ಮಂಜೇಶ್ವರ : ಮೊರತ್ತಣೆ ಸೆಲೂನ್ ಮಾಲಕನ ಮೊಬೈಲ್ ಕಳವು : ಮೂವರ ಬಂಧನ

ಮಂಜೇಶ್ವರ : ಮಂಜೇಶ್ವರ ಠಾಣಾ ವ್ಯಾಪ್ತಿಯ ಮೊರತ್ತಣೆಯಲ್ಲಿನ ಸೆಲೂನೊಂದರ ಮಾಲಕನೋರ್ವನ ಮೊಬೈಲ್ ಕಳವುಗೈದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಮಂಜೇಶ್ವರ ಠಾಣೆ ಸಬ್ ಇನ್ಸ್‌ಪೆಕ್ಟರ್ ಪ್ರಮೋದ್ ನೇತೃತ್ವದ ಪೋಲಿಸರು ಬಂಧಿಸಿದ್ದಾರೆ. ಬಂಧಿತರನ್ನು ವ್ರೆರತ್ತಣೆ ಸಮೀಪದ ಗಾಂಧೀ ನಗರದ ವಿವೇಕ್ ವೇಗಸ್(19) , ಕಜೆಕೋಡಿಯ ಮುಹಮ್ಮದ್ ಅಸ್ಕರ್ (19) , ವ್ರೆರತ್ತಣೆಯ ಅಫ್ರೀದಿ(21) ಎಂದು ಗುರುತಿಸಲಾಗಿದೆ. ಶುಕ್ರವಾರ ಮಧ್ಯಾಹ್ನ 12.500 ರೂ ಬೆಲೆ ಬಾಳುವ ಮೊರತ್ತಣೆಯಲ್ಲಿ ಕಾರ್ಯಾಚರಿಸುವ ಸೆಲೂನ್ ಒಂದರ ಮಾಲಕ ಉತ್ತರ ಪ್ರದೇಶ ಮೂಲ ನಿವಾಸಿ ರಾಹಿಲ್ ಎಂಬಾತನ ಮೊಬೈಲನ್ನು ಕಳವು ಮಾಡಲಾಗಿತ್ತು. ಸೈಬರ್ ಸೆಲ್ ನ ಸಹಾಯದೊಂದಿಗೆ ಕಳವುಗೈದ ಮೊಬೈಲನ್ನು ಮಂಗಳೂರಿನ ಮೊಬೈಲ್ ಅಂಗಡಿಯೊಂದರಿಂದ ಪತ್ತೆ ಹಚ್ಚಲಾಗಿತ್ತು. ಬಂಧಿತ ಮೂವರು ಸೇರಿ 7.500 ರೂ ಗೆ ಮೊಬೈಲನ್ನು ಮಾರಾಟ ಮಾಡಿರುವುದಾಗಿ ಪೋಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
Next Story





