ನ್ಯಾನ್ಸಿ ರೇಗನ್ ಇನ್ನಿಲ್ಲ

ಲಾಸ್ ಏಂಜಲೀಸ್, ಮಾ.7: ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಅವರ ಯಶಸ್ಸಿನ ಸೂತ್ರಧಾರಿಣಿ ಎನಿಸಿಕೊಂಡಿದ್ದ ನ್ಯಾನ್ಸಿ ರೇಗನ್ (94) ನಿಧನರಾಗಿದ್ದಾರೆ.
ಹತ್ತು ವರ್ಷದಿಂದ ಅವರು ಮರೆವು ರೋಗದಿಂದ ಬಳಲುತ್ತಿದ್ದರು. ಲಾಸ್ ಏಂಜಲೀಸ್‌ನ ಬೆಲ್ ವಾಯು ಪ್ರದೇಶದಲ್ಲಿ ಭಾನುವಾರ ಅವರು ಹೃದಯಾಘಾತದಿಂದ ಮೃತಪಟ್ಟರು ಎಂದು ಸಹಾಯಕಿ ಅಲಿಸನ್ ಬೊರಿಯೊ ಸ್ಪಷ್ಟಪಡಿಸಿದ್ದಾರೆ. ಮಕ್ಕಳು ಮತ್ತು ಹದಿಹರೆಯದವರು ಮಾದಕ ವಸ್ತು ವ್ಯಸನದಿಂದ ದೂರವಿರುವಂತೆ ಅವರು ಕೈಗೊಂಡಿದ್ದ, ಜಸ್ಟ್ ಸೇ ನೋ ಪ್ರಚಾರ ಆಂದೋಲನ ಅವರಿಗೆ ವಿಶ್ವಮನ್ನಣೆ ಗಳಿಸಿಕೊಟ್ಟಿತ್ತು.
Next Story





