Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಆಗಸದಲ್ಲಿ ಇಂದು ಗುರುಪೂರ್ಣಿಮೆಯ ಸಂಭ್ರಮ

ಆಗಸದಲ್ಲಿ ಇಂದು ಗುರುಪೂರ್ಣಿಮೆಯ ಸಂಭ್ರಮ

ವಾರ್ತಾಭಾರತಿವಾರ್ತಾಭಾರತಿ8 March 2016 12:10 AM IST
share
ಆಗಸದಲ್ಲಿ ಇಂದು ಗುರುಪೂರ್ಣಿಮೆಯ ಸಂಭ್ರಮ

ಉಡುಪಿ, ಮಾ.7: ಚಂದ್ರನಿಂದ ನಮಗೆ ತಿಂಗಳಿ ಗೊಮ್ಮೆ ಹುಣ್ಣಿಮೆಯಾದರೆ, ಗುರುಗ್ರಹದಿಂದ ವರ್ಷಕ್ಕೊಮ್ಮೆ ಹುಣ್ಣಿಮೆ. ಚಂದ್ರನ ಹುಣ್ಣಿಮೆಯಂದು ಭೂಮಿ ಅಕ್ಕಪಕ್ಕದಲ್ಲಿ ಸೂರ್ಯಚಂದ್ರರಿರುವಂತೆ, ಗುರು ಪೂರ್ಣಿಮೆಯಂದು ಭೂಮಿಯ ಅಕ್ಕಪಕ್ಕ ಒಂದು ಕಡೆ ಸೂರ್ಯನಾದರೆ, ಮತ್ತೊಂದು ಕಡೆ ಗುರುಗ್ರಹವಿರುತ್ತದೆ.

ಚಂದ್ರನ ಹುಣ್ಣಿಮೆಯಂದು ಪಶ್ಚಿಮ ದಿಕ್ಕಿ ನಲ್ಲಿ ಸೂರ್ಯಾಸ್ತವಾದೊಡನೆ, ಪೂರ್ವ ದಿಕ್ಕಿ ನಲ್ಲಿ ಚಂದ್ರೋದಯವಾಗಿ ರಾತ್ರಿ ಹೊತ್ತು ಕೂಡ ಆಕಾಶದಲ್ಲಿ ಕಾಣಿಸುವಂತೆ, ಗುರುಗ್ರಹ ಹುಣ್ಣಿಮೆ ಯಂದು ಸೂರ್ಯಾಸ್ತವಾದೊಡನೆ, ಪೂರ್ವ ದಿಕ್ಕಿ ನಲ್ಲಿ ಗುರುಗ್ರಹ ಉದಯವಾಗಿ ರಾತ್ರಿಯಿಡೀ ಆಕಾಶ ದಲ್ಲಿ ಕಾಣಿಸಿಕೊಳ್ಳುತ್ತದೆ. ಮಾ.8ರಂದು ಗುರು ಪೂರ್ಣಿಮೆ.

 
ವರ್ಷಕ್ಕೊಮ್ಮೆ ನಡೆಯುವ ಈ ವಿದ್ಯಮಾನದ ವಿಶೇಷವೆಂದರೆ ಗುರುಗ್ರಹ ದೊಡ್ಡದಾಗಿ, ಹೆಚ್ಚಿನ ಪ್ರಭೆಯಿಂದ ಕಾಣಿಸುವುದು. ಆಗ ಭೂಮಿಗೆ ಗುರುಗ್ರಹ ಸುಮಾರು 25 ಕೋಟಿ ಕಿ.ಮೀ. ಸಮೀಪ ವಿರುತ್ತದೆ. ಸೌರವ್ಯೆಹದಲ್ಲಿಯೇ ದೊಡ್ಡದಾದ, ಸೂರ್ಯನಿಂದ ಐದನೆಯದಾದ ಗುರುಗ್ರಹವು ಸೂರ್ಯನಿಂದ ಸರಾಸರಿ 78 ಕೋಟಿ ಕಿ.ಮೀ. ದೂರ ದಲ್ಲಿ, ಭೂಮಿ 15 ಕೋಟಿ ಕಿ.ಮೀ. ದೂರದಲ್ಲಿದೆ. ಭೂಮಿ ಹಾಗೂ ಗುರುಗ್ರಹಕ್ಕೆ ಸರಾಸರಿ ಅಂತರ 63 ಕೋಟಿ ಕಿ.ಮೀ. ಆದರೆ ಈ ದೂರದಲ್ಲಿರುವುದು ಒಂದು ವರ್ಷದಲ್ಲಿ ಕೆಲವೇ ದಿನಗಳು ಮಾತ್ರ. ಅದು ಈಗ. ಭೂಮಿ, ಸೂರ್ಯನ ಸುತ್ತ ಒಂದು ಸುತ್ತು ಬರುವ ಒಂದು ವರ್ಷದಲ್ಲಿ ಭೂಮಿ, ಗುರುಗ್ರಹಗಳ ದೂರದ ಅಂತರ 63 ಕೋಟಿಯಿಂದ 93 ಕೋಟಿ ಕಿ.ಮೀ.ಯಾಗಲಿದೆ. ಈಗ ಮಾರ್ಚ್‌ನಲ್ಲಿ 63 ಕೋಟಿ, ಆದರೆ ಮುಂದೆ ಆರು ತಿಂಗಳಲ್ಲಿ ಅಂದರೆ ಸೆಪ್ಟಂಬರ್ ಹೊತ್ತಿಗೆ 93 ಕೋಟಿ ಕಿ.ಮೀ. ಆಗುತ್ತದೆ.
ಗುರುಗ್ರಹ ದ್ರವ್ಯರಾಶಿಯಲ್ಲಿ ಭೂಮಿಗಿಂತ 300 ಪಟ್ಟು ದೊಡ್ಡದು. ಗಾತ್ರದಲ್ಲಿ 1,400 ಪಟ್ಟು ದೊಡ್ಡದು. ಮಾ.8 ಹಾಗೂ 9ರಂದು ಸಂಜೆ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಹವ್ಯಾಸಿ ಖಗೋಳ ವೀಕ್ಷಕರ ಸಂಘವು ಆಸಕ್ತರಿಗೆ ವೀಕ್ಷಿಸಲು ಅವಕಾಶ ಕಲ್ಪಿಸಿದೆ. ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಡಾ.ಎ.ಪಿ.ಭಟ್ (ಮೊ:9448309077) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಭೂಮಿಯು ಗುರುಗ್ರಹ ಸಮೀಪವಿರುವ ಈ ಸಮಯ ದೂರದರ್ಶಕದಲ್ಲಿ ಗುರುವಿನ ವೀಕ್ಷಣೆಗೆ ಅತ್ಯುತ್ತಮ ಕಾಲ. ಅದರ ಮೇಲ್ಮೈ, ಧೂಳಿನ ಪಟ್ಟಿಗಳು ಹಾಗೂ ಅದರ ನಾಲ್ಕು ಚಂದ್ರರನ್ನು ನೋಡಿ ಸಂತೋಷ ಪಡಬಹುದು. ಈ ಅಮಾವಾಸ್ಯೆಯ ರಾತ್ರಿ ಬರಿಗಣ್ಣಿನಲ್ಲಿ ಉಜ್ವಲವಾಗಿ ಕಾಣಿಸಲಿದೆ. ಸುಮಾರು 67 ಚಂದ್ರರನ್ನು ಹೊಂದಿರುವ ಗುರುಗ್ರಹವು ‘ಗ್ರಹಗಳ ರಾಜ’ ಎಂಬ ಹೆಸರನ್ನೂ ಪಡೆದಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X