ಪುತ್ತೂರು: ಮಾ.11, 12ರಂದು ಸ್ವಲಾತ್ ಮಜ್ಲಿಸ್‌ನ ವಾರ್ಷಿಕೋತ್ಸವ
ಪುತ್ತೂರು: ಪಾಣಾಜೆ ಜುಮ್ಮಾ ಮಸ್ಜಿದ್ ಆಶ್ರಯದಲ್ಲಿ ಸ್ವಲಾತ್ ಮಜ್ಲಿಸ್‌ನ ವಾರ್ಷಿಕ ಸಮಾರಂಭ, ಕೂಟು ಪ್ರಾರ್ಥನೆ, ಧಾರ್ಮಿಕ ಸಮಾವೇಶ ಮಾ.11, 12ರಂದು ಪಳ್ಳಿತ್ತಡ್ಕ ದರ್ಗಾ ಶರೀಫ್‌ನಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಪಿ.ಕೆ.ಇಸ್ಮಾಯಿಲ್ ತಿಳಿಸಿದ್ದಾರೆ.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಾ. 11ರಂದು ಸಾಯಂಕಾಲ 6.45ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಸಯ್ಯದ್ ಅಹ್ಮದ್ ಮುಖ್ತಾರ್ ತಂಙಳ್ ಕುಂಬೋಲ್ ದುವಾಶೀರ್ವಚನ ಮತ್ತು ಸ್ವಲಾತ್‌ನ ನೇತೃತ್ವ ವಹಿಸುವರು. ಮೌಲಾನ ಹುಸೈನ್ ದಾರಿಮಿ ತಿರುವನಂತಪುರ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಅಬೂ ಮುಅಫಕ್ ಮುಹಮ್ಮದ್ ಅಲ್ ಅಮಾನಿ ಪೊನ್ಮಲೆ ಕಾರ್ಯಕ್ರಮ ಉದ್ಘಾಟಿಸುವರು. ಮಾ.12ರಂದು ಬೆಳಗ್ಗೆ 10.30ಕ್ಕೆ ನಡೆಯುವ ಧಾರ್ಮಿಕ ಸಮಾವೇಶ ಸೌಹಾರ್ದ ಸಂಗಮದಲ್ಲಿ ಅಂತರ್ ರಾಜ್ಯಮಟ್ಟದ ಆಹ್ವಾನಿತರ ಗಾಯಗರ ಗಾಯನ ಸ್ಪರ್ಧೆ ನಡೆಯಲಿದೆ. ಪಾಣಾಜೆ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ಲ ಕುಂಞಿ ಜಾಲಗದ್ದೆ ಧ್ವಜಾರೋಹಣ ನೆರವೇರಿಸುವರು. ಅಬ್ದುಲ್ ಖಾದರ್ ಉಲೂಮಿ ದುವಾಶೀರ್ವಚನ ನೆರವೇರಿಸುವರು. ಧಾರ್ಮಿಕ ಸಮಾವೇಶ ಸೌಹಾರ್ದ ಸಂಗಮ ಅಂತರಾಜ್ಯ ಮಟ್ಟದ ದಫ್ ಸ್ಪರ್ಧೆಯಲ್ಲಿ ಸಯ್ಯದ್ ಝೈನುಲ್ ಆಬಿದಿನ್ ಜಮಲುಲ್ಲೈಲಿ ತಂಙಳ್ ಕಾಜೂರು ದುವಾಶಿರ್ವಚನ ನೀಡುವರು. ಎಂವೈಎಫ್ ಗೌರವಾಧ್ಯಕ್ಷ ಹಾಜಿ ಮುಹಮ್ಮದ್ ಕುಂಞಿ ಕುಕ್ಕುವಳ್ಳಿ ಸಮಾವೇಶ ಉದ್ಘಾಟಿಸುವರು. ಎಂವೈಎಫ್ ಅಧ್ಯಕ್ಷ ಹಸನ್ ಉಡ್ಡಂಗಳ ದುಬೈ ಅಧ್ಯಕ್ಷತೆ ವಹಿಸುವರು. ಜಿಲ್ಸಾದ್ ವಲ್ಲಪುಝ ಅವರಿಂದ ನಬಿ ಮದಹ್ ಆಲಾಪನೆ ವಿಶೇಷ ಆಕರ್ಷಣೆಯಾಗಿರಲಿದೆ ಎಂದು ಹೇಳಿದರು.





