ರಾಯಪುರ ಚರ್ಚ್ ದಾಳಿ:ಲೋಕಸಭೆಯಲ್ಲಿ ಕಾಂಗ್ರೆಸ್‌ನಿಂದ ನಿಲುವಳಿ ಸೂಚನೆ

ಹೊಸದಿಲ್ಲಿ,ಮಾ.8: ಛತ್ತೀಸಗಡದ ರಾಯಪುರದಲ್ಲಿ ಚರ್ಚ್‌ವೊಂದರ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ಮಂಗಳವಾರ ಲೋಕಸಭೆಯಲ್ಲಿ ನಿಲುವಳಿ ಸೂಚನೆಯೊಂದನ್ನು ನೀಡಿದೆ. ರವಿವಾರ ಈ ಚರ್ಚ್‌ಗೆ ನುಗ್ಗಿದ ಬಜರಂಗಿಗಳೆನ್ನಲಾದ ದುಷ್ಕರ್ಮಿಗಳ ಗುಂಪು ದಾಂಧಲೆ ನಡೆಸಿತ್ತಲ್ಲದೆ,ಪ್ರಾರ್ಥನೆಗಾಗಿ ಸೇರಿದ್ದ ಮಹಿಳೆಯರ ಬಟ್ಟೆಗಳನ್ನು ಹರಿದು ಅಟ್ಟಹಾಸ ಮೆರೆದಿತ್ತು. ದಾಳಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಐವರು ಗಾಯಗೊಂಡಿದ್ದರು.
ತನ್ಮಧ್ಯೆ ಕೇಂದ್ರವು ಘಟನೆಯ ಕುರಿತು ಛತ್ತೀಸಗಡ ಸರಕಾರದಿಂದ ವರದಿಯೊಂದನ್ನು ಕೇಳಿದೆ. ಪೊಲೀಸರು ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ ಮತ್ತು ತಪ್ಪಿತಸ್ಥರನ್ನು ಶಿಕ್ಷೆಯಿಂದ ಪಾರಾಗಲು ಬಿಡುವುದಿಲ್ಲ ಎಂದು ಸಹಾಯಕ ಗೃಹಸಚಿವ ಕಿರಣ್ ರೆಜಿಜು ಅವರು ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದರು.
Next Story





