ನಾಳೆಯಿಂದ ದಲಿತ ಆತ್ಮಕಥನಗಳೊಂದಿಗೆ ಸಂವಾದ
ಬೆಂಗಳೂರು, ಮಾ.8: ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹೈವೇ ಕನ್ನಡ ಕಲಾ ಸಂಸ್ಥೆ ವತಿಯಿಂದ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಮಾ.10ರಂದು ದಲಿತ ಆತ್ಮಕಥನಗಳ ಕಥನಕಾರರೊಂದಿಗೆ ಮುಖಾಮುಖಿ ಮತ್ತು ಆಪ್ತ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ದಲಿತ ಲೇಖಕರಾದ ಡಾ.ಎಲ್.ಹನುಮಂತಯ್ಯ, ಡಾ.ಬಾಲಗುರುಮೂರ್ತಿ, ಡಾ.ಸಮತಾ ಬಿ.ದೇಶಮಾನೆ, ಡಾ.ಜಿ.ಸಂಜೀವರಾಯ, ಎ.ಎಂ.ಮದರಿ, ಕುಪ್ಪೆ ನಾಗರಾಜು ಅವರ ಕಥೆಗಳ ಕುರಿತು ಸಂವಾದ ನಡೆಯಲಿದೆ. ಇವರೊಂದಿಗೆ ಲೇಖಕ ಡಾ.ಡೊಮಿನಿಕ್, ಡಾ.ಸಿ.ಜಿ.ಲಕ್ಷ್ಮೀಪತಿ, ಡಾ.ವಡ್ಡಗೆರೆ ನಾಗರಾಜಯ್ಯ ಸಂವಾದ ನಡೆಸಲಿದ್ದಾರೆ.
Next Story





