Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ರಸ್ತೆ ಅಪಘಾತ: ವಿಸ್ಮತಿಗೊಳಗಾದ ಸ್ಮತಿ

ರಸ್ತೆ ಅಪಘಾತ: ವಿಸ್ಮತಿಗೊಳಗಾದ ಸ್ಮತಿ

ವಾರ್ತಾಭಾರತಿವಾರ್ತಾಭಾರತಿ8 March 2016 11:21 PM IST
share

ಅಪಘಾತಗಳು ಉದ್ದೇಶಪೂರ್ವಕವಾಗಿ ಸಂಭವಿಸುವುದಿಲ್ಲ. ವೇಗವಾದ ಚಾಲನೆ, ಕುಡಿದು ವಾಹನ ಚಾಲನೆ, ಚಾಲಕನಿಗೆ ತರಬೇತಿಯ ಕೊರತೆ ಇವೆಲ್ಲವುಗಳಿಂದ ನಡೆಯುವ ಅಪಘಾತವನ್ನು ಉದ್ದೇಶಪೂರ್ವಕ ಎಂದು ಕರೆಯಬಹುದಾಗಿದ್ದು, ಅಂತಿಮವಾಗಿ ಅಂತಹದೊಂದು ದುರಂತವನ್ನು ಯಾರೂ ನೇರವಾಗಿ ಉದ್ದೇಶಿಸಿರುವುದಿಲ್ಲ. ಅನೇಕ ಸಂದರ್ಭದಲ್ಲಿ ಆತುರ, ಅವಿವೇಕ ಅಪಘಾತಗಳಿಗೆ ಕಾರಣವಾಗಬಹುದು. ಆದರೆ ಒಂದು ಅಪಘಾತ ಸಂಭವಿಸಿದ ಬಳಿಕವಾದರೂ, ಅದಕ್ಕೆ ಕಾರಣನಾದವನು ಎಚ್ಚೆತ್ತುಕೊಳ್ಳಬೇಕಾಗುತ್ತದೆ. ಸಾಧಾರಣವಾಗಿ ಒಂದು ಅಪಘಾತ ಸಂಭವಿಸಿದ ಮರುಕ್ಷಣ, ನಾವು ಯೋಚಿಸುವುದು ಕಾನೂನಿಂದ ನುಣುಚಿಕೊಳ್ಳುವುದು ಹೇಗೆ? ಎಂದು. ಈ ಕಾರಣದಿಂದಲೇ ಅಪಘಾತದ ಬಳಿಕದ ಅನಾಹುತಗಳಿಗೂ ಅವರು ನಿಮಿತ್ತವಾಗಿ ಬಿಡುತ್ತಾರೆ. ರಸ್ತೆ ಅಪಘಾತದಿಂದ ಪಾದಚಾರಿ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದೇ ಇಟ್ಟುಕೊಳ್ಳೋಣ. ಕನಿಷ್ಠ ಅವನನ್ನು ರಕ್ಷಿಸುವುದು, ಆಸ್ಪತ್ರೆಗೆ ಸೇರಿಸುವುದು ಚಾಲಕನ ಹೊಣೆಗಾರಿಕೆ. ಆದರೆ ಆತ ಕಾನೂನಿಗೆ ಹೆದರಿ ಅಲ್ಲಿಂದ ಪಲಾಯನ ಮಾಡಲು ಯತ್ನಿಸುತ್ತಾನೆ. ಇದರಿಂದಾಗಿ ಗಾಯಾಳು ಸತ್ತೇ ಹೋಗಬೇಕಾದ ಸನ್ನಿವೇಶ ನಿರ್ಮಾಣವಾಗುತ್ತದೆ. ಇದು ಒಂದು ತಪ್ಪಿನಿಂದ ಪಾರಾಗಲು ಆತ ಎಸಗುವ ಇನ್ನೊಂದು ದೊಡ್ಡ ತಪ್ಪು. ಇನ್ನು ಘಟನೆಗೆ ಸಾಕ್ಷಿಯಾಗುವವರೂ ಕೂಡ, ತಮಗೊಂದು ಹೊಣೆಗಾರಿಕೆ ಇದೆ ಎನ್ನುವುದನ್ನು ಮರೆತೇ ಬಿಡುತ್ತಾರೆ. ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿದರೆ ಅಥವಾ ಘಟನೆಯ ಕುರಿತಂತೆ ಸಾಕ್ಷಿ ಹೇಳಿದ್ದೇ ಆದರೆ ಅನಗತ್ಯ ತೊಂದರೆಗಳನ್ನು ಆಹ್ವಾನಿಸಿಕೊಂಡಂತೆ ಎಂದು ಭಾವಿಸುವವರೇ ಅಧಿಕ. ಅವರ ನಿರ್ಲಕ್ಷ ಒಬ್ಬನ ಸಾವಿಗೆ ಕಾರಣವಾಗಬಹುದು. ಇತ್ತೀಚೆಗೆ ಸುಪ್ರೀಂಕೋರ್ಟ್ ಕೂಡ ಈ ಕುರಿತು ಆತಂಕ ವ್ಯಕ್ತಪಡಿಸಿತ್ತು. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಸಂದರ್ಭದಲ್ಲಿರುವ ಕಾನೂನು ತೊಡಕುಗಳನ್ನು ನಿವಾರಿಸುವ ಮಾತುಗಳನ್ನೂ ಹೇಳಿತ್ತು.
  ಆದರೆ ದುರದೃಷ್ಟಕ್ಕೆ ಅತ್ಯುನ್ನತ ಸ್ಥಾನದಲ್ಲಿರುವವರೇ ಅಪಘಾತವೆಸಗಿ ತಾವು ಕಾನೂನಿಗಿಂತ ಮಿಗಿಲು ಎಂದು ಭಾವಿಸಿದರೆ? ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ಅಂತಹದೊಂದು ಗಂಭೀರ ಆರೋಪವನ್ನು ಎದುರಿಸುತ್ತಿದ್ದಾರೆ. ‘‘ಹೊಸದಿಲ್ಲಿಯ ಯಮುನಾ ಎಕ್ಸ್‌ಪ್ರೆಸ್ ವೇ ಹೆದ್ದಾರಿಯಲ್ಲಿ ಸಚಿವೆಯ ಬೆಂಗಾವಲು ವಾಹನ ಢಿಕ್ಕಿ ಹೊಡೆದು ದಾರುಣವಾಗಿ ಗಾಯಗೊಂಡಿದ್ದ ತಮ್ಮ ತಂದೆಯ ನೆರವಿಗೆ ಆಕೆ ಧಾವಿಸಲಿಲ್ಲ, ಇದರ ಪರಿಣಾಮವಾಗಿ ತಂದೆಗೆ ಸೂಕ್ತ ವೈದ್ಯಕೀಯ ನೆರವು ದೊರೆಯದೆ ಅವರು ಸಾವನ್ನಪ್ಪಬೇಕಾಯಿತು’’ ಎಂದು ಮೃತನ ಮಕ್ಕಳಿಬ್ಬರು ಆರೋಪಿಸಿದ್ದಾರೆ. ‘‘ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದವರನ್ನು ಆಸ್ಪತ್ರೆಗೆ ಸಾಗಿಸುವುದಕ್ಕೆ ನೆರವಾಗಲು ಯತ್ನಿಸಿದ್ದೆ. ಆದರೆ ಅಪಘಾತದಿಂದಾಗಿ ಎಕ್ಸ್‌ಪ್ರೆಸ್‌ವೇನಲ್ಲಿ ವಾಹನಗಳು ಕಿಕ್ಕಿರಿದು ನಿಂತಿದ್ದವು. ದುರದೃಷ್ಟವಶಾತ್ ನನ್ನ ಕಾರು ಹಾಗೂ ಮುಂದಿದ್ದ ಪೊಲೀಸ್ ಕಾರು ಕೂಡ ಅಪಘಾತಕ್ಕೀಡಾಯಿತು...’’ ಹೀಗೆಂದು ಟ್ವೀಟಿಸಿ ಕೇಂದ್ರ ಸಚಿವೆ ಸ್ಮತಿ ಇರಾನಿ ಜಾರಿಕೊಳ್ಳಲು ಹವಣಿಸಿದ್ದಾರೆ. ಮೊತ್ತ ಮೊದಲಾಗಿ ಅವರ ಬೆಂಗಾವಲು ಕಾರು ಅಮಾಯಕನಿಗೆ ಢಿಕ್ಕಿ ಹೊಡೆದಿದೆ. ಆತ ಗಂಭೀರ ಸ್ಥಿತಿಯಲ್ಲಿರುವಾಗ, ಅದೇ ಕಾರಿನಲ್ಲಿ ಅಥವಾ ಬೇರೆ ಕಾರಿನಲ್ಲಾದರೂ ಆತನನ್ನು ಆಸ್ಪತ್ರೆಗೆ ಸಾಗಿಸುವುದು ಸಚಿವೆಯಾಗಿ ಅವರ ಕರ್ತವ್ಯವಾಗಿತ್ತು. ಆದರೆ ಅವರು ತನಗೂ ಘಟನೆಗೂ ಸಂಬಂಧವೇ ಇಲ್ಲ ಎಂಬಂತೆ ಮುಂದುವರಿದಿದ್ದಾರೆ. ಪರಿಣಾಮವಾಗಿ ಸಂತ್ರಸ್ತ ಮೃತಪಟ್ಟಿದ್ದಾನೆ. ಘಟನೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿರುವುದನ್ನು ಅರತಿ ಸಚಿವೆ, ‘ಆತನಿಗಾಗಿ ನಾನು ಪ್ರಾರ್ಥಿಸುವೆ’ ಎಂದು ಟ್ವಿಟರ್‌ನಲ್ಲಿ ಹೇಳಿದ್ದಾರೆ. ಈ ಮೂಲಕ, ಅಪಘಾತದ ಸಂದರ್ಭದಲ್ಲಿ ಹೇಗೆ ವರ್ತಿಸಬಾರದು ಎನ್ನುವುದಕ್ಕೆ ಅವರು ದೇಶಕ್ಕೆ ಮಾದರಿಯಾಗಿದ್ದಾರೆ. ಮಾತು ಮಾತಿಗೆ ಸಂಸ್ಕೃತಿ, ದೇಶಭಕ್ತಿ ಇತ್ಯಾದಿಗಳನ್ನು ಗುತ್ತಿಗೆ ತೆಗೆದುಕೊಂಡವರಂತೆ ಮಾತನಾಡುವ ಸಚಿವೆಗೆ, ಒಬ್ಬ ಮನುಷ್ಯ ಸಾವು ಬದುಕಿನ ನಡುವೆ ಒದ್ದಾಡುತ್ತಿರುವಾಗ ತನ್ನ ಹೊಣೆಗಾರಿಕೆ ಏನು ಎನ್ನುವುದ ಅರಿವಿಲ್ಲದಂತೆ ವರ್ತಿಸಿದ್ದಾರೆ.ಹಿಂದೆ ಹೇಮಾಮಾಲಿನಿ ಕೂಡ ಇದೇ ರೀತಿ ವರ್ತಿಸಿ, ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು. ಕನಿಷ್ಠ ಕಾರು ನಿಲ್ಲಿಸಿ, ಸಂತ್ರಸ್ತರ ನೆರವಿಗೆ ಧಾವಿಸುವುದಕ್ಕೂ ಹಿಂದೇಟು ಹಾಕಿದ ಈ ಮಾಜಿ ನಟಿ, ವಾಸ್ತವ ಬದುಕಿನಲ್ಲಿ ಖಳನಾಯಕಿಯಂತೆ ಕಾಣಿಸಿಕೊಂಡರು. ಆ ಬಳಿಕ, ತನ್ನ ತಪ್ಪನ್ನು ಸಮರ್ಥಿಸಿಕೊಳ್ಳಲು ಸಾವಿರ ಪ್ರಹಸನಗಳನ್ನು ಮಾಡಿದರು. ಸಿನೆಮಾ ನಟಿಯಾಗಿರುವವರು ಸಂವೇದನಾಶೀಲರಾಗಿರುತ್ತಾರೆಯೇ? ಅವರಿಗೆ ವಾಸ್ತವ ಬದುಕಿನ ನೋವು, ದುಮ್ಮಾನಗಳ ಅರಿವಿಲ್ಲವೇ? ಎನ್ನುವ ಪ್ರಶ್ನೆಯನ್ನು ಜನರು ಪದೇ ಪದೇ ಕೇಳುವಂತಾಗಿದೆ. ಸಲ್ಮಾನ್ ಖಾನ್ ಅವರು ಕೂಡ ಇಂತಹದೇ ಕೃತ್ಯಗಳನ್ನು ಎಸಗಿ ಕಟ್ಟ ಕಡೆಗೆ ಕಾನೂನಿಂದಲೂ ರಕ್ಷಣೆ ಪಡೆದರು. ಈ ಎಲ್ಲ ಘಟನೆಗಳು ಸಾಮಾನ್ಯ ಚಾಲಕರ ಮೇಲೆ, ಜನಸಾಮಾನ್ಯರ ಮೇಲೆ ಯಾವ ಪರಿಣಾಮಗಳನ್ನು ಬೀರುತ್ತದೆ ಎನ್ನುವ ಪ್ರಜ್ಞೆ ಈ ಗಣ್ಯರಿಗಿದೆಯೇ? ಹಾಗೆ ನೋಡಿದರೆ, ಈ ಮಟ್ಟಿಗೆ ಕರ್ನಾಟಕದ ಸಚಿವರೇ ಪರವಾಗಿಲ್ಲ. ಈ ಹಿಂದೆ, ರಾಜ್ಯದ ಸಚಿವ ಕಿಮ್ಮನೆ ರತ್ನಾಕರ್ ಅವರು, ತನ್ನೆದುರೇ ಅಪಘಾತಕ್ಕೊಳಗಾದ ಕಾರೊಂದನ್ನು ರಕ್ಷಿಸಲು ತಾವೇ ಮುಂದಾದರು. ಸಚಿವರ ಕಾರುಚಾಲಕ ಮತ್ತು ಇತರ ಸಿಬ್ಬಂದಿ, ಕೆರೆಗೆ ಉರುಳಿದ ಕಾರಿನಲ್ಲಿರುವ ಪ್ರಯಾಣಿಕರನ್ನು ರಕ್ಷಿಸಿ ಮಾಧ್ಯಮಗಳಲ್ಲಿ ಸುದ್ದಿಯಾದರು. ಜನರೂ ಕಿಮ್ಮನೆ ಅವರ ಕಾರ್ಯವನ್ನು ಈಗಲೂ ಸ್ಮರಿಸುತ್ತಿದ್ದಾರೆ. ಹಾಗೆಯೇ ಆರೋಗ್ಯ ಸಚಿವ ಯು. ಟಿ. ಖಾದರ್ ಕೂಡ ಇಂತಹ ಸಂದರ್ಭದಲ್ಲಿ ಮಾನವೀಯತೆಯನ್ನು ಮೆರೆಯಲು ಹಿಂದೆ ಬೀಳಲಿಲ್ಲ. ತಮ್ಮೆದುರೇ ಅಪಘಾತಕ್ಕೀಡಾದ ಬೈಕ್ ಸವಾರನನ್ನು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ಸೇರಿಸಿ ದೊಡ್ಡತನವನ್ನು ಮೆರೆದವರು ಯು. ಟಿ. ಖಾದರ್. ರಸ್ತೆ ಅಪಘಾತ ಆದ ಸಂದರ್ಭದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಹಲವು ಬಾರಿ ಖಾದರ್ ಸುದ್ದಿಯಾಗಿದ್ದರು. ಇದು ಇತರರಿಗೆ ಮಾದರಿಯಾದ ಸೇವೆಯಾಗಿದೆ.
ಬರೇ ಅಪಘಾತದಿಂದಷ್ಟೇ ಸಾವುಗಳು ಸಂಭವಿಸುವುದಿಲ್ಲ. ಅಪಘಾತ ನಡೆದಾಗ ಅದಕ್ಕೆ ಸಾಕ್ಷಿಯಾದವರು ಹೇಗೆ ಸ್ಪಂದಿಸುತ್ತಾರೆ, ಯಾವ ರೀತಿಯಲ್ಲಿ ಮಾನವೀಯತೆಯನ್ನು ವ್ಯಕ್ತಪಡಿಸುತ್ತಾರೆ ಎನ್ನುವುದನ್ನು ಅದು ಅವಲಂಬಿಸಿದೆ. ಆದುದರಿಂದ ದಿಲ್ಲಿಯಲ್ಲಿ ನಡೆದ ಘಟನೆಗೆ ಸಂಪೂರ್ಣ ಸಚಿವೆಯೇ ಹೊಣೆಗಾರರು. ತಾನು ಎಸಗಿದ ಕೃತ್ಯಕ್ಕೆ ಅನಾಥ ಮಕ್ಕಳ ಕ್ಷಮೆ ಕೇಳಬೇಕು ಮಾತ್ರವಲ್ಲ, ಅವರ ಕುಟುಂಬಕ್ಕೆ ವೈಯಕ್ತಿಕವಾಗಿ ನೆರವನ್ನು ನೀಡಬೇಕು. ವಿಐಪಿಗಳು, ವಿವಿಐಪಿಗಳು ರಸ್ತೆಯ ಕಾನೂನನ್ನು, ಮಾನವೀಯತೆಯನ್ನು ಉಲ್ಲಂಘಿಸುವುದು ತಮ್ಮ ಹಕ್ಕು ಎಂದು ಭಾವಿಸುವುದು ಇನ್ನಾದರೂ ನಿಲ್ಲಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X