ವಿಂಡೀಸ್ ವಿಶ್ವಕಪ್ ತಂಡ: ಸಿಮನ್ಸ್ ಬದಲಿಗೆ ಎವಿನ್

ಜಮೈಕಾ, ಮಾ.8: ಹೊಸ ಮುಖ ಎವಿನ್ ಲೂವಿಸ್ ಟ್ವೆಂಟಿ-20 ವಿಶ್ವಕಪ್‌ನಲ್ಲಿ ವೆಸ್ಟ್‌ಇಂಡೀಸ್ ತಂಡದಲ್ಲಿ ಲೆಂಡ್ಲ್ ಸಿಮನ್ಸ್ ಬದಲಿಗೆ ಆಡಲಿದ್ದಾರೆ.
ಹಿರಿಯ ಎಡಗೈ ದಾಂಡಿಗ ಸಿಮನ್ಸ್ ಬೆನ್ನುನೋವಿನಿಂದಾಗಿ ವಿಶ್ವಕಪ್‌ನಿಂದ ಹೊರಗುಳಿದಿದ್ದರು. ಸಿಮನ್ಸ್ ಬದಲಿಗೆ 24ರ ಹರೆಯದ ಲೂವಿಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ ವಿಂಡೀಸ್ ಕ್ರಿಕೆಟ್ ಮಂಡಳಿ ಹೇಳಿದೆ.
ಯುಎಇಯಲ್ಲಿ 2 ವಾರ ತರಬೇತಿ ನಡೆಸಿರುವ 2012ರ ಚಾಂಪಿಯನ್ ವೆಸ್ಟ್‌ಇಂಡೀಸ್ ಸೋಮವಾರ ಕೋಲ್ಕತಾಗೆ ತೆರಳಿದೆ. ಗುರುವಾರ ಭಾರತದ ವಿರುದ್ಧ ಹಾಗೂ ರವಿವಾರ ಆಸ್ಟ್ರೇಲಿಯದ ವಿರುದ್ಧ ಅಭ್ಯಾಸ ಪಂದ್ಯ ಆಡಲಿದೆ.
Next Story





