ. ಗ್ರಾಮಿಣ ಪ್ರದೇಶವಾದ ಪುಚ್ಚೆಮೊಗರಿನಲ್ಲಿ ಮಸೀದಿ ನಿರ್ಮಿಸಿ ಅಭಿವೃದ್ಧಿಪಡಿಸಿರುವುದು ಶ್ರೇಷ್ಠ ಹಾಗೂ ಪುಣ್ಯದ ಕೆಲಸ ಎಂದರು. ಎಲಿಯಾ ಮಸೀದಿ ಖತೀಬರಾದ ಅಲ್ತಾಫ್ ಮುಸ್ಲಿಯಾರ್, ಹೊಸಬೆಟ್ಟು ಚರ್ಚ್‌ನ ಧರ್ಮಗುರು ಸಂತೋಷ್ ರೋಡ್ರಿಗಸ್, ಅಬ್ದುಲ್ ರಹ್ಮಾನ್ ಹಾಝಿ, ಜಿಲ್ಲಾ ಪಂಚಾ0ುತಿ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ಸಿ.ಎಂ ಮುಹಮ್ಮದ್ ರಫೀಕ್ ಮುಸ್ಲಿ0ಾರ್,ಡಿ.ಎ ಉಸ್ಮಾನ್ ತೋಡಾರು, ಇರುವೈಲು ದೇವಸ್ಥಾನದ ಐ.ರಾಘವೇಂದ್ರ ಅಸ್ರಣ್ಣ, ಆರ್.ಕೆ ಪ್ರಥ್ವಿರಾಜ್ ಗುರುಪುರ, ಹಾಜಿ.ಎ.ಎಂ ಕುಂಙ, ಚಂದ್ರಹಾಸ್ ಸನಿಲ್, ಪ್ರದೀಪ್ ಚಂದ್ರ ಜೈನ್ ಮತ್ತಿತರರು ಇದ್ದರು. ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ಲತೀಪ್ ಅಧ್ಯಕ್ಷತೆ ವಹಿಸಿದರು. ಯೂಸುಫ್ ಮಿಜಾರು ನಿರೂಪಿಸಿದರು. ಉಸ್ಮಾನ್ ಎಲಿ0ಾ ವಂದಿಸಿದರು.





