ಅವಳಿ ಜೋಡಿಗಳ ಮದುವೆ: ಪೌರೋಹಿತ್ಯಕ್ಕೂ ಅವಳಿ ಸಹೋದರ ಫಾದ್ರಿಗಳು!
.jpg)
ಹೊಸದಿಲ್ಲಿ.ಮಾರ್ಚ್.8: ಕೇರಳದಲ್ಲಿ ಇತ್ತೀಚೆಗೆ ನಡೆದಿದ್ದ ಮದುವೆಯೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಮದುವೆಯ ವಿಶೇಷತೆಯೆಂದರೆ ಇಬ್ಬರು ಅವಳಿ ಸಹೋದರರಿಗೆ ಅವಳಿ ಸಹೋದರಿಯರ ಜೊತೆ ಮದುವೆ ನಡೆದಿತ್ತು. ಇದರಲ್ಲಿ ಫಾದರ್‌ನಿಂದ ಹಿಡಿದು ಕೆಲವು ಜನರು ಕೂಡಾ ಅವಳಿಗಳಾಗಿದ್ದರು. ಮಾಧ್ಯಮಗಳಲ್ಲಿ ಇದು ಚರ್ಚೆಗೆ ಕಾರಣವಾಯಿತು. ಕೇರಳದ ದಿಲ್‌ರಾಜ್ ಮತ್ತು ದಿಲ್‌ಕರ್ ಅವಳಿ ಸಹೋದರರಾಗಿದ್ದಾರೆ. ಅದೇ ರೀತಿ ಅವರಿಬ್ಬರು ರೀಮಾ ಮತ್ತು ರೀನಾ ಎಂಬ ಅವಳಿ ಸಹೋದರಿಯರನ್ನು ಮದುವೆಗೆ ಆಯ್ಕೆ ಮಾಡಿದ್ದರು. ಅವರ ಮದುವೆ ಕಾರ್ಯಕ್ರಮ ನಡೆಸಿಕೊಟ್ಟು ಫಾದ್ರಿಗಳಾದ ರೆಜಿ ಮತ್ತು ರೋಜಿ ಕೂಡಾ ಅವಳಿಗಳಾಗಿದ್ದರು. ಮಾತ್ರವಲ್ಲ ಮದುವೆಯ ಪ್ಲವರ್ ಗರ್ಲ್ಸ್ ಮತ್ತು ಪೇಜ್ ಬಾಯ್ಸ್ ಕೂಡಾ ಅವಳಿಗಳಾಗಿದ್ದರು. ಇವರ ಮದುವೆಯ ಈ ವಿಶೇಷತೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಜನಮನ್ನಣೆಗಳಿಸಿತ್ತು. ವರನ ದೊಡ್ಡ ಅಣ್ಣಂದಿರು ಕೂಡಾ ಅವಳಿಗಳಾಗಿದ್ದರು. ಎಲ್ಲರೂ ಒಂದೇ ಗೆಟ್‌ಅಪ್‌ನಲ್ಲಿ ಮದುವೆಯಲ್ಲಿ ಭಾಗವಹಿಸಿದ್ದರು. ವರ ದಿಲ್‌ರಾಜ ತನಗೆ ಕೇವಲ ಏಳು ಅವಳಿ ಸಹೋದರ ಜೋಡಿಗಳನ್ನು ಮಾತ್ರ ಮದುವೆ ವೇಳೆ ಆಮಂತ್ರಿಸಲು ಸಾಧ್ಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ದಿಲ್‌ಕರ್ ಮತ್ತು ದಿಲ್ ರಾಜ್ ಮದುವೆಗಾಗಿ ಅವಳಿ ಸಹೋದರಿಯರಾದ ವಧುಗಳನ್ನು ಹುಡುಕಲು ಮೂರುವರ್ಷ ವ್ಯಯಿಸಿದ್ದರು.
_0.jpg)








