ವಿಟ್ಲ : ವಲಿಯುಲ್ಲಾಹಿ ದರ್ಗಾ ಶರೀಫ್ ಕಂಬಳಬೆಟ್ಟು ಮಖಾಂ ಉರೂಸ್

ವಿಟ್ಲ : ಕಂಬಳಬೆಟ್ಟು ಮೊಹಿಯುದ್ದೀನ್ ಮತ್ತು ಇಬ್ರಾಹಿಂ ಜಮಾಅತ್ ಕಮಿಟಿ ಇದರ ಆಶ್ರಯದಲ್ಲಿ ವಲಿಯುಲ್ಲಾಹಿ ದರ್ಗಾ ಶರೀಫ್ ಕಂಬಳಬೆಟ್ಟು ಮಖಾಂ ಉರೂಸ್ ಹಾಗೂ ಸೌಹಾರ್ದ ಸಂಗವು ಭಾನುವಾರ ರಾತ್ರಿ ನಡೆಯಿತು.
ಸಯ್ಯಿದ್ ತ್ವಾಹಾ ತಂಙಳ್ ಕುಂಬೋಳ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮವನ್ನು ಜಿ.ಪಂ. ಸದಸ್ಯ ಎಂ.ಎಸ್. ಮುಹಮ್ಮದ್ ಉದ್ಘಾಟಿಸಿದರು. ಹಂಝ ಮಿಸ್ಬಾಹಿ ಓಟಪದವು-ಕೇರಳ ಮುಖ್ಯ ಭಾಷಣಗೈದರು. ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ನಗರಾಭಿವೃದ್ದಿ ಸಚಿವ ವಿನಯ ಕುಮಾರ್ ಸೊರಕೆ, ಜಿಲ್ಲಾ ವಕ್ಫ್ ಬೋರ್ಡ್ ಚೆಯರ್‌ಮೆನ್ ಹಾಜಿ ಎಸ್.ಎಂ. ರಶೀದ್, ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಡಿ.ಕೆ. ಉಮ್ಮರ್ ಸಖಾಫಿ, ಇಂಜಿನಿಯರ್ ಇಮ್ತಿಯಾರ್ ಪಾಷಾ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸುಲೈಮಾನ್ ಸಖಾಫಿ ಪಾಟ್ರಕೋಡಿ, ಅಝೀರ್ ಸಅದಿ ವಿಟ್ಲ, ರಫೀಕ್ ಸಅದಿ ಮಿತ್ತೂರು, ಹಾರಿಸ್ ಮದನಿ ಪಾಟ್ರಕೋಡಿ, ಹನೀಫ್ ಸಖಾಫಿ ಒಕ್ಕೆತ್ತೂರು, ಮಸೀದಿ ಅಧ್ಯಕ್ಷ ಹಾಜಿ ವಿ.ಕೆ. ಅಬ್ದುಲ್ ಖಾದರ್ ಬದ್ರಿಯಾ, ಉಪಾಧ್ಯಕ್ಷರುಗಳಾದ ಮೊದು ಹಾಜಿ ಕಂಬಳಬೆಟ್ಟು, ವಿ.ಕೆ. ಅಬ್ದುಲ್ ಖಾದರ್ ಸುನ್ನಿ, ಪದಾಧಿಕಾರಿಗಳಾದ ಇಸ್ಮಾಯಿಲ್ ಕಾರ್ಯಾಡಿ, ಎಸ್.ಕೆ. ಮುಹಮ್ಮದ್ ಹಾಗೂ ನಾಸಿರ್ ಸಾದಾತ್ ನಗರ, ಅಬ್ದುಲ್ ಖಾದರ್ ನೆಕ್ಕರೆ ಮೊದಲಾದವರು ವೇದಿಕೆಯಲ್ಲಿದ್ದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಮೌಲೂದ್ ಪಾರಾಯಣ ಹಾಗೂ ಕೊನೆಯಲ್ಲಿ ಅನ್ನದಾನ ನಡೆಯಿತು.





