ವಿಶ್ವೇಶ್ವರಾಯ ತಾಂತ್ರಿಕ ವಿ.ವಿ.ಅಂತರ್ ವಲಯ ಪುರುಷರ ವಾಲಿಬಾಲ್ ಪಂದ್ಯಾಟ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ಪ್ರಶಸ್ತಿ

ಮಾರ್ಚ್ 03 ರಿಂದ 05ರವರೆಗೆ ಶಿವಮೊಗ್ಗದ ಜೆ.ಎನ್.ಎನ್.ಟಿ.ಇ. ಇಂಜಿನಿಯರಿಂಗ್ ಕಾಲೇಜಿನ ಆಶ್ರಯದಲ್ಲಿ ಜರುಗಿದ ವಿಶ್ವೇಶ್ವರಾಯ ತಾಂತ್ರಿಕ ವಿ.ವಿ. ಅಂತರ್ ವಲಯ ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪುರುಷರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ನಾಯಕ ಅಜಿತ್ ಕುಮಾರ್, ಭುವನ್, ಪ್ರಸಾದ್ ಹಾಗೂ ಕುಮಾರ್ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದರು.
Next Story





