ಸ್ತ್ರೀ ಸಬಲೀಕರಣದಲ್ಲಿ ಅನಕ್ಷರಸ್ಥೆಯೊಬ್ಬಳ ಯಶೋಗಾಥೆ
Women the silent comapawion
The pillar of strength and solace
Her ears listened to your silent cries
Her lips utterd her love for you
She is the force that pushes you forward
While she stays behind the four walls
Let us celebrate this spirit of woman hood
Let us heed her cries and realise her dreams
Let us tell her that she is worth lot
More than mere words can convey!
ಪುರುಷರ ಜೀವನದಲ್ಲಿ ಮಹಿಳೆಯರ ಕ್ರಿಯಾಶೀಲ ಪಾತ್ರ ಹಾಗೂ ಅದಕ್ಕೆ ಪ್ರತಿಯಾಗಿ ಪುರುಷರ ಕರ್ತವ್ಯವೇನು ಎಂದು ಅರ್ಥಪೂರ್ಣವಾಗಿ ಧ್ವನಿಸುವ ಈ ಕವಿತೆಯ ಸಾಲುಗಳು ಮಹತ್ವ ಪಡೆಯುತ್ತವೆ. ಈ ಹಿನ್ನೆಲೆಯಲ್ಲಿಯೇ ಮಹಿಳಾ ಸಬಲೀಕರಣದ ಕಲ್ಪನೆ ಕೂಡಾ ಹೆಚ್ಚಿನ ಅರ್ಥ ಪಡೆದುಕೊಳ್ಳುತ್ತದೆ. ಇಂದಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಇದರ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಅನೇಕ ಮಹಿಳೆಯರು ಇಂದು ಅಲ್ಲಲ್ಲಿ ಕಾಣಸಿಗುತ್ತಾರೆ. ಆದರೆ ಮಹಿಳಾ ಸಬಲೀಕರಣದ ಕುರಿತು ಒಂದಿಷ್ಟೂ ಪರಿಜ್ಞಾನವಿಲ್ಲದ ಒಬ್ಬ ಅನಕ್ಷರಸ್ಥ ಮಹಿಳೆ ವರ್ಷಗಳ ಹಿಂದೆ ಅದನ್ನು ಸಾಕಾರಗೊಳಿಸಿದ ಪರಿ ಮಾತ್ರ ಮೆಚ್ಚತಕ್ಕದ್ದು. ಆಕೆಯೇ ಮಧುರೆ ಜಿಲ್ಲೆಯ ಪುಲ್ಲಚೇರಿ ಗ್ರಾಮದ ಚಿನ್ನಪಿಳ್ಳೆ ಎಂಬ ಅನಕ್ಷರಸ್ಥ ಮಹಿಳೆ ಸರಕಾರದ ನೆರವಿನಿಂದ ಸ್ಥಾಪಿಸಲಾಗಿರುವ ಮಹಿಳಾ ಸ್ವಸಹಾಯ ಗುಂಪಿನ ಕಲ್ಪನೆ ಮೊತ್ತ ಮೊದಲು ಈ ಅನಕ್ಷರಸ್ಥ ಮಹಿಳೆ ಮನಸ್ಸಿನಲ್ಲಿ ಮೂಡಿದ್ದು ಸುಮಾರು 50 ವರ್ಷಗಳ ಹಿಂದೆ. ಉಳ್ಳವರ ಮನೆಯಂಗಳದಲ್ಲಿ ದಿನಪೂರ್ತಿ ದುಡಿದು ಒಂದಿಷ್ಟು ಪುಡಿಗಾಸನ್ನೋ ಅಥವಾ ಸೇರು ಅರ್ಧ ಸೇರು (ಕಿಲೋ ತೂಕದ ಬದಲಾಗಿ ಇದ್ದ ಆಗಿನ ಮಾಪನ) ದವಸ ಧಾನ್ಯವನ್ನೋ ಕೂಲಿಯಾಗಿ ಪಡೆದು ಅರೆಹೊಟ್ಟೆ ತಿಂದು ಬದುಕುವ ಶೋಷಿತರನ್ನು ಒಂದುಗೂಡಿಸಿ ಹೆಚ್ಚು ಕೂಲಿ ಸಿಗುವಂತೆ ಬಂಡಾಯ ಹೂಡಿದಾಗ ಆಕೆಯ ಪ್ರಾಯ ಆಗಷ್ಟೇ 13-14 ವರ್ಷವಿದ್ದೀತು.
ದಿನಗೂಲಿ ಮಾಡಿ ಬದುಕುವ ವಯಸ್ಸಿನಲ್ಲಿ ತನಗಿಂತ ಹಿರಿಯ ಹೆಂಗಸರ ಗುಂಪಿನ ಕಿರಿಯ ನಾಯಕಿಯಾದ ಚಿನ್ನಪಿಳೈ ತಾವು ಮಾಡಿದ ಕೆಲಸಕ್ಕೆ ಜಾಸ್ತಿ ಕೂಲಿ ಕೇಳಬೇಕೆಂಬ ಯೋಚನೆಯನ್ನು ಹೆಂಗಸರ ಮನಸ್ಸಿನಲ್ಲಿ ಬಿತ್ತಿದಾಗ ಧಣಿಯ ಇದಿರು ಬಂಡೇಳುವ ವಿಚಾರವನ್ನು ಕೇಳಿಯೇ ಅವರೆಲ್ಲ ಇದು ಸಾಧ್ಯವೇ ಎಂದು ಬೆಚ್ಚಿದರು. ಆದರೆ ಚಿನ್ನಪಿಳೈಯದು ಒಂದೇ ಹಠ. ತಾವು ಈಗ ಧ್ವನಿ ಎತ್ತದಿದ್ದರೆ ನಿರಂತರ ತಮಗೆ ಸಿಗುವುದು ಅರೆ ಹೊಟ್ಟೆಯ ಕೂಲಿಯೇ. ಇದರ ವಿರುದ್ಧ ಬಂಡೇಳಲು ಆಕೆ ನಿರ್ಧರಿಸಿದಾಗ ವ್ಯವಸ್ಥೆಯ ಇದಿರು ಹೋಗದಂತೆ ಅವಳ ಗಂಡ ಅವಳನ್ನು ಎಚ್ಚರಿಸಿದರೂ ಅವಳು ಅವನ ಎಚ್ಚರಿಕೆಗೆ ಕಿವಿಗೊಡಲಿಲ್ಲ. ಕೂಲಿ ಹೆಚ್ಚಳದ ತನ್ನ ನಿಲುವಿಗೆ ಅಂಟಿಕೊಂಡ ಅವಳು ಇದಿರು ಹಾಕಿಕೊಳ್ಳಲು ಹೊರಟಿದ್ದು ಊರಿನ ಪ್ರಭಾವಿ ವ್ಯಕ್ತಿಗಳನ್ನು. ಊರಿನ ಭೂ ಹಿಡುವಳಿದಾರರು ಮತ್ತು ರಾಜಕೀಯಸ್ಥರು. ಬಡವರಿಗೆ ಕೊಟ್ಟ ಸಾಲಕ್ಕೆ ಅಧಿಕ ಬಡ್ಡಿದರ ವಸೂಲಿ ಮಾಡಿ ಹಣದ ಲೇವಾದೇವಿ ಮಾಡುವ ಎಲ್ಲರನ್ನೂ ಇವಳು ಇದಿರು ಹಾಕಿಕೊಂಡಿದ್ದರ ಫಲವಾಗಿ ಇವಳ ಕೈಕಾಲು ಮುರಿಯುವ, ಇವಳ ಮೇಲೆ ಹಲ್ಲೆ ನಡೆಸುವ ಪ್ರಯತ್ನಗಳೂ ಆದವು. ಆದರೆ ಯಾವುದಕ್ಕೂ ಜಗ್ಗದೇ ಕೂಲಿ ಹೆಚ್ಚಳದ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡು ತನ್ನ ಹೋರಾಟ ಮುಂದುವರಿಸಿದ ಅವಳ ಈ ಪರಿಗೆ ಮಾಲಕರು ಕೊನೆಗೂ ಬಗ್ಗಲೇಬೇಕಾಯಿತು. ಅದರಂತೆ ಎಲ್ಲರಿಗೂ ದಿನವಹಿ ತಲಾ ಎರಡು ರೂಪಾಯಿ ಕೂಲಿ ಹೆಚ್ಚಳವಾಯಿತು. ಕೂಲಿ ಹೆಚ್ಚಳವೇನೋ ಆಯಿತು. ಆದರೆ ಅದನ್ನು ಮನೆಗೆ ಕೊಂಡು ಹೋದರೆ ಒಂದಲ್ಲ ಒಂದು ನೆಪದಲ್ಲಿ ಮನೆಗಂಡಸರು ಖರ್ಚು ಮಾಡುವುದಂತೂ ಖಂಡಿತಾ. ಅದರಬದಲು ಎಲ್ಲ ಹೆಂಗಸರ ಹೆಚ್ಚಳದ ಕೂಲಿಯನ್ನು ಸೇರಿಸಿ ಇಟ್ಟರೆ ದಿನಗಳೆದಂತೆ ಒಂದು ಪುಟ್ಟ ಇಡುಗಂಟಾಗುತ್ತದೆ. ಇದು ಚಿನ್ನಪಿಳೈಯ ಮನಸ್ಸಿನಲ್ಲಿ ಮೂಡಿದ ಕಲ್ಪನೆ.
ಈ ಕಲ್ಪನೆಯಲ್ಲಿಯೇ ಚಿನ್ನಪಿಳೈ ಒಂದಿಷ್ಟು ಮಹಿಳೆಯರನ್ನು ಸೇರಿಸಿ ‘ಕಲಂಜಿಯಂ’ (kalanjiam- savings, credit and self help)ಎಂಬ ಮಹಿಳಾ ಸ್ವಸಹಾಯ ಗುಂಪೊಂದನ್ನು ಪ್ರಾರಂಭಿಸಿದಳು. ಕಲಂಜಿಯಂನಲ್ಲಿಟ್ಟ ಹೆಚ್ಚಳದ ಕೂಲಿ ಒಂದು ಇಡುಗಂಟಾದಾಗ ಸದಸ್ಯೆಯರ ರಚನಾತ್ಮಕ ಚಟುವಟಿಕೆಗಳಿಗೆ ಅಗತ್ಯಬಿದ್ದ ಹಣವನ್ನು ಹೊಂದಿಸಿಕೊಡುವುದು ಕಲಂಜಿಯಂ ಗುರಿಯಾಗಬೇಕು ಎಂದು ನಿರ್ಧಾರವಾಯಿತು. ಸದಸ್ಯೆಯರಿಗೆ ಸಾಲದ ರೂಪದಲ್ಲಿ ಕೊಟ್ಟ ಈ ಹಣಕ್ಕೆ ಶೇ. 24ರ ಬಡ್ಡಿಯನ್ನು ವಸೂಲಿ ಮಾಡಬೇಕು. ಹೀಗೆ ಚಿನ್ನಪಿಳೈ ಇತರ ಸದಸ್ಯೆಯರೊಡಗೂಡಿ ರೂಪಿಸಿದ ನೀತಿ ನಿಯಮಾಳಿಗಳಂತೆ ಕಲಂಜಿಯಂ ತನ್ನ ಚಟುವಟಿಕೆ ಪ್ರಾರಂಭಿಸಿತು. ಇತರ ಖಾಸಗಿ ಹಣಕಾಸು ಸಂಸ್ಥೆಗಳು ವಿಧಿಸುವ ಶೇ. 60ರಿಂದ ಶೇ. 120ರ ಬಡ್ಡಿದರಕ್ಕಿಂತ ಕಲಂಜಿಯಂ ವಿಧಿಸುವ ಶೇ.24ರ ಬಡ್ಡಿದರ ಬಹಳಷ್ಟು ಕಡಿಮೆಯಾದುದರಿಂದ ಕಲಂಜಿಯಂನ ಕಾರ್ಯವೈಖರಿ ಸದಸ್ಯೆಯರಿಗೆ ಬಲು ಆಕರ್ಷಕವಾಗಿ ಕಂಡಿದ್ದರಲ್ಲಿ ಆಶ್ಚರ್ಯವೇನಿಲ್ಲ. ಕಲಂಜಿಯಂ ಪ್ರಾರಂಭವಾದೊಡನೆ ಬಹಳಷ್ಟು ಸದಸ್ಯೆಯರ ಆರ್ಥಿಕ ಮಟ್ಟ ಸುಧಾರಣೆಗೊಂಡ ಕಾರಣ ಕಲಂಜಿಯಂ ಬಲುಬೇಗ ಜನಪ್ರಿಯತೆ ಪಡೆದು ವ್ಯಾಪಕ ಪ್ರಚಾರಕ್ಕೊಳಗಾಗಿ ಕೂಲಿ ಹೆಂಗಸರು ಇದರ ಸದಸ್ಯೆಯರಾಗಲು ಮುಗಿಬಿದ್ದರು. ಕಲಂಜಿಯಂನ ಉದ್ದೇಶ ನೋಡಿದ ಮಧುರೆಯ ಸರಕಾರೇತರ ಸಂಸ್ಥೆ ಈಏಅಘೆ(ಛಿಛ್ಝಿಟಞಛ್ಞಿಠಿ ಟ್ಛ ಜ್ಠಞಚ್ಞ ಚ್ಚಠಿಜಿಟ್ಞ) ಈ ಮಹಿಳೆಯರ ಜೊತೆ ಕೈಗೂಡಿಸಿ ಬ್ಯಾಂಕಿಂಗ್ ವ್ಯವಹಾರದಲ್ಲಿ ಇವರಿಗೆ ಸರಿಯಾದ ಮಾರ್ಗದರ್ಶನ ನೀಡಲು ಇವರ ನೆರವಿಗೆ ಬಂತು. ಕಲಂಜಿಯಂ ಜನಪ್ರಿಯತೆ ಶೀಘ್ರದಲ್ಲಿ ಎಷ್ಟು ಹೆಚ್ಚಿತು ಎಂದರೆ ತಮಿಳುನಾಡಿನಾದ್ಯಂತ ಮಹಿಳೆಯರು ಇದರ ಸದಸ್ಯರಾಗುವುದರ ಜೊತೆ ಆಂಧ್ರಪ್ರದೇಶದಲ್ಲೂ ಮಹಿಳೆಯರು ಹೆಚ್ಚು ಹೆಚ್ಚಾಗಿ ಕಲಂಜಿಯಂ ಜಾಲಕ್ಕೆ ಒಳಗಾಗಿ ಚಳವಳಿಯೋಪಾದಿಯಲ್ಲಿ ಇದು ಒಂದು ಸಂಘಟನೆಯಾಗಿ ಎರಡೂ ರಾಜ್ಯಗಳಲ್ಲಿ ತನ್ನ ಜಾಲ ವಿಸ್ತರಿಸಿ ಎಷ್ಟೋ ಕುಟುಂಬಗಳಲ್ಲಿ ದೀಪ ಬೆಳಗಿಸಿ ಎರಡೂ ಹೊತ್ತಿನ ತುತ್ತಿಗೆ ದಾರಿ ಮಾಡಿಕೊಟ್ಟಿತು. ಸುಮಾರು ಐದು ದಶಕಗಳಷ್ಟು ಹಿಂದೆ ಮಧುರೆಯ ಪುಲ್ಲಚ್ಚೇರಿಯಲ್ಲಿ ಇಪ್ಪತ್ತು ಮಹಿಳೆಯರಿಂದ ಬರೇ 200 ರೂಪಾಯಿ ಇಡುಗಂಟಿನಿಂದ ಪ್ರಾರಂಭಗೊಂಡ ಕಲಂಜಿಯಂ ಇಂದು ಆಂಧ್ರ, ತಮಿಳುನಾಡು, ಸೇರಿದಂತೆ 50-60 ಸಾವಿಕ್ಕೂ ಹೆಚ್ಚಿನ ಹಳ್ಳಿಗಳಲ್ಲಿ ತನ್ನ ಜಾಲ ವಿಸ್ತರಿಸಿದೆ. ಸದಸ್ಯೆಯರಿಂದ ಇದು ಉಳಿತಾಯ ರೂಪದಲ್ಲಿ ಸಂಗ್ರಹಿಸಿದ ಹಣದ ಮೊತ್ತವೇ ಸುಮಾರು 20-25 ಕೋಟಿಗಳಷ್ಟು. ಸಹಸ್ರಾರು ಸಂಖ್ಯೆಯ ಸದಸ್ಯೆಯರನ್ನು ಹೊಂದಿದ ಈ ಸಂಘಟನೆ ಬಾಲ್ಯವಿವಾಹದ ಬಗ್ಗೆ, ಮದ್ಯಪಾನದ ಕೆಡುಕಿನ ಬಗ್ಗೆ, ಜನರಿಗೆ ತಿಳುವಳಿಕೆ ನೀಡುವ ಹಾಗೂ ಈ ಪಿಡುಗುಗಳ ವಿರುದ್ಧ ಹೋರಾಟ ನಡೆಸುವಲ್ಲಿ ಗಂಭೀರವಾಗಿ ತನ್ನನ್ನು ತೊಡಗಿಸಿಕೊಂಡಿದೆ. ಬಡ ಸಂಸಾರಗಳನ್ನು ಬೀದಿಪಾಲು ಮಾಡಲು ಕಾರಣವಾದ ಮದ್ಯದಂಗಡಿಗಳನ್ನು ಮುಚ್ಚಿಸುವಲ್ಲಿ ಕಲಂಜಿಯಂ ಸಾಕಷ್ಟು ಕೆಲಸ ಮಾಡಿದೆ. ಜೊತೆಯಲ್ಲಿ ತನ್ನ ಮೂಲ ಕಚೇರಿ ಹೊಂದಿರುವ ಪುಲ್ಲಚ್ಚೇರಿಯಲ್ಲಿ ಕಾರ್ಮಿಕರ ಮಕ್ಕಳಿಗೆ ಅನುಕೂಲವಾಗುವಂತೆ ಒಂದು ಪ್ರಾಥಮಿಕ ಶಾಲೆಯನ್ನು ತೆರೆದಿದೆ. ಇದು ತಮಿಳುನಾಡಿನ ಹಳ್ಳಿ ಒಂದರ ದಲಿತ ಕುಟುಂಬದಿಂದ ಬಂದ ಒಬ್ಬ ಅನಕ್ಷರಸ್ಥೆ ಮಾಡಿದ ಸಾಧನೆ. ಇವಳ ಈ ಸಾಧನೆಗಾಗಿ 2000ದ ಸಾಲಿನ ಜಾನಕಿದೇವಿ ಬಜಾಜ್ ಪ್ರಶಸ್ತಿ ಪಡೆದ ಇವಳ ಕಾರ್ಯವೈಖರಿಯನ್ನು ಅಂದು ಪ್ರಶಸ್ತಿ ಪ್ರದಾನ ಮಾಡಿದ ಗಾಂದೀಜಿಯವರ ಮೊಮ್ಮಗಳಾದ ಸುಮಿತ್ರಾ ಕುಲಕರ್ಣಿ ಅವರು ಮುಕ್ತಕಂಠದಿಂದ ಶ್ಲಾಘಿಸಿದರು. ಅನಂತರ ಮಹಿಳಾ ಸಬಲೀಕರಣ ವರ್ಷದ ಘೋಷಣೆ ಸಂದರ್ಭದಲ್ಲಿ ಭಾರತದ ಮಾಜಿ ಪ್ರಧಾನಿ ವಾಜಪೇಯಿಯವರು ಅವಳ ಸಾಧನೆ ಗಮನಿಸಿ ಆಕೆಗೆ ಸರಕಾರದ ವತಿಯಿಂದ ಒಂದು ಲಕ್ಷ ರೂಪಾಯಿಗಳ ವಿಶೇಷ ಪುರಸ್ಕಾರ ನೀಡಿ ಗೌರವಿಸಿದರು. ಅವಳು ಮಾಡಿದ ಸಾಧನೆಗಾಗಿ ಅವಳನ್ನು ಕೊಂಡಾಡಿದ ಪ್ರಧಾನಿ ವಾಜಪೇಯಿಯವರು ತಮ್ಮ ಮಧ್ಯೆ ಒಮ್ಮೆ ಬಗ್ಗಿದರು. ಕುಳಿತಿದ್ದ ಪ್ರೇಕ್ಷಕರು ಏನಾಯಿತು ಎಂದು ನೋಡುವಷ್ಟರಲ್ಲಿ ಪ್ರಧಾನಿ ಅವರು ಚಿನ್ನಪಿಳೈಯ ಪಾದಸ್ಪರ್ಶ ಮಾಡಿದ್ದು ನೋಡಿ ಜನ ಮೂಕ ವಿಸ್ಮಿತರಾದರು. ಜಗತ್ತಿನ ದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿಯೋರ್ವರು ಅನಕ್ಷರಸ್ಥೆಯೊಬ್ಬಳ ಕಾಲಿಗೆರಗಿ ಗೌರವ ತೋರಿಸಿದ್ದು ಮರೆಯಲಾರದ ಒಂದು ಅಪರೂಪದ ಘಟನೆಯಾಗಿ ನೆರೆದ ಪ್ರೇಕ್ಷಕರಲ್ಲಿ ರೋಮಾಂಚನ ಉಂಟುಮಾಡಿತು. ಚಿನ್ನಪಿಳೈ ಅಂಥ ಒಂದು ಗೌರವಕ್ಕೆ ಪಾತ್ರಳಾಗಿ ಒಂದು ಉದ್ಧಾತ ಆದರ್ಶಕ್ಕೆ ಬುನಾದಿ ಹಾಕಿದಳು. ಚುನಾಯಿತ ಜನಪ್ರತಿನಿಧಿಗಳಿಗೆ ಕ್ಷೇತ್ರ ಅಭಿವೃದ್ಧಿಗೆಂದು ನಿಧಿಕೊಡಲಾಗುತ್ತದೆ. ಆದರೂ ಕ್ಷೇತ್ರಾಭಿವೃದ್ಧಿ ಏನೂ ಆಗುವುದಿಲ್ಲ. ನಿಧಿ ಪ್ರತಿನಿಧಿಗಳ ಜೇಜು ಸೇರುತ್ತದೆ. ಆದರೆ ಚಿನ್ನಪಿಳೈ ತನಗೆ ಸೇರಿದ ಪ್ರಶಸ್ತಿಯ ಹಣವನ್ನು ಮಹಿಳೆಯರ ಅಭಿವೃದ್ಧಿಗೆಂದು ಕಲಂಜಿಯಂಗೆ ನೀಡಿದ್ದಾಳೆ. ಸರಕಾರದ ವತಿಯಿಂದ ಬಡವರ ಅಭಿವೃದ್ಧಿಗೆಂದು ನಿಗದಿಯಾದ ಹಣ ಭ್ರಷ್ಟ ಅಧಿಕಾರಿಶಾಹಿಯಿಂದಾಗಿ ಫಲಾನುಭವಿಗಳಿಗೆ ಸಿಗುವುದೇ ಇಲ್ಲ. ಆದರೆ ಸರಕಾರದಿಂದ ಏನನ್ನೂ ಪಡೆಯದೆ ಚಿನ್ನಪಿಳೈ ಕೆಳವರ್ಗದ ಜನರ ಜೀವನದಲ್ಲಿ ಕಲಂಜಿಯಂ ಮೂಲಕ ಕ್ರಾಂತಿ ಮಾಡಿ ಎತ್ತರದ ವ್ಯಕ್ತಿತ್ವ ಮೆರೆದಿದ್ದಾಳೆ. ಪ್ರಧಾನಿಯವರು ಅವಳ ಈ ತೆರೆದ ಎತ್ತರದ ವ್ಯಕ್ತಿತ್ವಕ್ಕೆ ಮಹಿಳಾ ಸಬಲೀಕರಣ ನಿಜ ಅರ್ಥದಲ್ಲಿ ಸಾಕಾರಗೊಳ್ಳಲು ಚಿನ್ನಪಿಳೈಯಂಥ ಮಹಿಳೆಯರು ಬೇಕು. ಅನಕ್ಷರಸ್ಥೆಯಾದರೂ ಅವಳು ತುಳಿದ ಸಾಧನೆಯ ದಾರಿ ಊಹೆಗೂ ನಿಲುಕದ್ದು.
ಕವಿತೆಯ ಸಾಲುಗಳು
et us celebrate this spirit of woman hood
let us tell her that sh is worth a lot more than mere words can convey
ಎಂಬುದು ಹೆಚ್ಚು ಅರ್ಥಪೂರ್ಣ .