ಪುತ್ತೂರು: ವಿಶ್ವ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯಲ್ಲಿ ಉದ್ಯಮಿ ರಂಜಿತಾ ಶಂಕರ್ ಮಾತನಾಡುತ್ತಿರುವುದು
ಪುತ್ತೂರು: ಹಳ್ಳಿಗಳಲ್ಲಿ ಉದ್ಯಮ ಸ್ಥಾಪಿಸುವ ಕುರಿತು ಮಹಿಳೆಯರು ಗಮನ ಹರಿಸುವ ಅಗತ್ಯವಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಸ್ಟಾರ್ಟ್ ಅಪ್ ಆಶಯದಂತೆ ಸಣ್ಣ ಉದ್ಯಮ ಆರಂಭಿಸುವವರಿಗೆ ಸಾಕಷ್ಟು ಅವಕಾಶವಿದೆ. ಮಹಿಳೆಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಉದ್ಯಮಿ ರಂಜಿತಾ ಶಂಕರ್ ಹೇಳಿದರು.
ಅವರು ಕಾಲೇಜು ಶಿಕ್ಷಣ ಇಲಾಖೆ, ಪುತ್ತೂರು ಸರ್ಕಾರಿ ಪ್ರ. ದ. ಮಹಿಳಾ ಕಾಲೇಜು ಇವುಗಳ ಆಶ್ರಯದಲ್ಲಿ ಮಂಗಳವಾರ ಪುತ್ತೂರು ಪುರಭವನದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲ್ಲಾ ದಿನಗಳ ಪೈಕಿ ಮಹಿಳಾ ದಿನಾಚರಣೆ ಅತ್ಯಂತ ಮಹತ್ವಪೂರ್ಣ ಹಾಗೂ ಸಕಾಲಿಕವಾಗಿದ್ದು, ಕುಟುಂಬದ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸುವ ಮಹಿಳೆ ಇಂದು ಯಾವುದೇ ಕ್ಷೇತ್ರದ ಜವಾಬ್ದಾರಿಯನ್ನು ಯಶಸ್ವಿಯಾಗಿ ಪುತ್ತೂರು ನಗರಸಭೆ ಪೌರಾಯುಕ್ತೆ ರೇಖಾ ಜೆ. ಶೆಟ್ಟಿ ಮಾತನಾಡಿ ಹಂಗಸರಿಗೆ ಅಗಾಧವಾದ ತಾಳ್ಮೆ, ಶಕ್ತಿ, ಸಾಮರ್ಥ್ಯವಿದೆ. ಹೆಣ್ಣು ಎಂಬ ತಾತ್ಸಾರ ಮನೋಭಾವ ಸರಿಯಲ್ಲ. ವಿದ್ಯಾರ್ಥಿನಿಯರು ಭವಿಷ್ಯದಲ್ಲಿ ಏನಾಗಬೇಕು ಎಂಬುದನ್ನು ಈಗಲೇ ನಿರ್ಧರಿಸಿ ಮುನ್ನಡೆಯಬೇಕು. ಶೈಕ್ಷಣಿಕ ಸಾಮರ್ಥ್ಯ ಹೆಚ್ಚಿಸಿಕೊಂಡಾಗ ಸಮಾಜದಲ್ಲಿ ಮುನ್ನುಗ್ಗಲು ಸಾಧ್ಯ. ಇದಕ್ಕಾಗಿ ಮಹಿಳೆ ಮೌನ ತೊರೆದು ಮಾತಾಗಬೇಕು. ಲಜ್ಜೆ ತೊರೆದು ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಅನ್ಯಾಯ, ಟೀಕೆಯ ವಿರುದ್ಧ ಕಾರ್ಯ ಸಾಧನೆಯ ಮೂಲಕ ಉತ್ತರಿಸಬೇಕು ಎಂದರು.
1998ರಲ್ಲಿ ಸರ್ಕಾರದ ವತಿಯಿಂದ ಸ್ವಸಹಾಯ ಸಂಘಗಳನ್ನು ಆರಂಭಿಸಲಾಗಿತ್ತು. ಆಗ ಮಹಿಳೆಯರಲ್ಲಿ ಆತ್ಮವಿಶ್ವಾಸ, ಧೈರ್ಯ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಮಹಿಳೆಯರ ಪರ ಕೆಲಸ ಮಾಡುವ ಅವಕಾಶವನ್ನು ತಾನು ಪಡೆದಿದ್ದೆ. ಆದರೆ ಈಗ ಮಹಿಳೆಯರು ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಎಂದರು.
ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶಶಿಕಲಾ, ಸಾಮಾಜಿಕ ಕಾರ್ಯಕರ್ತೆ ಜೊಹರಾ ನಿಸಾರ್, ವಕೀಲೆ ಸಾಯಿರಾ ಜುಬೇರ್ ಉಪಸ್ಥಿತರಿದ್ದರು. ಪುತ್ತೂರು ಮಹಿಳಾ ಸ. ಪ್ರ. ದ. ಕಾಲೇಜಿನ ಪ್ರಾಂಶುಪಾಲ ಪ್ರೊ. ಝೆವಿಯರ್ ಡಿಸೋಜ ಸ್ವಾಗತಿಸಿ, ವಂದಿಸಿದರು.
.





