ಕನಕ ಕೀರ್ತನ ಗಾಯನ ಕಾರ್ಯಕ್ರಮ ಉದ್ಘಾಟನೆ: ಸುಸಂಸ್ಕ್ರತರಾಗಿ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳಬೇಕು: ಹುಸೇನ್ ಸಾಬ್

ಮಂಗಳೂರು ವಿವಿಯ ಕನಕದಾಸ ಸಂಶೋಧನ ಕೇಂದ್ರ ಮತ್ತು ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಆಶ್ರಯದಲ್ಲಿ ಮಂಗಳವಾರ ನಡೆದ ಕನಕ ಕೀರ್ತನ ಕಾರ್ಯಕ್ರದಲ್ಲಿ ಪಂಡಿತ್ ಬಿ. ಹುಸೇನ್ ಸಾಬ್ ಮಾತನಾಡಿದರು.
ಕೊಣಾಜೆ: ಭಕ್ತ-ಭಗವಂತನ ನಡುವಿನ ಅವಿನಾಭವ ಸಂಬಂಧದಲ್ಲಿ ನಾನು ಎಂಬ ಅಹಂ ಅಳಿದು, ಕುಲಬೇದ ಮರೆತು, ಪ್ರಾಪಂಚಿಕ ವ್ಯಾಮೋಹದಿಂದ ದೂರ ಉಳಿದು ಮಾನವರಾಗಿ, ಸುಸಂಸ್ಕ್ರತರಾಗಿ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳಬೇಕೆಂದು ದಾಸರ ಕೀರ್ತನೆಗಳ ಗಾಯಕರೆಂದೇ ಖ್ಯಾತರಾಗಿರುವ ಪಂಡಿತ್ ಬಿ. ಹುಸೇನ್ ಸಾಬ್
ಅವರು ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರ ಮತ್ತು ರಾಷ್ಟ್ರೀಯ ಸೇವಾ ಯೋಜನೆ, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಇದರ ಸಹಯೋಗದಲ್ಲಿ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯದಲ್ಲಿ ಕನಕ ಕೀರ್ತನ ಗಾಯನ ಕಾರ್ಯಕ್ರಮ
ವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನ ನಿಸ್ಪಾರ್ಥ ಬದುಕಿನ ಪರಿಕಲ್ಪನೆ, ವಿಶ್ವಮಾನವತೆ ಮತ್ತು ಪರರಿಗಾಗಿ ಮಿಡಿಯುವ ಹೃದಯಗಳು ಮತ್ತು ಕಾರ್ಯರೂಪದಲ್ಲಿ ಸೇವೆಯ ಮುಖೇನ ಸಾರ್ಥ್ಯಕವನ್ನು ಕಂಡುಕೊಳ್ಳುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕರಾದ ಪ್ರೊ. ಬಿ. ಶಿವರಾಮ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಕನಕ ದಾಸರ ಬದುಕು ಹಾಗೂ ವಿಚಾರಧಾರೆಗಳನ್ನು ಸೂಕ್ಮವಾಗಿ ಪರಿಚಯಿಸಿ ಈ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಸೂಕ್ತ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸ್ಕೂಲ್ ಆಫ್ ಸೋಶಿಯಲ್ ವರ್ಕ್ನ ಪರೀಕ್ಷಾಂಗ ಕುಲಸಚಿವರಾದ ಡಾ. ಲಕ್ಮೀನಾರಾಯಣ ಭಟ್ ರವರು ವಹಿಸಿಕೊಂಡು ಕನಕದಾಸರ ಕೀರ್ತನೆಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ರೂಢಿಸಿಕೊಂಡಾಗ ಸುಖ ಹಾಗೂ ಶಾಂತಿ ಪ್ರಾಪ್ತಿಯಾಗಲು ಸಹಕಾರಿ ಎಂದರು. ಪಂಡಿತ್ ಬಿ. ಹುಸೇನ್ ಸಾಭ್ ರಂತಹ ವಿಶ್ವಮಾನವ ಸದೃಶ ವ್ಯಕ್ತಿತ್ವ ಗೌರವ ಡಾಕ್ಟರೇಟ್ ಪದವಿಗೆ ಸಮಾನರು ಎಂದು ಪ್ರಸಂಶಿಸಿದರು.
ರಾಷ್ಟ್ರೀಯ ಸೇವಾ ಯೋಜನೆ, ಮಂಗಳೂರು ವಿಶ್ವ ವಿದ್ಯಾನಿಲಯದ ಸಂಯೋಜಕರಾದ ಪ್ರೊ. ವಿನೀತ ಸ್ವಾಗತಿಸಿದರು ಹಾಗೂ ಸ್ಕೂಲ್ ಆಫ್ ಸೋಶಿಯಲ್ ವರ್ಕ್ನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಪೂರ್ಣಿಮಾ ಲೋಕೇಶ್ ವಂದನಾರ್ಪಣೆಗೈದರು. ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶಿನಿ ನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಅನಸೂಯ ಶೆಣೈ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ದೀಕ್ಷಾ ಅತಿಥಿ ಪರಿಚಯ ಮಾಡಿದರು. ನೇಹ ಹನೀಷ್, ಸ್ವಾತಿ ಹಾಗೂ ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.
ಕನಕ ಕೀರ್ತನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು
ಪ್ರೌಢ ಶಾಲೆ ವಿಭಾಗ; ನೋಂದಾಯಿಸಿಕೊಂಡವರು -18
ಭಾಗವಹಿಸಿದವರು -12
ಆಯ್ಕೆಯಾದವರು:- 1). ಶರಣ್ಯ ಬಿ., 9ನೇ ತರಗತಿ, ಕೆನರಾ ಪ್ರೌಢ ಶಾಲೆ, ಉರ್ವಾ,
ಮಂಗಳೂರು 2). ಗೌರೀಶ್ ಭಟ್, 9ನೇ ತರಗತಿ, ಕೇಂದ್ರೀಯ ವಿದ್ಯಾಲಯ,
ಪಣಂಬೂರು3). ಆರ್. ಸುದೀಕ್ಷಾ, 8ನೇ ತರಗತಿ, ಶ್ರೀ ರಾಮಕೃಷ್ಣ ಪ್ರೌಢ ಶಾಲೆ, ಬಂಟ್ಸ್ ಹಾಸ್ಟೇಲ್,
ಮಂಗಳೂರು ಪದವಿ ವಿಭಾಗ ;- ನೋಂದಾಯಿಸಿಕೊಂಡವರು -33
ಭಾಗವಹಿಸಿದವರು -19
ಆಯ್ಕೆಯಾದವರು: 1). ನಿನಾದ, ಪ್ರಥಮ ಬಿ. ಕಾಂ., ಭುವನೇಂದ್ರ ಕಾಲೇಜು,
ಕಾರ್ಕಳ 2). ಸತ್ಯಪ್ರಜ್ಞ, ಪ್ರಥಮ ಬಿಎಸ್ಸಿ, ಶ್ರೀದೇವಿ ಕಾಲೇಜು, ಬಳ್ಳಾಲ್ಬಾಗ್
3). ತನ್ವಿ ಡಿ.ಐ., ಪ್ರಥಮ ಮೆಕ್ಯಾನಿಕಲ್ ವಿಭಾಗ, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು, ಪುತ್ತೂರು
ಪದವಿ ಪೂರ್ವ ವಿಭಾಗ:- ನೋಂದಾಯಿಸಿಕೊಂಡವರು -01
ಭಾಗವಹಿಸಿದವರು -01
ಆಯ್ಕೆಯಾದವರು :- 1). ಚಿನ್ಮಯ, ದ್ವಿತೀಯ ವಾಣಿಜ್ಯ ವಿಭಾಗ, ಎಸ್.ವಿ.ಎಸ್. ಕಾಲೇಜು, ಬಂಟ್ವಾಳ,
ಅಧ್ಯಾಪಕರು ಮತ್ತು ಆಡಳಿತವರ್ಗ ವಿಭಾಗ:- ನೋಂದಾಯಿಸಿಕೊಂಡವರು -11
ಭಾಗವಹಿಸಿದವರು -06
ಆಯ್ಕೆಯಾದವರು :- 1). ಮಂಜುನಾಥ್ ಎನ್., ಉಪನ್ಯಾಸಕರು, ಶ್ರೀರಾಮ ಪ್ರಥಮ ದರ್ಜೆ ಕಾಲೇಜು, ಕಲ್ಲಡ್ಕ,
ಬಂಟ್ವಾಳ, 2). ಶ್ರೀದೇವಿ, ಉಪನ್ಯಾಸಕಿ, ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು,
ಮೂಡಬಿದಿರೆ 3). ಶ್ರೀ ರವಿಶಂಕರ, ಶಿಕ್ಷಕರು, ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ, ಹರೇಕಳ,
ಪಾವೂರು ಸಾರ್ವಜನಿಕ ವಿಭಾಗ:- ನೋಂದಾಯಿಸಿಕೊಂಡವರು -10
ಭಾಗವಹಿಸಿದವರು -05
ಆಯ್ಕೆಯಾದವರು :-1). ಅಶ್ವಿನಿ ಕುಮಾರ್ ಎನ್., ಬಿಜೈ, ಮಂಗಳೂರು
2). ಅರುಣಾ ರಾವ್, ಕಟೀಲು,
3). ಆಕೃತಿ ಭಟ್, ಉರ್ವಾಸ್ಟೋರ್, ಮಂಗಳೂರು
ಆ0್ಕೆುಗೊಂಡ ಅಭ್ಯರ್ಥಿಗಳಿಗೆ ತಲಾ ರೂ. 3,000.00ರಂತೆ ನಗದು ಪುರಸ್ಕಾರ ಹಾಗೂ ಕನಕ ಸ್ಮರಣಿಕೆಗಳನ್ನು 2016ರ ಮಾರ್ಚ್ 23ರಂದು ಅಪರಾಹ್ನ 2.30ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯ ದಲ್ಲಿ ನಡೆ0ುುವ ಕನಕ ಸ್ಮೃತಿಕಾರ್ಯರ್ಕ್ರಮದಲ್ಲಿ ನೀಡಿ ಅವರಿಗೆ ಹಾಡಲು ಅವಕಾಶ ಕಲ್ಪಿಸಲಾಗುವುದು.







