ಮಂಜೇಶ್ವರ: ಅಂಗಡಿ ನೌಕರನೋರ್ವನ ಬೈಕ್ ತಡೆದು ನಿಲ್ಲಿಸಿ ಇರಿದು ಗಾಯಗೊಳಿಸಿ .ನಗದು ದರೋಡೆ

ಮಂಜೇಶ್ವರ: ಅಂಗಡಿ ನೌಕರನೋರ್ವನ ಬೈಕ್ ತಡೆದು ನಿಲ್ಲಿಸಿ ಇರಿದು ಗಾಯಗೊಳಿಸಿದ ತಂಡವೊಂದು ಆತನಲ್ಲಿದ್ದ 10 ಸಾವಿರ ರೂ.ನಗದು ದರೋಡೆಗೈದ ಘಟನೆ ಭಾನುವಾರ ರಾತ್ರಿ ಆನೆಕಲ್ಲು ಪರಿಸರದಲ್ಲಿ ಸಂಭವಿಸಿದೆ.
ಆನೆಕಲ್ಲು ವಿಜಯಡ್ಕ ನಿವಾಸಿ ಮೊಹಮ್ಮದ್ ಕುಂಞಿ ಎಂಬವರ ಪುತ್ರ ಶಾಫಿ(22)ಇರಿತಕ್ಕೊಳಗಾಗಿ ಹಣ ಕಳೆದುಕೊಂಡ ಯುವಕ.ಗಾಯಗೊಂಡ ಶಾಫಿಯನ್ನು ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಆರು ಮಂದಿಯ ತಂಡವೊಂದು ತಡೆದು ನಿಲ್ಲಿಸಿ ಶಾಫಿಯನ್ನು ತಡೆದು ನಿಲ್ಲಿಸಿ ಇರಿದು ಗಾಯಗೊಳಿಸಿ ಹಣ ದೋಚಿರುವುದಾಗಿ ದೂರಲಾಗಿದೆ.ಮುಡಿಪುವಿನಲ್ಲಿ ಅಂಗಡಿ ನೌಕರನಾಗಿರುವ ಶಾಫಿ ಭಾನುವಾರ ರಾತ್ರಿ ಮನೆಗೆ ಮರಳುತ್ತಿದ್ದಾಗ ತಂಡ ಹೊಂಚುಹಾಕಿ ಕೃತ್ಯವೆಸಗಿ ಪರಾರಿಯಾಗಿದೆ.ಪೋಲೀಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Next Story





