ಆತ್ಮಹತ್ಯಾ ದಾಳಿ ಇರಾಕ್: 47 ಸಾವು
ಬಾಗ್ದಾದ್, ಮಾ.7: ಆತ್ಮಹತ್ಯಾ ಬಾಂಬರ್‌ಗಳು ಸ್ಫೋಟಕಗಳಿದ್ದ ಇಂಧನ ಟ್ರಕ್ಕನ್ನು ದಕ್ಷಿಣ ಬಾಗ್ದಾದ್‌ನಲ್ಲಿರುವ ಭದ್ರತಾ ಚೆಕ್‌ಪೋಸ್ಟ್‌ನೊಳಕ್ಕೆ ನುಗ್ಗಿಸಿದಾಗ ಸಂಭವಿಸಿದ ಭೀಕರ ಸ್ಫೋಟದಲ್ಲಿ 47 ಮಂದಿ ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದಾರೆ. ಈ ಯುದ್ಧಪೀಡಿತ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಪ್ರಥಮ ದಾಳಿ ಇದಾಗಿದೆ.
ಇಸ್ಲಾಮಿಕ್ ಸ್ಟೇಟ್ ಉಗ್ರರು ಈ ದಾಳಿಯ ಹೊಣೆ ಹೊತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಹೇಳಿಕೆಯಲ್ಲಿ, ಹಿಲ್ಲಾಹ್ ನಗರದ ಹೊರಗಿನ ಚೆಕ್‌ಪೋಸ್ಟ್‌ನಲ್ಲಿ ಬಾಂಬ್ ದಾಳಿ ನಡೆಸಿದ ವ್ಯಕ್ತಿಯನ್ನು ಅಬು ಇಸ್ಲಾಂ ಅಲ್ ಅನ್ಸಾರಿ ಎಂದು ಹೆಸರಿಸಿದೆ.
Next Story





