Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಚುಟುಕು ಸುದ್ದಿಗಳು

ಚುಟುಕು ಸುದ್ದಿಗಳು

ವಾರ್ತಾಭಾರತಿವಾರ್ತಾಭಾರತಿ8 March 2016 11:47 PM IST
share


ಇಂದು ಕಾಸರಗೋಡಿಗೆ ಕೆ.ಎಸ್. ಭಗವಾನ್
ಕಾಸರಗೋಡು, ಮಾ.8: ಖ್ಯಾತ ಸಾಹಿತಿ ಕೆ.ಎಸ್. ಭಗವಾನ್ ಮಾ.9ರಂದು ಕಾಸರಗೋಡಿಗೆ ಆಗಮಿಸುವರು.
ಅಪರಾಹ್ನ 3:30ಕ್ಕೆ ಇ.ಎಂ.ಎಸ್. ಸ್ಮಾರಕ ಗ್ರಂಥಾಲಯ ವತಿಯಿಂದ ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ಪ್ರಜಾಪ್ರಭುತ್ವ ಜಾತ್ಯತೀತ ದೇಶಾಭಿಮಾನ ಎಂಬ ಸ್ನೇಹಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸುವರು.
  ಸ್ವಾಗತ ಸಮಿತಿ ಅಧ್ಯಕ್ಷ ಸಿ.ಎಚ್. ಕುನ್ಚಂಬು ಅಧ್ಯಕ್ಷತೆ ವಹಿಸುವರು. ಸಾಹಿತಿ ಕೆ.ಇ.ಎನ್. ಕುಂಞಾಮದ್, ಪ್ರಾಂತ್ಯ ಗ್ರಂಥಾಲಯ ಸಮಿತಿ ಸದಸ್ಯ ಪಿ.ಅಪ್ಪುಕುಟ್ಟನ್, ಜಿಲ್ಲಾ ಗ್ರಂಥಾಲಯ ಸಮಿತಿ ಕಾರ್ಯದರ್ಶಿ ಪಿ.ವಿ.ಕೆ. ಪನಯಾಲ್ ಮಾತನಾಡಲಿರುವರು.

ಅಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಉಡುಪಿ, ಮಾ.8: ಉಡುಪಿ ನಗರಸಭೆಯ ಅಧ್ಯಕ್ಷ- ಉಪಾಧ್ಯಕ್ಷರ ಅಕಾರ ಅವ ಮಾ.11ಕ್ಕೆ ಮುಕ್ತಾಯ ವಾಗಲಿದ್ದು, ಅವಯ ಮುಗಿಯುವ ಮೊದಲು ನೂತನ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಯಬೇಕಾಗಿದೆ. ಆದರೆ ಆ ಬಗ್ಗೆ ಇನ್ನೂ ಅಸೂಚನೆ ಹೊರಡಿಸದ ಅಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ. ಚುನಾವಣಾ ನಿಯಮಗಳ ಪ್ರಕಾರ ಚುನಾವಣೆಗೆ 7 ದಿನಗಳ ಮುಂಚೆ ಪ್ರತಿಯೊಬ್ಬ ಸದಸ್ಯನಿಗೆ ಕಡ್ಡಾಯವಾಗಿ ನೋಟಿಸ್ ಕಳುಹಿಸಬೇಕು. ಈಗಿರುವ ಅಧ್ಯಕ್ಷ ಉಪಾಧ್ಯಕ್ಷರ ಅವ ಮಾ.11ಕ್ಕೆ ಮುಗಿಯುವುದರಿಂದ 7 ದಿನ ಮೊದಲು ಸದಸ್ಯರಿಗೆ ನೋಟಿಸ್ ನೀಡಿ ಚುನಾವಣೆ ನಡೆಸುವುದು ಅಸಾಧ್ಯ. ಆದುದರಿಂದ ಮಾ.11ರಂದು ಜಿಲ್ಲಾಕಾರಿಗಳು ನಗರಸಭೆಯ ಆಡಳಿತಾಕಾರಿಯಾಗಿ ಅಕಾರ ವಹಿಸುವುದು ಅನಿವಾರ್ಯವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಾ.12-14 ಮಾಪಳಡ್ಕ ಉರೂಸ್
ಜಾಲ್ಸೂರು, ಮಾ.8: ಇಲ್ಲಿಗೆ ಸಮೀಪದ ಇತಿಹಾಸ ಪ್ರಸಿದ್ಧ ಮಾಪಳಡ್ಕ ಮಖಾಂ ಉರೂಸ್ ಕಾರ್ಯಕ್ರಮವು ಮಾ.12ರಿಂದ 14ರತನಕ ನಡೆಯಲಿದೆ. ಮಾ.12ರಂದು ಇಬ್ರಾಹೀಂ ಮದನಿ ಮಂಚಿ ಉಸ್ತಾದ್‌ರ ಪ್ರಾರ್ಥನೆಯೊಂದಿಗೆ ಆರಂಭಗೊಳ್ಳುವ ಕಾರ್ಯಕ್ರಮವನ್ನು ಟಿ.ವಿ. ಉಂಬು ತಂಳ್ ಆದೂರ್ ಉದ್ಘಾಟಿಸುವರು. ನಂತರ ಅಬ್ದುಲ್ಲತ್ೀ ಸಖಾಫಿ ಕಾಂತಪುರಂ ಬಳಗದಿಂದ ಬುರ್ದಾ ಮಜ್ಲಿಸ್ ನಡೆಯಲಿದ್ದು, ಸಿರಾಜುಲ್ ಅನ್ವರ್ ಮಲಬಾರಿ ನಅತೇ ನಡೆಸಿಕೊಡುವರು.
ಮಾ.13ರಂದು ನಡೆಯುವ ದ್ಸಿಕ್ರ್ ನೇರ್ಚೆಯಂದು ಸೈಯದ್ ಬಶೀರಲಿ ಶಿಹಾಬ್ ತಂಳ್ ಪಾಣಕ್ಕಾಡ್ ಪ್ರಾರ್ಥನೆಗೆ ನೇತೃತ್ವ ನೀಡಲಿದ್ದು, ಝಕರಿಯ್ಯ ಅಹ್ಸನಿ ಪ್ರಾಸ್ತಾವಿಕ ಭಾಷಣ ಹಾಗೂ ಮನ್ಸೂರಲಿ ದಾರಿಮಿ ಮುಖ್ಯ ಭಾಷಣ ಮಾಡಲಿದ್ದಾರೆ.
ಮಾ.14ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಸೈಯದ್ ಸುಹೈಲ್ ಅಸ್ಸಖ್ಾ ತಂಳ್ ಮಡಕ್ಕರ ಪ್ರಾರ್ಥನೆ ಮಾಡಲಿದ್ದಾರೆ. ಮುಹಮ್ಮದ್ ತೌಸ್ೀ ಸಅದಿ ಹರೇಕಳ ಹಾಗೂ ರಾಫಿ ಅಹ್ಸನಿ ಕಾಂತಪುರಂ ಮುಖ್ಯ ಭಾಷಣ ಮಾಡಲಿದ್ದಾರೆ.

ಪದಾಕಾರಿಗಳ ಆಯ್ಕೆ
ಕಾರ್ಕಳ, ಮಾ.8: ರಾಜ್ಯ ಸರಕಾರಿ ಎನ್‌ಪಿಎಸ್ ನೌಕರರ ಸಂಘದ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾಗಿ ಎಂ.ಜಿ. ಅಸದಿ, ಕುಮುದಾವತಿ, ಪ್ರಧಾನ ಕಾರ್ಯದರ್ಶಿಯಾಗಿ ಆನಂದ ಬಿ., ಜೊತೆ ಕಾರ್ಯದರ್ಶಿಯಾಗಿ ಅಲ್ಪೆನ್, ಲವೀನಾ, ಕೋಶಾಕಾರಿಯಾಗಿ ರಾಘವೇಂದ್ರ ದೇವಾಡಿಗ, ಸಂಘಟನಾ ಕಾರ್ಯದರ್ಶಿಯಾಗಿ ಶಿವಾನಂದ ಬಿ., ಆರತಿ, ಆಂತರಿಕ ಲೆಕ್ಕ ಪರಿಶೋಧಕರಾಗಿ ಪ್ರಕಾಶ್, ಸಂಚಾಲಕರಾಗಿ ವೀಣಾ ಶೆಟ್ಟಿ, ಸದಾಶಿವ ಬಾಯರಿ, ಗೌರವ ಸಲಹೆಗಾರರಾಗಿ ಜೋಕಿಂ ಮೈಕಲ್ ಎಚ್.ಪಿಂಟೊ, ವಸಂತ್ ಎಂ., ಇತರ ಪದಾಕಾರಿಗಳಾಗಿ ರಾಜಾರಾಮ್ ಶೆಟ್ಟಿ, ಸತೀಶ್, ವಿದ್ಯಾ ಶೆಟ್ಟಿ, ಸಮೀವುಲ್ಲಾ, ಲೋಕೇಶ್ ಆಯ್ಕೆಯಾಗಿದ್ದಾರೆ.

ಇಂದು ವಿಶ್ವ ಮಹಿಳಾ ದಿನಾಚರಣೆ
ಉಡುಪಿ, ಮಾ.8: ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರ, ಉಡುಪಿ ವಕೀಲರ ಸಂಘ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ‘ವಿಶ್ವ ಮಹಿಳಾ ದಿನಾಚರಣೆ’ ಕಾರ್ಯಕ್ರಮ ಮಾ.9ರಂದು ಬೆಳಗ್ಗೆ 9:45 ಗಂಟೆಗೆ ಸ್ಟೇಟ್ ಹೋಮ್ ನಿಟ್ಟೂರಿನಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಪ್ರಧಾನ ಹಿರಿಯ ಸಿವಿಲ್ ನ್ಯಾಯಾೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಕಾರದ ಸದಸ್ಯ ಕಾರ್ಯದರ್ಶಿ ನಾಗಜ್ಯೋತಿ ಕೆ.ಎ. ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗ್ರೇಸಿ ಎಲ್.ಗೊನ್ಸಾಲ್ವಿಸ್ ವಹಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಸದಸ್ಯೆ ವನಿತಾ ಎನ್ ತೋರ್ವಿ ಉಪಸ್ಥಿತರಿರುವರು. ವಕೀಲ ಎನ್.ಕೆ.ಆಚಾರ್ ‘ಮಹಿಳೆಯರ ಹಕ್ಕುಗಳು’ ವಿಷಯದ ಕುರಿತು ಉಪನ್ಯಾಸ ನೀಡುವರು.

ಇಂದು ಅಹವಾಲು ಸ್ವೀಕಾರ
ಉಡುಪಿ, ಮಾ.8: ಶಾಸಕ ಪ್ರಮೋದ್ ಮಧ್ವರಾಜ್ ಮಾ.9ರಂದು ಅಪರಾಹ್ನ 2:30ರಿಂದ 5 ಗಂಟೆಯವರೆಗೆ ಉಡುಪಿ ಶಾಸಕರ ಕಚೇರಿಯಲ್ಲಿ ಅಹವಾಲು ಸ್ವೀಕರಿಸಲಿದ್ದಾರೆ ಎಂದು ಶಾಸಕರ ಕಚೇರಿ ಪ್ರಕಟನೆ ತಿಳಿಸಿದೆ.

ರಾಜ್ಯಮಟ್ಟದ ಕನ್ನಡ-ತುಳು ಕಿರುಚಿತ್ರ ಸ್ಪರ್ಧೆ
ಉಡುಪಿ, ಮಾ.8: ಕಟಪಾಡಿಯ ದಿಶಾ ಕಮ್ಯೂನಿಕೇಶನ್ಸ್ ಆಶ್ರಯ ದಲ್ಲಿ ನಡೆಯುವ 2ನೆ ಕರಾವಳಿ ಕಿರು ಚಿತ್ರೋತ್ಸವದ ಅಂಗವಾಗಿ ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಕರ್ನಾಟಕ-ಕರಾವಳಿಯ ಉದಯೋನ್ಮುಖ ಕಿರುಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರು ಸಾಮಾಜಿಕ ಸಂದೇಶವನ್ನು ಸಾರುವ 30ನಿಮಿಷ ಅವಯ ಕನ್ನಡ ಮತ್ತು ತುಳು ಕಿರು ಚಿತ್ರಗಳನ್ನು ರಾಜ್ಯಮಟ್ಟದ ಈ ಸ್ಪರ್ಧೆಗೆ ಕಳುಹಿಸಿ ಕೊಡಬಹುದು. ಅತ್ಯುತ್ತಮ ಕಿರುಚಿತ್ರಗಳಿಗೆ ನಗದು ಸಹಿತ ಪ್ರಶಸ್ತಿ ಪತ್ರ, ಪಾರಿತೋಷಕಗಳನ್ನು ನೀಡಲಾಗುವುದು. ಆಸಕ್ತರು ಅರ್ಜಿ ಸಲ್ಲಿಸಲು ಮಾ.20 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ ಪ್ರಕಾಶ್ ಸುವರ್ಣ ಕಟಪಾಡಿ ಮೊ.: 9964019229) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

ಅನಂತಕುಮಾರ್ ಹೆಗಡೆ ವಜಾಕ್ಕೆ ಆಗ್ರಹ
ಪಡುಬಿದ್ರೆ, ಮಾ.8: ಇಸ್ಲಾಮ್ ಧರ್ಮದ ವಿರುದ್ಧ ಪ್ರಚೋದನಾ ಕಾರಿ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮತೀಯ ಘರ್ಷಣೆಗೆ ಕಾರಣವಾಗಬಹುದಾದ ಹೇಳಿಕೆ ನೀಡಿರುವ ಕೆನರಾ ಕ್ಷೇತ್ರದ ಸಂಸದ ಅನಂತ ಕುಮಾರ್ ಹೆಗಡೆ ಅವರನ್ನು ಸಂಸದನ ಸ್ಥಾನ ದಿಂದ ವಜಾಗೊಳಿಸುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಎಂ.ಪಿ.ಮೊಯ್ದಿನಬ್ಬ ಆಗ್ರಹಿಸಿ್ದಾರೆ.

ಪದಾಕಾರಿಗಳ ಆಯ್ಕೆ
ಬಂಟ್ವಾಳ, ಮಾ.8: ಸುಜೀರ್ ಮಲ್ಲಿ ‘ಹೈದ್ರೋಸ್ ಜುಮಾ ಮಸೀದಿ’ಯ ಗೌರವಾಧ್ಯಕ್ಷರಾಗಿ ವೌಲಾನ ಅಬ್ದುರ್ರಝಾಕ್ ಹಾಜಿ ಮಲೇಶಿಯಾ, ಅಧ್ಯಕ್ಷರಾಗಿ ಅಬ್ದುಸ್ಸಲಾಂ ಮಲ್ಲಿ, ಉಪಾಧ್ಯಕ್ಷರಾಗಿ ಎಸ್.ಇಬ್ರಾಹೀಂ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಮುಸ್ತಾ, ಕೋಶಾಕಾರಿಯಾಗಿ ಬಶೀರ್, ಜೊತೆ ಕಾರ್ಯದರ್ಶಿಯಾಗಿ ಸಿದ್ದೀಕ್, ಸಲಹಾ ಸಮಿತಿ ಸದಸ್ಯರಾಗಿ ಮಾಹಿನ್ ದಾರಿಮಿ ಪಾತೂರು, ಚೆಂಗಳಂ ಅಬ್ದುಲ್ ೈಝಿ, ಸದಸ್ಯರಾಗಿ ಎನ್.ಹನ್ೀ, ಎನ್.ರಝಾಕ್, ರಹೀಂ, ರಿಲ್ವಾನ್, ಅಶ್ರ್ರನ್ನು ಆಯ್ಕೆಯಾಗಿದ್ದಾರೆ.

ಮಾ.11ರಿಂದ ‘ನಮ್ಮ ಅಂಗಡಿ’
ಮಣಿಪಾಲ, ಮಾ.8: ಮಣಿಪಾಲದ ಸ್ಕೂಲ್ ಆ್ ಕಮ್ಯು ನಿಕೇಷನ್ (ಎಸ್‌ಒಸಿ)ನ ವಾರ್ಷಿಕ ಪ್ರದರ್ಶನ ಹಾಗೂ ಮಾರಾಟ ಮೇಳ ‘ನಮ್ಮ ಅಂಗಡಿ’ ಮಾ.11ರಿಂದ 13ರವರೆಗೆ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ ಎಂದು ಎಸ್‌ಒಸಿಯ ನಿರ್ದೇಶಕಿ ಡಾ.ನಂದಿನಿ ಲಕ್ಷ್ಮೀಕಾಂತ ತಿಳಿಸಿದ್ದಾರೆ. ಕುಂದಾಪುರ ತಾಲೂಕಿನ ಗ್ರಾಮೀಣ ಪ್ರದೇಶವಾದ ಕನ್ಯಾನ ದಲ್ಲಿರುವ ‘ನಮ್ಮ ಭೂಮಿ’ಯಲ್ಲಿ ತಯಾರಿಸಲಾದ ವಿವಿಧ ಉತ್ಪನ್ನಗಳು, ಕರಕುಶಲ ವಸ್ತುಗಳು, ಕೈಮಗ್ಗದ ಬಟ್ಟೆಗಳು ಹಾಗೂ ಪರಿಸರ ಸ್ನೇಹಿ ಉತ್ಪನ್ನಗಳ ವೈವಿಧ್ಯಮಯ ಪ್ರದರ್ಶನ ಹಾಗೂ ಮಾರಾಟ ಮೇಳ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ‘ನಮ್ಮ ಅಂಗಡಿ’ಯನ್ನು ಮಾ.11ರಂದು ಬೆಳಗ್ಗೆ 9:30 ಗಂಟೆಗೆ ಮಣಿಪಾಲ ವಿವಿಯ ಡಾ.ಲೀನಾ ಅಶೋಕ್ ಉದ್ಘಾಟಿಸುವರು. ಈ ಸಂದರ್ಭ ಸಿಡಬ್ಲುಸಿಯ ಕಾರ್ಯನಿರ್ವಾಹಕ ನಿರ್ದೇಶಕ ದಾಮೋದರ ಆಚಾರ್ಯ ಉಪಸ್ಥಿತರಿರುವರು ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಸ್‌ಒಸಿಯ ಡಾ.ಪದ್ಮಕುಮಾರ್, ಪ್ರಾಧ್ಯಾಪಕಿ ಸೌಪರ್ಣಿಕಾ ಪವನ್, ನಮ್ಮ ಭೂಮಿಯ ಶಿವಾನಂದ, ವಿದ್ಯಾರ್ಥಿ ಪ್ರತಿನಿ ಗಳಾದ ಸ್ಪರ್ಶ್ ಶ್ರೀವಾತ್ಸವ್, ಸುನೀತಾ, ಶ್ವೇತಾ ಮೊಹಂತಿ ಉಪಸ್ಥಿತರಿದ್ದರು.

ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಕಾರಿಗಳು
ಉಡುಪಿ, ಮಾ.8: ಉಡುಪಿ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ 7ನೆ ಅವ ಶೀಘ್ರವೇ ಮುಕ್ತಾಯಗೊಳ್ಳಲಿದ್ದು, ಅಷ್ಟರೊಳಗೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಚುನಾವಣೆಯಲ್ಲಿ ಆಯ್ಕೆಯಾಗದೇ ಇದ್ದಲ್ಲಿ ಈ ಕೆಳಗಿನ ಅಕಾರಿಗಳನ್ನು ಆಡಳಿತಾಕಾರಿಗಳಾಗಿ ನೇಮಕ ಮಾಡಿ ನಿರ್ದೇಶನ ಹೊರಡಿಸಲಾಗಿದೆ.ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಹೊರಡಿಸಿದ್ದರೂ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆದು ಆಯ್ಕೆಯಾಗಲು ಕಾಲಾವಕಾಶ ಬೇಕಾಗಿರುವುದರಿಂದ ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಸಾಲಿಗ್ರಾಮ ನಗರ ಸ್ಥಳೀಯ ಸಂಸ್ಥೆಗಳಿಗೆ ನಮೂದಿಸಿದ ದಿನದಿಂದ ಆಡಳಿತಾಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಉಡುಪಿ ನಗರಸಭೆ: ಈಗಿನ ಅಧ್ಯಕ್ಷರ ಅವ ಮುಗಿಯುವ ದಿನ ಮಾ.11. ನೇಮಕಗೊಂಡ ಆಡಳಿತಾಕಾರಿ- ಉಡುಪಿ ಜಿಲ್ಲಾಕಾರಿ. ಅಕಾರ ಸ್ವೀಕರಿಸಬೇಕಾದ ದಿನ ಮಾ.11(ಮಾ.12 ರಜಾ ದಿನ). ಕುಂದಾಪುರ ಪುರಸಭೆ: ಅಧ್ಯಕ್ಷರ ಅವ ಮುಕ್ತಾಯ ಮಾ.19, ಆಡಳಿತಾಕಾರಿ- ಕುಂದಾಪುರ ಸಹಾಯಕ ಕಮಿಷನರ್, ಅಕಾರ ಸ್ವೀಕರಿಸ ಬೇಕಾದ ದಿನ ಮಾ.19(ಮಾ.20 ರಜಾ ದಿನ). ಕಾರ್ಕಳ ಪುರಸಭೆ: ಅಧ್ಯಕ್ಷರ ಅವ ಮುಕ್ತಾಯ ಮಾ.15., ಆಡಳಿತಾಕಾರಿ -ಕುಂದಾಪುರ ಸಹಾಯಕ ಕಮಿಷನರ್., ಅಕಾರ ಸ್ವೀಕರಿಸಬೇಕಾದ ದಿನ ಮಾ.16. ಸಾಲಿಗ್ರಾಮ ಪಟ್ಟಣ ಪಂಚಾಯತ್: ಅಧ್ಯಕ್ಷರ ಅವ ಮುಕ್ತಾಯ ಮಾ.16., ಆಡಳಿತಾಕಾರಿ-ಉಡುಪಿ ತಹಶೀಲ್ದಾರ್., ಅಕಾರ ಸ್ವೀಕರಿಸಬೇಕಾದ ದಿನ ಮಾ.17. 

ಮಂಗಳೂರು-ಮೂಡುಬಿದಿರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ‘ಸಂತ್ರಸ್ತರ ಸಭೆ ಕರೆಯದಿದ್ದಲ್ಲಿ ರಾಸ್ತಾರೋಕೋ ಚಳವಳಿ’
ಮಂಗಳೂರು, ಮಾ.8: ಮಂಗಳೂರು-ಮೂಡುಬಿದಿರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಹದಿನೈದು ದಿನಗಳೊಳಗೆ ಭೂಮಿ ಕಳೆದುಕೊಳ್ಳುವ ಸಂತ್ರಸ್ತರ ಸಭೆ ಕರೆಯದಿದ್ದಲ್ಲಿ ಭೂಮಾಲಕರ ಸಮಿತಿಯ ನೇತೃತ್ವದಲ್ಲಿ ರಾಸ್ತಾರೋಕೋ ಚಳವಳಿ ಯನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಮನಪಾ ಸದಸ್ಯೆ ಮರಿಯಮ್ಮ ಥೋಮಸ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆದ್ದಾರಿ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಹೆದ್ದಾರಿಗಾಗಿ ಭೂಮಿ ಯನ್ನು ಕಳೆದುಕೊಳ್ಳುವವರಿಗೆ ಮಾಹಿತಿ ನೀಡದೆ ಸರ್ವೇ ನಡೆಸಲಾಗಿದೆ. ಕುಲಶೇಖರ ಕೈಕಂಬದಿಂದ ಗುರುಪುರ ಕೈಕಂಬದವರೆಗೆ ಹೆದ್ದಾರಿ ಗಾಗಿ 45 ಮೀ. ಗುರುತಿಸಲಾಗಿದೆ. ಆದರೆ ಮೂಡು ಬಿದಿರೆ ಯಿಂದ ಕಾರ್ಕಳದಲ್ಲಿ ಹೆದ್ದಾರಿಗೆ 30 ಮೀ. ಮಾತ್ರ ಗುರುತಿಸಲಾಗಿದೆ. ಒಂದೆ ಹೆದ್ದಾರಿ ಯಲ್ಲಿ ಎರಡು ರೀತಿಯಲ್ಲಿ ಭೂಸ್ವಾೀನ ಮಾಡ ಲಾಗುತ್ತಿದ್ದು, ಕುಲಶೇಖರ ಕೈಕಂಬದಿಂದ ಗುರುಪುರ ಕೈಕಂಬದವರೆಗೂ 30 ಮೀಟರ್‌ನಲ್ಲಿ ಮಾತ್ರ ಹೆದ್ದಾರಿ ನಿರ್ಮಾಣವಾಗಬೇಕು ಎಂದು ಹೇಳಿದರು.
ಯೋಜನೆಯಿಂದ 250ಕ್ಕೂ ಅಕ ಮನೆ, ಶಾಲೆ, ದೇವಸ್ಥಾನ, ಮಸೀದಿ, ಚರ್ಚ್, ಭಜನಾ ಮಂದಿರ, ಗೇಮ್ಸ್ ಕ್ಲಬ್ ಹಾನಿಗೊಳಗಾಗಲಿದ್ದು, ಪರಿಷ್ಕರಣೆ ಮಾಡಿದರೆ ಅಪಾರ ಹಾನಿಯನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು.  ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತರಾದ ಸಿಸ್ಟರ್ ನೋರಿಯಾ, ಪ್ರಸನ್ನಕುಮಾರ್, ಮನೋಹರ್, ವಿಶ್ವಜಿತ್, ಮುನಾವರ್ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X