ಜ್ಯುವೆಲ್ಲರ್ಸ್ ಬಂದ್ ಆರನೆ ದಿನಕ್ಕೆ

ಉಡುಪಿ, ಮಾ.7: ಕೇಂದ್ರ ಸರಕಾರ ಈ ಬಾರಿಯ ಬಜೆಟ್‌ನಲ್ಲಿ ಚಿನ್ನಾ ಭರಣಗಳಿಗೆ ಸಂಬಂಧಿಸಿದಂತೆ ಹೊಸ ದಾಗಿ ವಿಧಿಸಿರುವ ಟಿಸಿಎಸ್ ಹಾಗೂ ಹೆಚ್ಚುವರಿ ಅಬಕಾರಿ ಶುಲ್ಕವನ್ನು ವಿರೋಧಿಸಿ ಕಳೆದ ಆರು ದಿನಗಳಿಂದ ವ್ಯವಹಾರಗಳನ್ನು ಸ್ಥಗಿತಗೊಳಿಸಿ ಮುಷ್ಕರ ಆಚರಿಸುತ್ತಿರುವ ಚಿನ್ನದ ವ್ಯಾಪಾರಿಗಳು ಇಂದು ಉಡುಪಿ ನಗರದಲ್ಲಿ ವೌನ ಪ್ರತಿಭಟನಾ ವೆುರ ವಣಿಗೆಯನ್ನು ನಡೆಸಿದರು.
ಉಡುಪಿ ರಥಬೀದಿಯಿಂದ ಆರಂ ಭಗೊಂಡ ಮೆರವಣಿಗೆ ಕನಕದಾಸ ರಸ್ತೆ, ಸರ್ವಿಸ್ ಬಸ್ ನಿಲ್ದಾಣ, ಸಿಟಿ ಬಸ್ ನಿಲ್ದಾಣ ಮಾರ್ಗ ವಾಗಿ ಸಾಗಿ ರಾಜಾಂಗಣ ಪಾರ್ಕಿಂಗ್ ಪ್ರದೇಶದಲ್ಲಿ ಸಮಾಪ್ತಿಗೊಂಡಿತು. ಇದರಲ್ಲಿ ನಗರದ ಜ್ಯುವೆಲ್ಲರ್ಸ್ ಮಾಲಕರು, ಸಿಬ್ಬಂದಿ ಪಾಲ್ಗೊಂಡು ಕೇಂದ್ರ ಸರಕಾರದ ಕ್ರಮ ವನ್ನು ತೀವ್ರವಾಗಿ ಖಂಡಿಸಿದರು.
Next Story





