ಉಪ್ಪಿನಂಗಡಿ: ವಿಷ ಜಂತು ಕಡಿದು ಮಹಿಳೆಯ ಸಾವು

ಉಪ್ಪಿನಂಗಡಿ: ಹುಲ್ಲು ತರಲೆಂದು ತೋಟಕ್ಕೆ ಹೋಗಿದ್ದ ಮಹಿಳೆಯೋರ್ವರು ವಿಷ ಜಂತು ಕಡಿದು ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿಯ ಬೊಳ್ಳಾವು ಎಂಬಲ್ಲಿ ಸೋಮವಾರ ನಡೆದಿದೆ. ಕೃಷಿಕ ಕೃಷ್ಣಪ್ಪ ಗೌಡರ ಪತ್ನಿ, ಉಪ್ಪಿನಂಗಡಿ ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯೆ ರೋಹಿಣಿ (45) ಮೃತಪಟ್ಟ ಮಹಿಳೆ. ಇವರು ಇಂದು ಬೆಳಗ್ಗೆ ದನಕರುಗಳಿಗೆ ಹುಲ್ಲು ತರಲೆಂದು ತೋಟಕ್ಕೆ ತೆರಳಿದ್ದು, ಅಲ್ಲಿಯೇ ಕುಸಿದು ಬಿದ್ದು ತೀವ್ರ ಅಸ್ವಸ್ಥರಾಗಿದ್ದರು. ಕೂಡಲೇ ಮನೆಯವರು ಇವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ. ತೋಟಕ್ಕೆ ಹೋಗಿದ್ದ ಇವರಿಗೆ ವಿಷ ಜಂತು ಕಡಿದಿರುವ ಸಾಧ್ಯತೆಯ ಬಗ್ಗೆ ಶಂಕಿಸಲಾಗಿದೆ. ಮೃತರು ಪತಿ ಸೇರಿದಂತೆ ಮೂವರು ಪುತ್ರರನ್ನು ಅಗಲಿದ್ದಾರೆ.
Next Story





