Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕಿರಂ ನಿಜವಾದ ಶರಣ: ಡಾ.ನಟರಾಜ್ ಹುಳಿಯಾರ್

ಕಿರಂ ನಿಜವಾದ ಶರಣ: ಡಾ.ನಟರಾಜ್ ಹುಳಿಯಾರ್

ಕಿರಂ ನೆನಪಿನ ಕಾವ್ಯ ಶಿವರಾತ್ರಿ

ವಾರ್ತಾಭಾರತಿವಾರ್ತಾಭಾರತಿ8 March 2016 11:16 PM IST
share
ಕಿರಂ ನಿಜವಾದ ಶರಣ: ಡಾ.ನಟರಾಜ್ ಹುಳಿಯಾರ್

ಬೆಂಗಳೂರು, ಮಾ. 8: ಯಾರಿಗೆ ಬೇಕಾದರೂ ಜ್ಞಾನವನ್ನು ಹಂಚಬಹುದು, ಯಾರು ಬೇಕಾದರೂ ಜ್ಞಾನವನ್ನು ಪಡೆಯಬಹುದು ಎಂಬ ನಂಬಿಕೆಯ ಕಿರಂ ನಾಗರಾಜ್ ನಿಜವಾದ ಶರಣ. ಅವರು ಕಲಿತ, ಹಂಚಿದ, ಆಲೋಚನೆಯ ಕ್ರಮವೇ ಹೇಳುವ ಕ್ರಮವಾಗಿತ್ತು ಎಂದು ಚಿಂತಕ ಡಾ.ನಟರಾಜ್ ಹುಳಿಯಾರ್ ಅಭಿಪ್ರಾಯಿಸಿದ್ದಾರೆ. ಕಾವ್ಯ ಮಂಡಲ ಮತ್ತು ಪ್ರೆಸ್‌ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಕಿರಂ ನೆನಪಿನ ಕಾವ್ಯ ಶಿವರಾತ್ರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು, ಕಿರಂ ನಾಗರಾಜರು ಹೆಚ್ಚಿಗೆ ಬರೆಯಲಿಲ್ಲ ಎಂಬುದು ಮುಖ್ಯವಲ್ಲ. ಅವರು ಆಲೋಚಿಸುವ ಕ್ರಮವೇ ಹೇಳುವ ಕ್ರಮವಾಗಿತ್ತು. ಅವರ ಬಳಿ ಬಂದವರಿಗೆ ಇವನಾರವ ಇವನಾರವ ಎಂಬುದ ಎಣಿಸದೆ ಇವ ನಮ್ಮವ ಇವ ನಮ್ಮವ ಎಂದು ಬಂದವರೆಲ್ಲರಿಗೂ ಕಲಿತ ಜ್ಞಾನವನ್ನು ಹಂಚಿದ ನಿಜವಾದ ಶರಣ ಎಂದು ಹೇಳಿದರು. ಸಾಮಾನ್ಯವಾಗಿ ನಿರ್ದೇಶಕರಿಗೆ, ಲೇಖಕರಿಗೆ, ಪತ್ರಕರ್ತರಿಗೆ, ನಾಟಕಕಾರರಿಗೆ ತಮ್ಮದೇ ಆದ ಒಂದು ಐಡಿಯಾ ಇರುತ್ತದೆ. ಅಲ್ಲಿ ಸ್ವಾರ್ಥವಿರುತ್ತದೆ. ಅವರಾರು ತಮ್ಮ ಐಡಿಯಾವನ್ನ್ನು ಯಾರಿಗೂ ಹೇಳಿಕೊಡುವುದಿಲ್ಲ. ಹಾಗೆಯೇ ಎಲ್ಲರನ್ನೂ ಎಲ್ಲರೂ ಸಹಿಸಿಕೊಳ್ಳುವುದಿಲ್ಲ. ಆದರೆ ಕಿರಂ ಮಾತ್ರ ತಮ್ಮ ಜ್ಞಾನವನ್ನು ಹಲವರಿಗೆ ಹಂಚಿದ ಸಣ್ಣತನಗಳಿಲ್ಲದ ಸ್ವಾರ್ಥವಿಲ್ಲದ ಅಪ್ಪಟ ಮನುಷ್ಯ. ತಮ್ಮ ತಿಳಿವಿಗೆ ಬಂದದ್ದನ್ನು ಬಂದವರಿಗೆಲ್ಲ ನೀಡಿದ ನಿಜವಾದ ಅರ್ಥದ ಜಂಗಮ ಎಂದರು.
ಒಂದು ಸಲ ಹೀಗೆಯೇ ಅವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಾಗ, ಕವಿ ನಿಸಾರ್ ಅಹ್ಮದ್ ಅವರ ಕವನದ ಸಾಲುಗಳನ್ನು ಚಿತ್ರನಿರ್ದೇಶಕನೊಬ್ಬ ಕದ್ದು, ಕುರಿಗಳು ಸಾರ್ ಕುರಿಗಳು ಎಂಬ ಚಿತ್ರ ಮಾಡಿದ್ದ. ಆ ಪೋಸ್ಟರ್ ನೋಡಿದ ಕಿರಂ, ಯಾವನ್ರಿ ಅವನು ಕವಿ ರೂಪಕಗಳನ್ನು ಹಾಳು ಮಾಡುತ್ತಿದ್ದಾನೆ, ಒಂದು ರೂಪಕವನ್ನು ಸೃಷ್ಟಿಸಲು ಯೋಗ್ಯತೆ ಇಲ್ಲದಿದ್ದರೆ ಕವಿಯ ರೂಪಕವನ್ನು ಕದ್ದು ವಿಕೃತಗೊಳಿಸಲು ಅವರಿಗೇನ್ರಿ ಹಕ್ಕಿದೆ ಎಂದು ಸಿಟ್ಟಾಗಿದ್ದರು. ಅದೇ ರೀತಿ ಜಿ.ಎಸ್.ಶಿವರುದ್ರಪ್ಪನವರ ಎದೆ ತುಂಬಿ ಹಾಡುವೆನು ಎಂಬ ಕವನವನ್ನು ಕದ್ದು ಎದೆ ತುಂಬಿ ಹಾಡಿದೆನು ಎಂದು ಯಾವುದೋ ಒಂದು ಟಿವಿ ಕಾರ್ಯಕ್ರಮವನ್ನಾಗಿಸಿದಾಗಲೂ ಇದೇ ರೀತಿ ಸಿಟ್ಟಾಗಿದ್ದರು. ಈ ರೀತಿಯಾಗಿ ಕಿರಂ ಸಾಹಿತ್ಯ ಮತ್ತು ಕವಿಯ ರೂಪಕಗಳ ರಕ್ಷಣೆಯ ಕೆಲಸವನ್ನು ತಮ್ಮ ಜೀವನದುದ್ದಕ್ಕೂ ಮಾಡಿದರು ಎಂದರು.
 ಪ್ರೆಸ್ ಕ್ಲಬ್‌ನ ಲಂಕೇಶ್ ರಂಗಮಂಚದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಿರಂಗೆ ಇಷ್ಟವಾಗುವ ಮಂಟೇಸ್ವಾಮಿ ಮಾದಪ್ಪನ ಮಹಾಕಾವ್ಯಗಳು ಮತ್ತು ಶರೀಫರ ಗೀತೆಗಳನ್ನು ಅಹೋರಾತ್ರಿ ಹಾಡಿ ರಂಜಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಯಮಿ ಉದಯ್ ಗರುಡಾಚಾರ್, ಕವಿ ಸಿದ್ದಲಿಂಗಯ್ಯ, ಕಾವ್ಯ ಮಂಡಲದ ಎಲ್.ಎನ್.ಮುಕುಂದರಾಜ್, ಟಿ.ವೆಂಕಟೇಶಮೂರ್ತಿ, ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ಉಪನ್ಯಾಸಕ ಜಯಶಂಕರ್ ಹಲಗೂರು ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X