ರಾಜೀವ್ ಹಂತಕಿ ನಳಿನಿಗೆ 24 ಗಂಟೆಗಳ ಪೆರೋಲ್
ಚೆನ್ನೈ,ಮಾ.8: ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹಂತಕಿ ನಳಿನಿ ಶ್ರೀಹರನ್‌ಗೆ ತನ್ನ ತಂದೆಯ ಉತ್ತರ ಕ್ರಿಯೆಗಳಲ್ಲಿ ಪಾಲ್ಗೊಳ್ಳಲು ಮಂಗಳವಾರ ಸಂಜೆ ನಾಲ್ಕು ಗಂಟೆಯಿಂದ ಬುಧವಾರ ಸಂಜೆ ನಾಲ್ಕು ಗಂಟೆಯವರೆಗೆ ಒಂದು ದಿನದ ಪೆರೋಲ್‌ನ್ನು ಚೆನ್ನೈ ಉಚ್ಚ ನ್ಯಾಯಾಲಯವು ಮಂಜೂರು ಮಾಡಿದೆ. ನಳಿನಿಯ ತಂದೆ ಫೆ.23ರಂದು ನಿಧನರಾಗಿದ್ದರು. ನ್ಯಾಯಾಲಯವು 12 ಗಂಟೆಗಳ ಪೆರೋಲ್ ನೀಡಿದ ಬಳಿಕ ಮರುದಿನ ಆಕೆ ತಂದೆಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಳು.
ನಳಿನಿ ಮೂರು ದಿನಗಳ ಪೆರೋಲ್‌ಗಾಗಿ ಕೋರಿಕೊಂಡಿದ್ದಳಾದರೂ ನ್ಯಾಯಾಲಯವು ಒಂದು ದಿನದ ಪೆರೋಲ್‌ನ್ನು ಮಂಜೂರು ಮಾಡಿದೆ. ಹೀಗಾಗಿ ಆಕೆ ನಾಳೆ ಜೈಲಿಗೆ ಮರಳಬೇಕಾಗಿದೆ.
Next Story





