Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಂಗಳೂರು; ರಾಜ್ಯದ ಅತೀ ಎತ್ತರದ ವಸತಿ...

ಮಂಗಳೂರು; ರಾಜ್ಯದ ಅತೀ ಎತ್ತರದ ವಸತಿ ಸಮುಚ್ಚಯ ‘ಪ್ಲಾನೆಟ್ ಎಸ್‌ಕೆಎಸ್’ ಮಾರ್ಚ್ 12ಕ್ಕೆ ಉದ್ಘಾಟನೆ

ವಾರ್ತಾಭಾರತಿವಾರ್ತಾಭಾರತಿ8 March 2016 9:33 PM IST
share
ಮಂಗಳೂರು; ರಾಜ್ಯದ ಅತೀ ಎತ್ತರದ ವಸತಿ ಸಮುಚ್ಚಯ ‘ಪ್ಲಾನೆಟ್ ಎಸ್‌ಕೆಎಸ್’ ಮಾರ್ಚ್ 12ಕ್ಕೆ ಉದ್ಘಾಟನೆ

ಮಂಗಳೂರು, ಮಾ.8: ರಾಜ್ಯದಲ್ಲಿಯೇ ಅತೀ ಎತ್ತರದ ವಸತಿ ಸಮುಚ್ಚಯ ‘ಪ್ಲಾನೆಟ್ ಎಸ್‌ಕೆಎಸ್’ನ ಕಾಮಗಾರಿ ಪೂರ್ಣಗೊಂಡಿದ್ದು, ಮಾರ್ಚ್ 12ರಂದು ಉದ್ಘಾಟನೆಯಾಗಲಿದೆ. ಸದ್ಯ ನಿರ್ಮಾಣ ಪೂರ್ಣಗೊಂಡ ರಾಜ್ಯದ ಅತಿ ಎತ್ತರದ ವಸತಿ ಸಮುಚ್ಚಯ ಕಟ್ಟಡ ಎಂಬ ಕೀರ್ತಿಗೆ ಪ್ಲಾನೆಟ್ ಎಸ್‌ಕೆಎಸ್ ಪಾತ್ರವಾಗಿದೆ.

2010ರ ಡಿಸೆಂಬರ್ 15ರಂದು ಪ್ಲಾನೆಟ್ ಎಸ್‌ಕೆಎಸ್ ಕಟ್ಟಡದ ಕಾಮಗಾರಿ ಆರಂಭಗೊಂಡಿದ್ದು, 4.55 ಎಕರೆ ವಿಶಾಲವಾದ ಪ್ರದೇಶದಲ್ಲಿ 9,20,000 ಚದರ ಅಡಿ ವಿಸ್ತೀರ್ಣದ ಕಟ್ಟಡ ಇದೀಗ ಪೂರ್ಣಗೊಂಡಿದೆ.

‘ದಿ ಅವಶ್ಯ ಗ್ರೂಪ್ ’ ನ ಎಸ್‌ಕೆಎಸ್ ನೆಟ್‌ಗೇಟ್ ಎಲ್‌ಎಲ್‌ಪಿಯ ಈ ಯೋಜನೆಗೆ ಪ್ರತಿಷ್ಠಿತ ಲಾರ್ಸೆನ್ ಆ್ಯಂಡ್ ಟುಬ್ರೋ ಲಿಮಿಟೆಡ್ ಗುತ್ತಿಗೆದಾರರು. ಸನತ್ ಕುಮಾರ್ ಶೆಟ್ಟಿ ಅವರು ಇದರ ಆರ್ಕಿಟೆಕ್ಟ್. ಒಂದು ಮಹಡಿಯಿಂದ ಮತ್ತೊಂದು ಮಹಡಿಯ ಎತ್ತರ 3.2 ಮೀಟರ್‌ಗಳಾಗಿದ್ದು, ಈ ಕಟ್ಟಡದಲ್ಲಿ 7 ವಿಶೇಷ ಮಿಟ್ಸುಬಿಶಿ ಲಿಫ್ಟ್‌ಗಳಿವೆ. ವೈದ್ಯಕೀಯ ತುರ್ತು ಸಂದರ್ಭಗಳಿಗೆ ಒಂದು ವಿಶೇಷ ಲಿಫ್ಟ್ ಇದೆ. 100 ಶೇ. ಜನರೇಟರ್ ಬ್ಯಾಕ್‌ಅಪ್ ಇದೆ. ಎಲ್ಲ ಕಿಟಕಿಗಳಿಗೆ ವಿಶೇಷ ವಿನ್ಯಾಸದ ಅಲ್ಯುಮಿನಿಯಮ್ ಅಚ್ಚುಗಳಿದ್ದು, ಟಫನ್ಡ್ ಗ್ಲಾಸುಗಳನ್ನು ಹಾಕಲಾಗಿದೆ. ಬಾಲ್ಕನಿಯ ರೇಲಿಂಗ್‌ಗೂ ಕಠಿಣವಾದ ಮತ್ತು ಲ್ಯಾಮಿನೇಶನ್‌ನಿಂದ ಕೂಡಿದ ಗಾಜನ್ನು ಅಳವಡಿಸಲಾಗಿದೆ.

ಭದ್ರತೆ

 ಕಟ್ಟಡದ ಭದ್ರತೆಗಾಗಿ 100 ಸಿಸಿಟಿವಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ತಪಾಸಣಾ ಮತ್ತು ಮಾಹಿತಿ ಸಂಗ್ರಹ ವ್ಯವಸ್ಥೆ, ಸ್ವಯಂಚಾಲಿತ ಪ್ರವೇಶ ನಿಯಂತ್ರಣ ವ್ಯವಸ್ಥೆ, ಬಯೊಮೆಟ್ರಿಕ್ ಲಾಕ್ ಮೊದಲಾದ ಅತ್ಯಾಧುನಿಕ ಸುರಕ್ಷಾ ವ್ಯವಸ್ಥೆಗಳನ್ನು ಇಲ್ಲಿ ಅಳವಡಿಸಲಾಗಿದೆ.

ಪರಿಸರ ಸಹ್ಯ ಮತ್ತು ನವೀಕರಿಸಬಹುದಾದ ಇಂಧನ ವ್ಯವಸ್ಥೆ

  ಪ್ಲಾನೆಟ್ ಎಸ್‌ಕೆಎಸ್ ಕಟ್ಟಡದ ಆಂತರಿಕ ಮತ್ತು ಬಾಹ್ಯ ಪ್ರದೇಶಗಳು ಸೌರ ಮತ್ತು ಪವನ ಶಕ್ತಿ ಚಾಲಿತ ವ್ಯವಸ್ಥೆಯನ್ನು ಹೊಂದಿದ್ದು, ಸೋಲಾರ್ ವಾಟರ್ ಹೀಟರ್‌ಗಳು ಮತ್ತು ತಾಪಮಾನ ನಿಯಂತ್ರಣಕ್ಕಾಗಿ ಆ್ಯಕ್ಟಿವ್ ಸಿಸ್ಟಮ್ ಹೀಟ್ ಪಂಪ್ ವ್ಯವಸ್ಥೆಯನ್ನೂ ಒದಗಿಸಲಾಗಿದೆ. ಎಲ್‌ಇಡಿ ಲೈಟ್ ಅಳವಡಿಸಲಾಗಿದ್ದು, ಅಪಾರ್ಟ್‌ಮೆಂಟ್‌ಗಳೆಲ್ಲವೂ ಗರಿಷ್ಠ ಪ್ರಾಕೃತಿಕ ಗಾಳಿ ಬೆಳಕಿನಿಂದ ಕೂಡಿರುವುದರಿಂದ ಕಡಿಮೆ ವಿದ್ಯುತ್ ಬಳಕೆಗೆ ಒತ್ತು ನೀಡಲಾಗಿದೆ. ಕಲುಷಿತ ನೀರಿನ ಮರುಬಳಕೆ, ಕೊಳಚೆ ನೀರು ಸಂಸ್ಕರಣಾ ಘಟಕ, ಸ್ವಯಂಚಾಲಿತ ಸಾವಯವ ತ್ಯಾಜ್ಯ ಪರಿವರ್ತಕ, ಮಳೆ ನೀರು ಕೊಯ್ಲು, ಸುಸ್ಥಿರ ಹಸಿರು ವಿನ್ಯಾಸ, ಹಣ್ಣಿನ ತೋಟ, ಅಡಿಕೆ ತೋಟ, 20,000 ಚದರ ಅಡಿ ಲಾನ್ - ಇತ್ಯಾದಿಗಳಿಂದ ಸುತ್ತಮುತ್ತಲು ಹಸಿರು ಕಂಗೊಳಿಸುತ್ತದೆ.

ಸಿನೆಮಾ ಥಿಯೇಟರ್, ಜಾಗಿಂಗ್- ಸ್ಕೇಟಿಂಗ್ ಟ್ರಾಕ್!

ಪ್ಲಡ್‌ಲಿಟ್ ಟೆನ್ನಿಸ್ ಕೋರ್ಟ್, ಇಂಡೋರ್ ಬ್ಯಾಡ್‌ಮಿಂಟನ್ ಕೋರ್ಟ್, ಸ್ಕ್ವಾಶ್ ಕೋರ್ಟ್, ಬಾಸ್ಕೆಟ್‌ಬಾಲ್ ರಿಂಕ್, ಬಿಲಿಯರ್ಡ್, ಕೇರಂ, ಟೇಬಲ್ ಟೆನ್ನಿಸ್, ಸ್ಪಾ, ಯೋಗಾ ರೂಂ, ಜಿಮ್‌ನಿಂದ ಕೂಡಿದ ಕ್ಲಬ್ ಹೌಸ್ ಪ್ಲಾನೆಟ್ ಎಸ್‌ಕೆಎಸ್‌ನ ವಿಶೇಷತೆಯಾಗಿದೆ.

ದೊಡ್ಡವರು ಮತ್ತು ಮಕ್ಕಳಿಗಾಗಿ ಗಾಲ್ಫ್ ಸಿಮ್ಯುಲೇಟರ್ ಮತ್ತು ಸ್ವಿಮ್ಮಿಂಗ್ ಪೂಲ್‌ಗಳು, ಮೀಟಿಂಗ್ ಹಾಲ್, ಸಿನೆಮಾ ಥಿಯೇಟರ್, ಜಾಗಿಂಗ್ ಮತ್ತು ಸ್ಕೇಟಿಂಗ್ ಟ್ರಾಕ್, ಸೂಪರ್ ಮಾರ್ಕೆಟ್, ಕಾಫಿ ಶಾಪ್, ಔಟ್‌ಡೋರ್ ಲ್ಯಾಂಡ್‌ಸ್ಕೇಪ್ ಟೆರೆಸ್ ಏರಿಯಾವನ್ನು ಈ ಕಟ್ಟಡ ಹೊಂದಿದೆ. ಪ್ಲಾನೆಟ್ ಎಸ್‌ಕೆಎಸ್ ವಿಶೇಷತೆಗಳು

* ಕಟ್ಟಡದ ಎತ್ತರ 125 ಮೀಟರ್ * 40 ಮಹಡಿಗಳು (3 ಬೇಸ್‌ಮೆಂಟ್‌ಗಳು, ಗ್ರೌಂಡ್ ಫ್ಲೋರ್ ಮತ್ತು 36 ಮಹಡಿಗಳು)

* 171 ಅಪಾರ್ಟ್‌ಮೆಂಟ್‌ಗಳು

* 430 ಕಾರುಗಳಿಗೆ ಪಾರ್ಕಿಂಗ್ ಸೌಲಭ್ಯ

* 3 ಬೆಡ್‌ರೂಂಗಳ (3300 ಚದರ ಅಡಿ ವಿಸ್ತೀರ್ಣ) 126 ಅಪಾರ್ಟ್‌ಮೆಂಟ್‌ಗಳು (ನೆಲಮಹಡಿಯಿಂದ 20ನೆ ಮಹಡಿವರೆಗೆ)

* ನಾಲ್ಕು ಬೆಡ್ ರೂಂಗಳ (6600 ಚದರ ಅಡಿ ವಿಸ್ತೀರ್ಣ) 45 ಅಪಾರ್ಟ್‌ಮೆಂಟ್‌ಗಳು (21ನೆ ಮಹಡಿಯಿಂದ 36ನೆ ಮಹಡಿವರೆಗೆ)

ನಮ್ಮ ವಿನಮ್ರ ಪ್ರಯತ್ನ ‘ಪ್ಲಾನೆಟ್ ಎಸ್‌ಕೆಎಸ್’

 ‘‘ಯಾವುದು ಉತ್ತಮ ಎಂಬುದು ಅಭಿಪ್ರಾಯಕ್ಕೆ ಸಂಬಂಧಿಸಿದ್ದು. ಹಾಗಿದ್ದರೂ, ಇತರರಿಂದ ಗುರುತಿಸಲ್ಪಟ್ಟಾಗ, ಪ್ರಶಂಸಿಸಲ್ಪಟ್ಟಾಗ, ಸ್ವಾಗತಿಸಲ್ಪಟ್ಟಾಗ ಅದಕ್ಕೆ ವೌಲ್ಯ ಸಿಗುತ್ತದೆ. ಈ ಹಿನ್ನೆಲೆಯಲ್ಲಿ, ಅತ್ಯಂತ ಸಮರ್ಪಣಾ ಭಾವದೊಂದಿಗೆ ನಮ್ಮ ಜ್ಞಾನ, ಅನುಭವ, ಸಂಪನ್ಮೂಲ, ಕೌಶಲ್ಯಗಳು ಮತ್ತು ಕಲ್ಪನೆಯನ್ನು ಬಳ ಸಿಕೊಂಡು ಮಾಡಿದ ನಮ್ಮ ವಿನಮ್ರ ಪ್ರಯತ್ನವಾಗಿದೆ ‘ಪ್ಲಾನೆಟ್ ಎಸ್‌ಕೆಎಸ್’ . ಇದೊಂದು ಸುಖ-ಶಾಂತಿ ನೀಡುವ ಪುಟ್ಟ ಗೃಹವಾಗಲಿ ಎಂಬುದು ನಮ್ಮ ಪ್ರಾರ್ಥನೆ.

- ಶಶಿ ಕಿರಣ್ ಶೆಟ್ಟಿ, ಪ್ರಧಾನ ಪ್ರವರ್ತಕ

ಪ್ರಶಸ್ತಿಗಳ ಪ್ಲಾನೆಟ್ !

ಉದ್ಘಾಟನೆಯಾಗುವ ಮೊದಲೇ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪಾತ್ರವಾಗಿದೆ ಪ್ಲಾನೆಟ್ ಎಸ್‌ಕೆಎಸ್. 2011ರಲ್ಲಿ ಆರ್ಟಿಸ್ಟ್ಸ್ ಇನ್ ಕಾಂಕ್ರೀಟ್ ಅವಾರ್ಡ್ಸ್.2012 ರಲ್ಲಿ ಕ್ರೆಡೈ ಮೋಸ್ಟ್ ಎಮರ್ಜಿಂಗ್ ಡೆವಲಪರ್ಸ್ ಪ್ರಶಸ್ತಿ. 2014 ರಲ್ಲಿ ಬ್ರಿಟಿಶ್ ಸೇಫ್ಟಿ ಕೌನ್ಸಿಲ್‌ನಿಂದ ಇಂಟರ್‌ನ್ಯಾಶನಲ್ ಸೇಫ್ಟಿ ಅವಾರ್ಡ್. 2015 ರಲ್ಲಿ ಸಿಎನ್‌ಬಿಸಿ ಆವಾಝ್‌ನಿಂದ ಬೆಸ್ಟ್ ರೆಸಿಡೆನ್ಶಿಯನಲ್ ಪ್ರಾಜೆಕ್ಟ್ ಇನ್ ಟೈರ್ 2 ಸಿಟಿ ಅಂಡರ್ ಅಲ್ಟ್ರಾ ಲಕ್ಸುರಿ ಸೆಗ್ಮೆಂಟ್ ಪ್ರಶಸ್ತಿ. 2016 ರಲ್ಲಿ ಎಸಿಇಎಫ್‌ನಿಂದ ಬೆಸ್ಟ್ ಪ್ರಾಜೆಕ್ಟ್ ಪ್ರಶಸ್ತಿ ಎಸ್‌ಕೆಎಸ್‌ಗೆ ಬಂದಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X