ಟ್ಯುನಿಸಿಯಾ:21ಭಯೋತ್ಪಾದಕರ ಹತ್ಯೆ, ನಾಲ್ವರು ನಾಗರಿಕರೂ ಬಲಿ
ಟ್ಯುನಿಸ್,ಮಾ.7: ಲಿಬಿಯಾದ ಗಡಿಗೆ ಸಮೀಪ ಪೊಲೀಸ್ ಮತ್ತು ಸೇನಾನೆಲೆಗಳ ಮೇಲೆ ಸೋಮವಾರ ದಾಳಿ ನಡೆಸಿದ 21 ಜಿಹಾದಿಗಳನ್ನು ಟ್ಯುನಿಸಿಯಾದ ಭದ್ರತಾ ಪಡೆಗಳು ಕೊಂದು ಹಾಕಿವೆ. ಈ ವೇಳೆ ನಡೆದ ಗುಂಡಿನ ಕಾಳಗದಲ್ಲಿ ನಾಲ್ವರು ನಾಗರಿಕರೂ ಕೊಲ್ಲಲ್ಪಟ್ಟಿದ್ದಾರೆ.
ಸಶಸ್ತ್ರ ಭಯೋತ್ಪಾದಕರ ಗುಂಪುಗಳು ಬೆನ್ ಗ್ವೆರ್ಡೇನ್‌ನಲ್ಲಿ ಪೊಲೀಸ್ ಮತ್ತು ಸೇನಾನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದವು. 21 ಭಯೋತ್ಪಾದಕರು ಹತರಾಗಿದ್ದು, ಇತರ ಆರು ಭಯೋತ್ಪಾದಕರನ್ನು ಸೆರೆ ಹಿಡಿಯಲಾಗಿದೆ ಎಂದು ರಕ್ಷಣಾ ಮತ್ತು ಆಂತರಿಕ ಸಚಿವಾಲಯಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
Next Story





